ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್-2ಗೆ ಬಿಎಂಟಿಸಿ ಬಸ್ ಸೇವೆ ಆರಂಭ, ದರ ಮಾಹಿತಿ ಇಲ್ಲಿದೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ಬಿಎಂಟಿಸಿ ಬಸ್ ಸೇವೆ ಆರಂಭಿಸಿದೆ. ಇತ್ತೀಚೆಗೆ ವಿಮಾಣ ನಿಲ್ದಾಣ ಟರ್ಮಿನಲ್-2ನಲ್ಲಿ ವಿಮಾನ ಸೇವೆ ಆರಂಭಗೊಂಡಿದೆ.
ಬೆಂಗಳೂರು (ಜು.3): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ಬಿಎಂಟಿಸಿ ಜುಲೈ 1ರಿಂದ ಬಸ್ ಸೇವೆ ಆರಂಭಿಸಿದೆ. ಇತ್ತೀಚೆಗೆ ವಿಮಾಣ ನಿಲ್ದಾಣ ಟರ್ಮಿನಲ್-2ನಲ್ಲಿ ವಿಮಾನ ಸೇವೆ ಆರಂಭಗೊಂಡಿದೆ. ಹೀಗಾಗಿ, ಬೆಂಗಳೂರಿನಿಂದ ತೆರಳುವ ಪ್ರಯಾಣಿಕರ ಅನುಕೂಲಕ್ಕೆ ಇದೀಗ ಬಿಎಂಟಿಸಿ ಬಸ್ ಸೇವೆ ಆರಂಭಿಸಿದೆ.
ಜೂನ್ 30ರವರೆಗೆ ಪ್ರಯಾಣಿಕರ ಕೋರಿಕೆಯ ಮೇರೆಗೆ ಟರ್ಮಿಲ್-1ಗೆ ಬಿಎಂಟಿಸಿ ಬಸ್ ಸೇವೆ ನೀಡುತ್ತಿದ್ದವು. ಜುಲೈ 1ರಿಂದ ಬೆಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಎಲ್ಲಾ ಬಸ್‌ಗಳು ಕಡ್ಡಾಯವಾಗಿ ಟರ್ಮಿನಲ್-2ಗೆ ಹೋಗಬೇಕೆಂದು ಬಿಎಂಟಿಸಿ ಸೂಚನೆ ನೀಡಿದೆ.
ಬೆಂಗ್ಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಹೆಬ್ಬಾಳ ಫ್ಲೈಓವರ್‌ಗೆ 3 ಹೊಸ ಲೂಪ್..!
ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ನಗರದ ವಿವಿಧ ಭಾಗದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ 950 ಟ್ರಿಪ್ ಬಿಎಂಟಿಸಿಯ ವೋಲ್ವೋ ಬಸ್‌ಗಳು ಸಂಚಾರ ನಡೆಸುತ್ತವೆ. ಪ್ರತಿ ದಿನ ಸರಾಸರಿ 6,000-7,000 ಪ್ರಯಾಣಿಕರು ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಪ್ರಯಾಣಿಸುತ್ತಾರೆ. ಟರ್ಮಿನಲ್-1 ಮತ್ತು ಟಮಿನಲ್-2ಗೆ ಬಸ್ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಟರ್ಮಿನಲ್-1ಕ್ಕೆ ತೆಗೆದುಕೊಳ್ಳುವ ದರವನ್ನೇ ಟಮಿನಲ್-2ಗೂ ಪಡೆಯಲಾಗುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ಟರ್ಮಿನಲ್‌ಗೆ ಸೇವೆಯ ವಿಸ್ತರಣೆಯನ್ನು ನಾಗರಿಕರು ಸ್ವಾಗತಿಸಿದ್ದಾರೆ. ಕ್ಯಾಬ್‌ಗಳಿಗೆ ಹೋಲಿಸಿದರೆ, ಬಿಎಂಟಿಸಿಯ ವಾಯು ವಜ್ರ ಅಗ್ಗವಾಗಿದೆ. ಸಿರ್ಸಿ ಸರ್ಕಲ್‌ನಲ್ಲಿರುವ ಮನೆಯಿಂದ ವಿಮಾನ ನಿಲ್ದಾಣವನ್ನು ತಲುಪಲು, ದರವು ರೂ 1,000 ಕ್ಕಿಂತ ಹೆಚ್ಚಿದೆ ಮತ್ತು ಇದು ಬೇಡಿಕೆಗೆ ಅನುಗುಣವಾಗಿ ಏರಿಕೆಯಾಗುತ್ತದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಆ.11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಶುರು: ಸಂಸದ ಬಿ.ವೈ.ರಾಘವೇಂದ್ರ
ಕ್ಯಾಬ್‌ನ ಶುಲ್ಕದ ನಾಲ್ಕನೇ ಒಂದು ಭಾಗದ ವೆಚ್ಚದಲ್ಲಿ ನಾನು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದೇನೆ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮೂರು ವರ್ಷಗಳಿಂದ ಮನೆಗೆ ಹಿಂತಿರುಗುತ್ತಿದ್ದೇನೆ. ಟರ್ಮಿನಲ್ 1ರ ಜೊತೆಗೆ ಟರ್ಮಿನಲ್ 2ರಿಂದ ಬಿಎಂಟಿಸಿ ಕಾರ್ಯಾಚರಣೆ ಆರಂಭಿಸಿರುವುದು ಸಂತಸ ತಂದಿದೆ ಎಂದು ಪ್ರಯಾಣಿಕ ಅರ್ಜುನ್ ಬಿ. ಸಂತಸ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಟರ್ಮಿನಲ್ 2 ರಿಂದ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಪ್ರತ್ಯೇಕ ಬಸ್‌ಗಳನ್ನು ನಿರ್ವಹಿಸುವ ಬದಲು, ಬಸ್ ನಿಗಮವು ಟರ್ಮಿನಲ್ 2 ರಿಂದ ಟರ್ಮಿನಲ್ 1 ವರೆಗೆ ಶಟಲ್ ಸೇವೆಗಳನ್ನು ನಡೆಸಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ.