Asianet Suvarna News Asianet Suvarna News

Bengaluru: ಬಿಎಂಟಿಸಿ ಬಸ್ ಟೈರ್‌ ಬ್ಲಾಸ್ಟ್‌ ಪ್ರಯಾಣಿಕನ ಕಾಲಿಗೆ ಗಾಯ

ನಗರದಲ್ಲಿ ಬಿಎಂಟಿಸಿ ಬಸ್‌ನ ಟೈರ್ ಬ್ಲಾಸ್ಟ್‌ ಆಗಿದ್ದು, ಬಸ್‌ನೊಳಗಿದ್ದ ಪ್ರಯಾಣಿಕನ ಕಾಲಿಗೆ ಗಾಯವಾಗಿದೆ. ಟೈರ್‌ ಬ್ಲಾಸ್ಟ್‌ ಆದ ಕೂಡಲೇ ಗಾಲಿಯ ಮೇಲಿದ್ದ ಕಬ್ಬಿಣದ ತಗಡು ಪ್ರಯಾಣಿಕನ ಕಾಲಿಗೆ ತಾಗಿದ್ದರಿಂದ ಗಾಯವಾಗಿದೆ ಎಂದು ಬಸ್‌ನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

BMTC bus tire blast injures leg of passenger inside sat
Author
First Published Dec 5, 2022, 5:35 PM IST

ಬೆಂಗಳೂರು (ಡಿ.5): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಯಲ್ಲಿ ಚಲುಸುತ್ತಿದ್ದ ಬಿಎಂಟಿಸಿ ಬಸ್‌ನ ಟೈರ್ ಬ್ಲಾಸ್ಟ್‌ ಆಗಿದ್ದು, ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನ ಕಾಲಿಗೆ ಗಾಯವಾಗಿದೆ. ಟೈರ್‌ ಬ್ಲಾಸ್ಟ್‌ ಆದ ಕೂಡಲೇ ಗಾಲಿಯ ಮೇಲಿದ್ದ ಕಬ್ಬಿಣದ ತಗಡು ಕಾಲಿಗೆ ತಾಗಿದ್ದು, ಗಾಯಗೊಳ್ಳಲು ಕಾರಣವಾಗಿದೆ ಎಂದು ಬಸ್‌ನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬಿಎಂಟಿಸಿ ಬಸ್‌ಗಳಿಂದ ಎಲ್ಲೆಡೆ ಟ್ರಾಫಿಕ್‌ ಉಂಟಾಗುತ್ತಿದೆ ಎಂಬುದು ಸಾರ್ವಜನಿಕರ ದೂರು ಆಗಿತ್ತು. ಆದರೆ, ಸರ್ಕಾರದ ತೀರ್ಮಾನ ಎಲ್ಲರೂ ಸಾರ್ವಜನಿಕ ಸಾರಿಗೆಗಳನ್ನು ಬಳಕೆ ಮಾಡಿದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳುತ್ತದೆ. ಆದರೆ, ಈ ಸಾರ್ವಜನಿಕ ಸಾರಿಗೆಗಳಲ್ಲಿ ಬೆಂಗಳೂರಿನ ಪ್ರಮುಖ ಸಾರಿಗೆಯಾದ ಬಿಎಂಟಿಸಿ ಬಸ್‌ಗಳಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ. ಇಂದು ಕೂಡ ಅಂತಹದ್ದೇ ಒಂದು ಘಟನೆ ಈಗ ಬಿಎಂಟಿಸಿ ಬಸ್‌ನಲ್ಲಿ ನಡೆಸಿದೆ. ಈ ಘಟನೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕ ಕಾಲಿಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರುವಂತಾಗಿದೆ. 

ಬೆಂಗಳೂರು: ಸ್ಕೂಟರ್‌ಗೆ ಬಿಎಂಟಿಸಿ ಬಸ್‌ ಡಿಕ್ಕಿ: ಬಾಲಕಿ ದುರ್ಮರಣ

ಗಾಲಿ ಮೇಲಿನ ಸೀಟಿನಿಂದ ಗಾಯ: ಸಾಮಾನ್ಯವಾಗಿ ಬಸ್‌ನಲ್ಲಿ ಗಾಲಿಗಳು ಇರುವ ಹೆಚ್ಚು ಕುಲುಕುತ್ತದೆ ಎಂದು ಆ ಸ್ಥಳದಲ್ಲಿರುವ ಸೀಟ್‌ಗಳಲ್ಲಿ ಕೂರಲು ಹಿಂಜರಿಯುತ್ತಾರೆ. ಇನ್ನು ಬೇರೆಡೆ ಸೀಟುಗಳು ಇಲ್ಲದಿದ್ದರೆ ಅನಿವಾರ್ಯವಾಗಿ ಹಿಂಬದಿಯ ಅಥವಾ ಗಾಲಿಯ ಮೇಲಿನ ಸೀಟುಗಳಲ್ಲಿ ಕೂರುತ್ತಾರೆ. ಹೀಗೆ ಬಿಎಂಟಿಸಿ ಬಸ್‌ನಲ್ಲಿ ಗಾಲಿಯ ಮೇಲ್ಭಾಗದ ಸೀಟಿನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನ ಕಾಲಿಗೆ ಈಗ ಗಾಯವಾಗಿದೆ. ಇದಕ್ಕೆ ಕಾರಣವಾಗಿದ್ದು, ಬಸ್‌ನ ಟೈರ್‌ ಬ್ಲಾಸ್ಟ್‌ ಆಗಿದ್ದು, ಎನ್ನುವುದು ಕೂಡ ಆಶ್ಚರ್ಯವಾಗಿದೆ. ರಸ್ತೆಯಲ್ಲಿ ಬಸ್‌ ಚಲಿಸುವಾಗ ಟೈರ್ ಬ್ಲಾಸ್ಟ್‌ ಆಗಿದ್ದು, ಬಸ್ ಸೀಟ್ ಕೆಳಗಿರೋ ಕಬ್ಬಿಣದ ತಗಡು ಕಾಲಿಗೆ ತಾಕಿದ್ದು, ಗಾಯವಾಗಿ ರಕ್ತ ಸುರಿಯಲಾರಂಭಿಸಿದೆ.

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ: ಬಸ್ ಹರಿದು ಬೈಕ್ ಸವಾರ ಸಾವು

ಆಸ್ಪತ್ರೆಗೆ ಗಾಯಾಳು ರವಾನೆ: ಆರ್.ಆರ್.ನಗರದಿಂದ ಯಲಹಂಕ  ಮಾರ್ಗದ ಬಸ್ ವಿದ್ಯಾರಣ್ಯಪುರದ ದ್ವಾರಬಾಗಿಲಿನ ಬಳಿ ಹೋಗುವಾಗ ಬಸ್‌ನ ಟೈರ್ ಬ್ಲಾಸ್ಟ್‌ ಆಗಿ ಪ್ರಯಾಣಿಕನ ಕಾಲಿಗೆ ಗಾಯವಾಗಿರುವ ಘಟನೆ ನಡೆದಿದೆ. ತಕ್ಷಣವೇ ಗಾಯಾಳು ಪ್ರಯಾಣಿಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಪ್ರಕರಣದ ಕುರಿತು ಜಾಲಹಳ್ಳಿ ಸಂಚಾರಿ ಠಾಣೆಯ ಪೊಲೀಸರು ಹೆಚಚಿನ ತಪಾಸಣೆ ನಡೆಸಿದ್ದಾರೆ. ಇನ್ನು ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ದೊಡ್ಡ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿ ತಿಳಿಸಿದ್ದಾರೆ.

ಕಳೆದ ತಿಂಗಳು ಬಾಲಕಿ ಸಾವು: 

ಕಳೆದ ತಿಂಗಳು ನವೆಂಬರ್ ೨೩ ರ ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಶಾಲೆಗೆ ಬಿಡಲು ಮಕ್ಕಳನ್ನು ಕರೆದುಕೊಂಡು ಬಾಲಕಿಯ ತಾಯಿ ಪ್ರಿಯದರ್ಶಿನಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಅದೇ ವೇಳೆ ಹೊಸಕೋಟೆಗೆ ತೆರಳುತತಿದ್ದ ಬಿಎಂಟಿಸಿ ಬಸ್ ಟಿ.ಸಿ.ಪಾಳ್ಯ ಹತ್ತಿರ ಸ್ಕೂಟರ್‌ಗೆ ಬಸ್‌ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಕೆಳಗೆ ಬಿದ್ದ ತಾಯಿ ಹಾಗೂ ಮಕ್ಕಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಲಯಶ್ರೀ ಕೊನೆಯುಸಿರೆಳೆದಿದ್ದಾಳೆ. ಗಾಯಾಳು ತಾಯಿ-ಮಗ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಕೆ.ಆರ್‌.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios