IPL 2023: ಆರ್‌ಸಿಬಿ ಪಂದ್ಯ ಹಿನ್ನೆಲೆ ಬಿಎಂಟಿಸಿ ಹಾಗೂ ಮೆಟ್ರೋ ಅವಧಿ ವಿಸ್ತರಣೆ
ಐದು ದಿನ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯಲಿದ್ದು, ಕ್ರಿಕೆಟ್ ಹಿನ್ನಲೆ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಏ.1); IPL ಕ್ರಿಕೆಟ್ ಮ್ಯಾಚ್ ಗೆ ಕ್ಷಣಗಣನೆ ಶುರುವಾಗಿದೆ. ಐಪಿಎಲ್ ಮ್ಯಾಚ್ ವೀಕ್ಷಿಸಲು ಕ್ರಿಕೆಟ್ ಪ್ರಿಯರು ಕಾದು ಕುಳಿತಿದ್ದಾರೆ. ಏ.2 ಸೇರಿದಂತೆ 10, 17, 26 ಏಪ್ರಿಲ್, 2023 ಮತ್ತು ಮೇ 21 ರಂದು ಬೆಂಗಳೂರಿನಲ್ಲಿ ಐಪಿಎಲ್ ನಡೆಯಲಿದೆ. ಐದು ದಿನ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯಲಿದ್ದು ಈಗಾಗಲೆ ಕ್ರಿಕೆಟ್ ಪ್ರೇಮಿಗಳು ಮುಂಗಡ ಟಿಕೆಟ್ ಪಡೆದು ಕಾದು ಕುಳಿತಿದ್ದಾರೆ. ಕ್ರಿಕೆಟ್ ಹಿನ್ನಲೆ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. IPL ಮುಗಿಸಿ ಹೋಗುವ ಜನರಿಗೆ ಬಸ್ ಹಾಗೂ ಮೆಟ್ರೋ ವ್ಯವಸ್ಥೆ ಕಲ್ಪಿಸಿದೆ.
ಮೆಟ್ರೋ ಸೇವೆ ಎಷ್ಟರವರೆಗೆ ಲಭ್ಯವಿರಲಿದೆ?
ಇಂಡಿಯನ್ ಪ್ರೀಮಿಯರ್ ಲೀಗ್ 2023 ರಾತ್ರಿ ಕ್ರಿಕೆಟ್ ಪಂದ್ಯಾವಳಿಗಳ ಪ್ರಯುಕ್ತ ಬೆಂಗಳೂರು ಮೆಟ್ರೋ ರೈಲು ನಿಗಮವು ಬೈಯಪ್ಪನಹಳ್ಳಿ- ಕೆಂಗೇರಿ ಮತ್ತು ನಾಗಸಂದ್ರ - ರೇಷ್ಮೆ ಸಂಸ್ಥೆ ಮಾರ್ಗಗಳಲ್ಲಿ ಮರುದಿನ ಮುಂಜಾನೆಯ ವರೆಗೆ ಸಂಚರಿಸಲಿದೆ, ಟರ್ಮಿನಲ್ ನಿಲ್ದಾಣಗಳಿಂದ (ಬೈಯಪ್ಪನಹಳ್ಳಿ, ಕೆಂಗೇರಿ ನಾಗಸಂದ್ರ ಮತ್ತು ರೇಷ್ಮ ಸಂಸ್ಕೃ) ಕೊನಯ ವಾಣಿಜ್ಯ ರೈಲು ಸೇವೆಯು ಮರುದಿನ ಮುಂಜಾನೆ 1.00 ಗಂಟೆಗೆ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮಜೆಸ್ಟಿಕ್‌ನಿಂದ ಕೊನೆಯ ವಾಣಿಜ್ಯ ರೈಲು ಸೇವೆ ಎಲ್ಲಾ ನಾಲ್ಕು ದಿಕ್ಕುಗಳಿಗೆ ಮರುದಿನ ಮುಂಜಾನೆ 1.30 ಗಂಟೆಗೆ ಹೊರಡಲಿದೆ. ಈ ವೇಳೆ ಯಾವುದೇ ಮಟ್ರೋ ರೈಲು ನಿಲ್ದಾಣದಿಂದ ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸಲು ಟೋಕನ್, ಕ್ಯೂಆರ್ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್ ಗಳನ್ನು ಉಪಯೋಗಿಸಿ ಪ್ರಯಾಣಿಸಬಹುದು.
ಇನ್ನು ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ಮಧ್ಯಾಹ್ನ 3.00 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಲಭ್ಯವಿರುತ್ತದೆ. 50ರೂ ದರದ ಪೇಪರ್ ಟಿಕೆಟ್ ಗಳನ್ನು ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ (ಬೈಯಪ್ಪನಹಳ್ಳಿ- ಕೆಂಗೇರಿ ಮತ್ತು ನಾಗಸಂದ್ರ - ರೇಷ್ಮೆ ಮಾರ್ಗದ) ಮೆಟ್ರೋ ನಿಲ್ದಾಣಕ್ಕೆ ತಲುಪಲು ರಾತ್ರಿ 8.00 ಗಂಟೆಯಿಂದ ವಿಸ್ತರಿಸಲಾದ ಕಾಲಾವಧಿವರೆಗೆ ಸದರಿ ಪೇಪರ್ ಟಿಕೆಟ್ ಗಳನ್ನು ಮಾನ್ಯ ಮಾಡಲಾಗುವುದು. ಈ ಪೇಪರ್ ಟಿಕೆಟ್ ಜೊತೆಗೆ ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್ ಗಳನ್ನು ಬಳಸಿ ಸಾಮಾನ್ಯ ದರದಲ್ಲಿ ಪುಯಾಣಿಸಬಹುದು. ಆದ್ರೆ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಡುವಿನ ರೈಲು ಸೇವೆಗಳನ್ನು ವಿಸ್ತರಿಸಲಾಗಿರುವುದಿಲ್ಲ.
BMTC ಹೆಚ್ಚುವರಿ ಬಸ್ ಕಾರ್ಯಾಚರಣೆ
ಇನ್ನು IPL-2023 ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೆಚ್ಚಿನ ಬಸ್ ಕಾರ್ಯಾಚರಣೆಗೊಳಿಸಲಾಗಿದೆ. ಬಿಎಂಟಿಸಿ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದ್ದು, ಇದೀಗ ಐಪಿಎಲ್ ಹಿನ್ನಲೆ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡ್ತಿದೆ. ನಾಳೆ ಏ 2 10, 17, 26 ಮತ್ತು 21ನೇ ಮೇ 2023 ರಂದು ಒಟ್ಟು ಐದು ದಿನ ಐಪಿಎಲ್ ನಡೆಯಲಿದ್ದು
ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವ ವೀಕ್ಷಕರ ಅನುಕೂಲಕ್ಕಾಗಿ ಕ್ರಿಕೆಟ್ ಪಂದ್ಯ ರಾತ್ರಿ 11:00 ಗಂಟೆಗೆ ಮುಗಿದ ಬಳಿಕ ಸಾರಿಗೆ ಸಂಸ್ಥೆಯಿಂದ ರಾತ್ರಿ ಸೇವೆಗಳಲ್ಲಿ ಹೆಚ್ಚಿನ ಸಾರಿಗೆಗಳನ್ನು ಕಾರ್ಯಾಚರಿಸಲಾಗ್ತಿದೆ.
ಗಣಿತದಲ್ಲಿ ನಾನು ವೀಕ್, ಮಗಳು ಪ್ರಶ್ನೆ ಕೇಳಿದರೆ ಖೇಲ್ ಖತಂ ಎಂದ ವಿರಾಟ್ ಕೊಹ್ಲಿ!
ಮಾರ್ಗ ಸಂಖ್ಯೆ
SBS-1K
SBS-13K
G-2
G-3
G-4
G-6
G-7
G-8
G-9
G-10
G-11
KBS-12HK
(ಎಲ್ಲಿಂದ)
ಎಂ.ಚಿನ್ನಸ್ವಾಮಿ ಕ್ರೀಡಾಂಗಣ
(ಎಲ್ಲಿಗೆ)
ಕಾಡುಗೋಡಿ ಬಸ್ ನಿಲ್ದಾಣ
ಸರ್ಜಾಪುರ
ಎಲೆಕ್ಟ್ರಾನಿಕ್ ಸಿಟಿ
ಬನ್ನೇರುಘಟ್ಟ ನ್ಯಾಷನಲ್
ಕೆಂಗೇರಿ ಕೆ.ಹೆಚ್.ಬಿ. ಕಾಲೊನಿ
ಜನಪ್ರಿಯ ಟೌನಷಿಪ್
ನೆಲಮಂಗಲ
ಯಲಹಂಕ 5ನೇ ಹಂತ
ಆರ್.ಕೆ.ಹೆಗಡೆ ನಗರ- ಯಲಹಂಕ
ಬಾಗಲೂರು
ಹೊಸಕೋಟೆ
IPL 2023 ಎಂ ಎಸ್ ಧೋನಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕ ಅರಿಜಿತ್ ಸಿಂಗ್; ಧೋನಿ
(ಈ ಕೆಳಗಿನ ಮಾರ್ಗದ ಮೂಲಕ ಬಸ್ ಕಾರ್ಯಾಚರಣೆ)
ಹೆಚ್.ಎ.ಎಲ್ ರಸ್ತೆ
ಹೂಡಿ ರಸ್ತೆ
ಅಗರ, ದೊಮ್ಮಸಂದ್ರ
ಹೊಸೂರು ರಸ್ತೆ ಜಯದೇವ ಆಸ್ಪತ್ರೆ
ಎಂ.ಸಿ.ಟಿ.ಸಿ- ನಾಯಂಡನಹಳ್ಳಿ,
ಮಾಗಡಿ ರಸ್ತೆ
ಯಶವಂತಪುರ
ನಾಗವಾರ, ಟ್ಯಾನರಿ ರಸ್ತೆ
ಹೆಣ್ಣೂರು ರಸ್ತೆ