ಹೆಣ್ಣು ಮಕ್ಕಳ ವಶೀಕರಣದ ಗ್ಯಾಂಗ್ ಅರೆಸ್ಟ್ : ಲಿಂಗಸೂಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
- ಲಿಂಗಸೂಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
- ಹೆಣ್ಣು ಮಕ್ಕಳ ವಶೀಕರಣ, ವೈರಿಗಳ ಸಂಹಾರ ಪುರುಷತ್ವ ವೃದ್ಧಿ, ಆಸ್ತಿ ಹೆಚ್ಚಳ ಹೆಸರಿನಲ್ಲಿ ಜನರಿಗೆ ಮೋಸ
ರಾಯಚೂರು (ನ.09): ಲಿಂಗಸೂಗೂರು ಪೊಲೀಸರು (Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಹೆಣ್ಣು ಮಕ್ಕಳ ವಶೀಕರಣ, ವೈರಿಗಳ ಸಂಹಾರ ಪುರುಷತ್ವ ವೃದ್ಧಿ, ಆಸ್ತಿ ಹೆಚ್ಚಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್ (Gang Arrest) ಮಾಡಲಾಗಿದೆ.
ಜನರಿಗೆ ಸುಳ್ಳು ಹೇಳಿ ವಂಚನೆ (cheating) ಮಾಡುತ್ತಿದ್ದ ನಾಲ್ವರನ್ನು ಲಿಂಗಸಗೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗ (Shivamogga) ಮೂಲದ ಅಜಯ್ ದೇವಗನ್( 26), ಕರಡಕಲ್ ಗ್ರಾಮದ ಗಂಗಾಧರಯ್ಯ(48), ಹಟ್ಟಿ ಗ್ರಾಮದ ಅದೇಪ್ಪ( 70), ಕಲಬುರಗಿ ಮೂಲದ ಅಬ್ದುಲ್ ಅಫೀಜ್ ಅಲಿಯಾಸ್ ಶೋಯೆಬ್ (25) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಒಂದು ರೆಡ್ ಮರ್ಕ್ಯುರಿ, ಆನೆ ದಂತ, ಕಾಗೆ ಕಾಲು, ಬೆಕ್ಕಿನ ತಗಡು, ನಾಯಿಯ ಹಲ್ಲು, ದನಗಳ 16 ಉಗುರು, 1ಕೋಟಿ 29 ಲಕ್ಷ ರೂ. ಚೆಕ್ ಸೇರಿ 38 ಸಾವಿರ ನಗದು, ಒಂದು ಕಾರು ಹಾಗೂ ಒಂದು ಬೈಕ್, 3 ಮೊಬೈಲ್ ಜಪ್ತಿ ಮಾಡಲಾಗಿದೆ.
ಆರೋಪಿಗಳು ಹೈದ್ರಾಬಾದ್ (Hyderabad) ಮೂಲದ ವ್ಯಕ್ತಿಗೆ 5 ಕೋಟಿಗೆ ಡೀಲ್ ಮಾಡಿದ್ದು, ಲಿಂಗಸೂಗೂರು ತಾ. ಗುಂತಗೋಳ ಬಳಿ 5-6 ಜನ ಸೇರಿ ಡೀಲ್ ಗೆ ಯತ್ನಿಸುತ್ತಿದ್ದರು. ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲಿಂಗಸೂಗೂರು ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ನಿಷೇದಿತ ವಸ್ತುಗಳನ್ನ ಜಪ್ತಿ (seized) ಮಾಡಿದ್ದಾರೆ.
ಲಿಂಗಸೂಗೂರು ಪೊಲೀಸರ ಕಾರ್ಯಕ್ಕೆ ರಾಯಚೂರು ಎಸ್ ಪಿ ನಿಖಿಲ್ .ಬಿ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೌಡಿ-ಡ್ರಗ್ ಪೆಡ್ಲರ್‌ಗಳ ಮನೆಗಳ ಮೇಲೆ ದಾಳಿ : ಸೊಂಪಾದ ನಿದ್ದೆಯಲ್ಲಿದ್ದ ರೌಡಿಶೀಟರ್‌ಗಳಿಗೆ(Rowdysheeters) ಪಶ್ಚಿಮ ವಿಭಾಗದ ಪೊಲೀಸರು ಭಾನುವಾರ ಮುಂಜಾನೆ ಚಳಿ ಬಿಡಿಸಿದ್ದಾರೆ. 150 ರೌಡಿಶೀಟರ್‌ಗಳು ಹಾಗೂ ಡ್ರಗ್ ಪೆಡ್ಲರ್‌ಗಳು(Drug Peddler) ಸೇರಿದಂತೆ 180 ಮನೆಗಳ ಮೇಲೆ ದಾಳಿ ನಡೆಸಿ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಎಂ.ಪಾಟೀಲ್ ಅವರ ನೇತೃತ್ವದಲ್ಲಿ ಸುಮಾರು ಐನೂರಕ್ಕೂ ಅಧಿಕ ಪೊಲೀಸರು(Police) ಮುಂಜಾನೆ ಐದು ಗಂಟೆಯಿಂದ 10 ಗಂಟೆವರೆಗೆ ದಾಳಿ(Raid) ಮಾಡಿದ್ದಾರೆ. ಕಾಟನ್ಪೇಟೆ, ಚಾಮರಾಜಪೇಟೆ, ಜೆ.ಜೆ.ನಗರ, ಬ್ಯಾಟರಾಯನಪುರ, ಕೆ.ಪಿ.ಅಗ್ರಹಾರ, ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾದರಾಯನಪುರ, ಅಂಜನಪ್ಪ ಗಾರ್ಡನ್, ಜಾಲಿ ಮೊಹಲ್ಲ, ನೇತಾಜಿ ನಗರ, ಗೋಪಾಲಪುರ, ಶಾಮಣ್ಣ ಗಾರ್ಡನ್, ಬಾಪೂಜಿನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿರುವ 150 ಮಂದಿ ರೌಡಿಶೀಟರ್‌ಗಳು ಹಾಗೂ 10 ಮಂದಿ ಡ್ರಗ್(Drugs) ಪೆಡ್ಲರ್‌ಗಳಿಗೆ ಸೇರಿದ 180 ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ.
ಪ್ರಮುಖ ರೌಡಿ ಶೀಟರ್ಗಳಾದ ಲಿಯೋ, ಕಾರ್ತಿಕ್, ಹಿದಾಯಾತ್, ವಾಸೀಂ ಪಾಷಾ, ಡಿಕ್ರಿ ಸಲೀಂ, ಆಯೂಬ್ ಖಾನ್, ವಿನೋದ್, ವೆಂಕಟೇಶ್, ವಿಜಯ್, ಸತೀಶ್ ಮನೆಗಳ ಮೇಲೆ ದಾಳಿ ನಡೆಸಿ, ಬಿಸಿ ಮುಟ್ಟಿಸಿದ್ದಾರೆ.
ಠಾಣೆಗೆ ಕರೆಸಿ ವಿಚಾರಣೆ:
ಒಟ್ಟು 150 ರೌಡಿ ಶೀಟರ್‌ಗಳ ಪೈಕಿ 121 ರೌಡಿಶೀಟರ್‌ಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಕೂಲಂಕಷವಾಗಿ ವಿಚಾರಣೆ ನಡೆಸಿದ್ದಾರೆ. ಪ್ರಸ್ತುತ ಅವರ ಕೆಲಸ-ಕಾರ್ಯಗಳು, ವ್ಯವಹಾರಗಳು, ಆದಾಯದ ಮೂಲ ಸೇರಿದಂತೆ ಎಲ್ಲದರ ಮಾಹಿತಿ ಸಂಗ್ರಹಿಸಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅಂತೆಯೆ ವಿಳಾಸ, ಮೊಬೈಲ್ ಸಂಖ್ಯೆ, ಮನೆ ಸದಸ್ಯರ ಮೊಬೈಲ್ ಸಂಖ್ಯೆ ಸೇರಿದಂತೆ ಅವರ ಸಹಚರರ ಮಾಹಿತಿ ಪಡೆದು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ. ದಾಳಿ ವೇಳೆ ಮನೆಯಿಂದ ನಾಪತ್ತೆಯಾಗಿದ್ದ 29 ಮಂದಿ ರೌಡಿಶೀಟರ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ನೋಟಿಸ್(Notice) ಜಾರಿಗೊಳಿಸಿ ವಿಚಾರಣೆಗೆ ಹಾಜರುವಂತೆ ಪೊಲೀಸರು ಸೂಚಿಸಿದ್ದಾರೆ.