Asianet Suvarna News Asianet Suvarna News

CRPF Recruitment: ವೈದ್ಯಕೀಯ ಹುದ್ದೆಗೆ ನ.22, 29 ವಾಕ್ ಇನ್ ಇಂಟರ್‌ವ್ಯೂ

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಖಾಲಿ ಇರುವ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ ಮತ್ತು ಜಿಡಿಎಂಒ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಸಿಆರ್‌ಪಿಎಫ್ ವಾಕ್ ಇನ್ ಇಂಟರ್ವ್ಯೂ ನವೆಂಬರ್ 22, 29ರಂದು ಆಯೋಜಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 85 ಸಾವಿರ ರೂ.ವರೆಗೂ ವೇತನ ದೊರೆಯಲಿದೆ. 

CRPF recruits Medical officer through walk in interview
Author
Bengaluru, First Published Nov 8, 2021, 3:57 PM IST
  • Facebook
  • Twitter
  • Whatsapp

ಎಂಬಿಬಿಎಸ್ (MBSS) ಅಥವಾ ಮೆಡಿಕಲ್ ವಿಷಯಾಧಾರಿತ ಡಿಪ್ಲೋಮಾ ಕೋರ್ಸ್ (Diploma Course) ಓದಿ ಸೆಂಟ್ರಲ್ ಗವರ್ನಮೆಂಟ್ ಕೆಲಸ ಮಾಡುವ ಆಸೆ ಹೊಂದಿರೋರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (Central Reserve Police Force- CRPF) ನಲ್ಲಿ ಉದ್ಯೋಗಕ್ಕೆ ಸೇರಿ ಕೈತುಂಬಾ ಸಂಬಳ ಪಡೆಯಬಹುದು. ಬರೋಬ್ಬರೀ 85 ಸಾವಿರ ರೂಪಾಯಿವರೆಗೂ ಮಾಸಿಕ ವೇತನ ಗಳಿಸಬಹುದು. ಅಧಿಸೂಚನೆಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.  ಹೌದು.. ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF), ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ಕುರಿತು ಕೇಂದ್ರ ಸರ್ಕಾರವು ನೋಟಿಫಿಕೇಷನ್ ಹೊರಡಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮೂಲಕ ಸಿಆರ್ಪಿಎಫ್ (Central Reserve Police Force )ನಲ್ಲಿ ಖಾಲಿ ಇರುವ ಒಟ್ಟು 60 ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುತ್ತಿದೆ. 

ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ (Specialist Medical Officer) ಮತ್ತು GDMO (General Duty Medical Officers) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಇರಲಿದ್ದು, 2021ರ ನವೆಂಬರ್ 22 ಮತ್ತು ನವೆಂಬರ್ 29 ದೇಶದ ವಿವಿಧ ಕೇಂದ್ರಗಳಲ್ಲಿ ವಾಕ್-ಇನ್- ಇಂಟರ್ವ್ಯೂ (Walk In Interview) ನಡೆಸಲಾಗುತ್ತದೆ. ಬೆಂಗಳೂರಿನ ಸಿಆರ್‌ಪಿಎಫ್ ಕಾಂಪೋಸಿಟ್ ಹಾಸ್ಟಿಟಲ್‌ನಲ್ಲೂ 29 ರಂದು ಸಂದರ್ಶನ ನಡೆಯಲಿದೆ. ಆಸಕ್ತ ಭಾಗಹಿಸಬಹುದು. ಬೆಂಗಳೂರು ಮಾತ್ರವಲ್ಲದೇ ದೇಶದ ವಿವಿಧೆಡೆ ಈ ಸಂದರ್ಶನ ನಡೆಯಲಿದೆ. 

ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF), ಈ ನೇಮಕಾತಿ  ಅಭಿಯಾನದಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿಗಳ (Specialist Medical Officer)  29 ಹುದ್ದೆಗಳು ಹಾಗೂ ಜಿಡಿಎಂಒ (General Duty Medical Officers) 31 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. 

ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಆಗುವ ಅಭ್ಯರ್ಥಿಗಳಿಗೆ ಮಾಸಿಕ 85,000 /-  ರೂ. ವೇತನ ಪಡೆಯಬಹುದು. ಹಾಗೇ ಜಿಡಿಎಂಒ (General Duty Medical Officers) ಹುದ್ದೆಗೆ ಮಾಸಿಕ 75,000 /- ರೂ. ವೇತನ ಸಿಗಲಿದೆ. 

1664 ಅಪ್ರೆಂಟಿಸ್ ಹುದ್ದೆಗಳ ನೇಮಕ್ಕೆ ಉತ್ತರ ಮಧ್ಯೆ ರೇಲ್ವೆ ಅರ್ಜಿ ಆಹ್ವಾನ

ಅಭ್ಯರ್ಥಿಯು ಸಂಬಂಧಪಟ್ಟ ವಿಶೇಷದಲ್ಲಿ ಅಂದ್ರೆ ಮೆಡಿಕಲ್ (Medical) ವಿಭಾಗದಲ್ಲಿ ಪದವಿ (Degree) / ಡಿಪ್ಲೊಮಾ (Diploma) ಹೊಂದಿರಬೇಕು. ಜೊತೆಗೆ ಪದವಿ ನಂತರ ಒಂದೂವರೆ ವರ್ಷಗಳ ಅನುಭವ ಅಥವಾ ಡಿಪ್ಲೊಮಾ ಪಡೆದ ನಂತರ ಎರಡೂವರೆ ವರ್ಷಗಳ ಅನುಭವ ಹೊಂದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ಗರಿಷ್ಟ 70 ವರ್ಷಗಳಾಗಿರುತ್ತದೆ. ಇನ್ನು GDMO (General Duty Medical Officers) ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಯು MBBS ಅಥವಾ ಇಂಟರ್ನ್‌ಶಿಪ್ (Internship) ಮಾಡಿರಬೇಕು.

ನವೆಂಬರ್ 22 ಹಾಗೂ ನವೆಂಬರ್ 29ರಂದು ನೇಮಕಾತಿಗೆ CRPF/ Bns/ ವಿವಿಧ ಸಂಯುಕ್ತ ಆಸ್ಪತ್ರೆಗಳಲ್ಲಿ ನೇರ ಸಂದರ್ಶನ ನಡೆಯಲಿದೆ. ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ಮೂಲ ಮತ್ತು ಸ್ವಯಂ-ದೃಢೀಕರಿಸಿದ ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು 3 ಪಾಸ್‌ಪೋರ್ಟ್ ಗಾತ್ರದ ಇತ್ತೀಚಿನ ಫೋಟೋ, ಅರ್ಜಿಯ ಮೂಲ ಮತ್ತು ಫೋಟೊಕಾಪಿಗಳನ್ನು ಸಂದರ್ಶನಕ್ಕೆ ತರಬೇಕು. ಸಂದರ್ಶನದ ನಂತರ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಯಲಿದೆ. 

ಸಿಆರ್‌ಪಿಎಫ್ ಕೇಂದ್ರ ಸರ್ಕಾರದ ಅತಿದೊಡ್ಡ ಸಶಸ್ತ್ರ ಕೇಂದ್ರ ಪೊಲೀಸ್ ಪಡೆಯಾಗಿದೆ. ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯು ಕಾರ್ಯನಿರ್ವಹಿಸುತ್ತದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಯನ್ನು ಸಿಆರ್‌ಪಿಎಫ್ ಹೊತ್ತುಕೊಂಡಿದೆ. 

Good News: ಐಟಿ ಸಾಫ್ಟ್‌ವೇರ್ ಕ್ಷೇತ್ರದ ನೇಮಕಾತಿಯಲ್ಲಿ ಶೇ.85 ಹೆಚ್ಚಳ

Follow Us:
Download App:
  • android
  • ios