Asianet Suvarna News Asianet Suvarna News

ಶರತ್ ಬಚ್ಚೇಗೌಡ ಕಡೆಯಿಂದ ನಡೆಯಿತಾ ಅಕ್ರಮ : ಬಿಜೆಪಿಗರ ಭಾರಿ ಆಕ್ರೋಶ

ಕೈ ಸೇರ್ಪಡೆ ಬಗ್ಗೆ ಸುದ್ದಿಯಾಗುತ್ತಲೇ ಇದೀಗ ಶರತ್ ಬಚ್ಚೇಗೌಡ ಕಡೆಗೆ ಬಿಜೆಪಿಗರ ಅಸಮಾಧಾನ ಹೊರಬಿದ್ದಿದೆ.

BJP Workers Protest Against Sharath Bachegowda supporters snr
Author
Bengaluru, First Published Oct 18, 2020, 1:53 PM IST
  • Facebook
  • Twitter
  • Whatsapp

ಹೊಸಕೋಟೆ (ಅ.18):  ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಗೆ ಸ್ವಾಭಿಮಾನ ಪಕ್ಷದ ಶಾಸಕ ಶರತ್‌ ಬಚ್ಚೇಗೌಡ ಬೆಂಬಲಿಗರು ಅಕ್ರಮವಾಗಿ ಗುರ್ತಿನ ಚೀಟಿಗಳನ್ನು ಸಿದ್ದಪಡಿಸಿದ್ದು, ಅಕ್ರಮವಾಗಿ ಚುನಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ಬಹಿಷ್ಕರಿಸಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.

ತಾಲೂಕು ಟಿಎಪಿಸಿಎಂಎಸ್‌ ಆಡಳಿತ ಮಂಡಳಿಯ 11 ಸ್ಥಾನಗಳಿಗೆ ಭಾನುವಾರ ಚುನಾವಣೆ ದಿನಾಂಕ ನಿಗದಿ ಮಾಡಲಾಗಿತ್ತು. ಸ್ವಾಭಿಮಾನಿ ಪಕ್ಷ ಹಾಗೂ ಬಿಜೆಪಿ ಪಕ್ಷದ ವತಿಯಿಂದ ತಲಾ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನವಣಾ ಪ್ರಚಾರ ಕೂಡ ಕೈಗೊಂಡಿದ್ದರು. ಆದರೆ ಶನಿವಾರ ಸ್ವಾಭಿಮಾನಿ ಬೆಂಬಲಿತ ಅಭ್ಯರ್ಥಿಗಳು ಅಕ್ರಮವಾಗಿ ಚುನಾವಣಾ ಗುರ್ತಿನ ಚೀಟಿಗಳನ್ನು ಸಿದ್ದಪಡಿಸುತ್ತಿರುವುದು ಕಂಡು ಬಂದು, ಬಿಜೆಪಿ ಕಾರ್ಯಕರ್ತರು ಸಂಘದ ಕಚೇರಿ ಮೇಲೆ ದಾಳಿ ಮಾಡಿ, ಸೊಸೈಟಿ ವ್ಯವಸ್ಥಾಪಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕಗ್ಗಂಟಾದ ಶರತ್‌ ಬಚ್ಚೇಗೌಡ ರಾಜಕೀಯ : ಬಿತ್ತು ದೊಡ್ಡ ಬ್ರೇಕ್ ...

ಈ ವೇಳೆ ವ್ಯವಸ್ಥಾಪಕ ಗುರ್ತಿನ ಚೀಟಿ ನಕಲು ಎಂದು ಸತ್ಯ ಒಪ್ಪಿಕೊಂಡ ನಂತರ, ಪೊಲೀಸ್‌ ಠಾಣೆಗೆ ದೂರು ನೀಡುವಂತೆ ಬಿಜೆಪಿ ಕಾರ್ಯಕರ್ತರು ದಂಬಾಲು ಬಿದ್ದರು. ಈ ವೇಳೆ ಸ್ವಾಭಿಮಾನಿ ಪಕ್ಷದ ಕಾರ್ಯಕರ್ತರು ಹಾಗೂ ಬಿಜೆಪಿ ಕಾಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಠಾಣೆ ಎದುರು ಡ್ರಾಮ:  ಇನ್ನು ಗುರ್ತಿನ ಚೀಟಿ ನಕಲು ಸಂಬಂಧ ಸೊಸೈಟಿ ವ್ಯವಸ್ಥಾಪಕ ವಿರುದ್ಧ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು ನಕಲು ಎಂದಾದರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ ಎಂದು ದಂಬಾಲು ಬಿದ್ದ ನಂತರ ದೂರು ನೀಡಲು ಮುಂದಾಗಿ, ಪೊಲೀಸ್‌ ಠಾಣೆಗೆ ಆಗಮಿಸಿದಾಗ, ಪೊಲೀಸ್‌ ಠಾಣೆ ಎದುರು ಮತ್ತೆ ಸ್ವಾಭಿಮಾನಿ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಪ್ರತಿಭಟನಾ ಘೋಷಣೆ ಕೂಗಲು ಮುಂದಾದರು. ಸ್ಥಳದಲ್ಲಿ ಡಿವೈಎಸ್‌ಪಿ ರಂಗಪ್ಪ, ವೃತ್ತ ನಿರೀಕ್ಷಕ ಶಿವರಾಜ್‌ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಪ್ರತಿಭಟನಕಾರರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು.

Follow Us:
Download App:
  • android
  • ios