PM Modi Security Breach ಪ್ರಧಾನಿ ಮೋದಿಗಾಗಿ ಹುಬ್ಬಳ್ಳಿಯಲ್ಲಿ ಮೃತ್ಯುಂಜಯ ಹೋಮ
ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣ
ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸ
ಹಲವೆಡೆ ಮೋದಿ ಅವರಿಗೆ ದೀರ್ಘಾಯುಷ್ಯ ಕೋರಿ ಬಿಜೆಪಿಯಿಂದ ಹೋಮ-ಹವನ
ಹುಬ್ಬಳ್ಳಿ, (ಜ.07): ಪಂಜಾಬ್ ಭದ್ರತಾ ಲೋಪ (Security Breach) ಘಟನೆ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ (narendra Modi) ಅವರಿಗೆ ದೀರ್ಘಾಯುಷ್ಯ ಕೋರಿ ಬಿಜೆಪಿ ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ(Hubballi-Dharwad) ಕೇಂದ್ರ ಮಹಿಳಾ ಮೋರ್ಚಾ ಕಾರ್ಯಕರ್ತರು(BJP Workers) ಜಯನಗರದ ಈಶ್ವರ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಹೋಮ ಮಾಡಿಸಿದರು.
ಹೋಮ-ಹವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಸದಸ್ಯರು ಭಾಗಿಯಾಗಿದ್ದು, ಪ್ರಧಾನಿ ಮೋದಿ ಅವರಿಗೆ ಯಾವುದೇ ತೊಂದರೆಗಳು ಆಗದಿರಲಿ ಎಂದು ಸಾಮೂಹಿಕ ಜಪ ಮಾಡಿ ಮೋದಿ ದೀರ್ಘಾಯುಷಿಯಾಗಿ ಬಾಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
PM Modi Security Breach: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರಿಂ ಆದೇಶ!
ನರೇಂದ್ರ ಮೋದಿಯವರ ವಾಹನ ಮೇಲ್ಸೇತುವೆ ಮೇಲೆ ಇಪ್ಪತ್ತು ನಿಮಿಷ ಬಾಕಿಯಾಗುತ್ತಿದ್ದಂತೆಯೇ ಪ್ರಧಾನಿ ಮೋದಿಗೆ ಜೀವಕ್ಕೆ ಕಟಂಕದ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನಲೆಯಲ್ಲಿ ಮೋದಿಯವರ ಜೀವಕ್ಕೆ ಹಾನಿಯಾಗದಂತೆ ಕರ್ನಾಟದಲ್ಲೂ ಸಹ ವಿವಿದೆಡೆ ಹೋಮ-ಹವನ ಮಾಡಲಾಗಿದೆ.
ಪಂಜಾಬ್‌ನ ಮೇಲ್ಸೇತುವೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಕಾರನ್ನು ಇಪ್ಪತ್ತು ನಿಮಿಷ ತಡೆ ಹಿಡಿದ ವಿಚಾರ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿಯವರನ್ನು ಈ ರೀತಿ ಅಡ್ಡಗಟ್ಟಿಸಿರುವುದು ಭದ್ರತಾ ವೈಫಲ್ಯ ಅಂತಾ ಆಡಳಿತ ಪಕ್ಷ ಟೀಕಿಸಿದರೆ, ಕಾಂಗ್ರೆಸ್ ಮಾತ್ರ ಇದು ಚುನಾವಣಾ ಗಿಮಿಕ್, ಮೋದಿ, ಮೆರವಣಿಗೆಯಲ್ಲಿ ಜನ ಸೇರಲಿಲ್ಲ ಎಂಬ ಕಾರಣಕ್ಕಾಗಿ ಮೋದಿ ಈ ಹೈಡ್ರಾಮ ಮಾಡಿದ್ದಾರೆ ಅಂತಾ ಕಾಂಗ್ರೆಸ್ ಟೀಕಿಸಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಯ ಜೀವಕ್ಕೆ ಕಟಂಕವಾಗುವ ರೀತಿ ಪಂಜಾಬ್ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ ಎಂದು ಟೀಕೆಗಳು ವ್ಯಕ್ತವಾಗಿವೆ.
ಮೋದಿ ಭದ್ರತಾ ಲೋಪ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ
ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್ ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಆದೇಶ ನೀಡುವುದಾಗಿ ತಿಳಿಸಿ ತೀರ್ಪನ್ನ ಕಾಯ್ದಿರಿಸಿದೆ.
ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಹೈಕೋರ್ಟ್ ರಿಜಿಸ್ಟರ್ ಜನರಲ್ ನೇಮಿಸಿ ಆದೇಶ ಹೊರಡಿಸಿದೆ. ಸದ್ಯಕ್ಕೆ ಯಾವುದೇ ಕ್ರಮ ಬೇಡ ರಿಜಿಸ್ಟರ್ ಜನರಲ್ ಆಫ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇವರಿಗೆ ಮಾಹಿತಿ ನೀಡಲು ಇಬ್ಬರು ನೋಡಲ್ ಅಧಿಕಾರಿಗಳ ನೇಮಕ ಮಾಡಿದೆ. ಚಂಡೀಗಢ ಪೊಲೀಸ್ ಡಿಜಿ, ಎನ್ಐಎ ಅಧಿಕಾರಿಗಳ ನೇಮಕ ಮಾಡಿದೆ. ಮಾತ್ರವಲ್ಲ ಸದ್ಯಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪಂಜಾಬ್ ಸರ್ಕಾರ, ಕೇಂದ್ರ ಇಲಾಖೆಗಳಿಗೆ ಸುಪ್ರೀಂ ಸೂಚನೆ ನೀಡಿದೆ. ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಮುಂದಿನ ಆದೇಶ ನೀಡೋದಾಗಿ ಕೋರ್ಟ್ ಹೇಳಿದೆ.
ಟ್ರಾವೆಲ್ ಮಾಹಿತಿ ದಾಖಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಟ್ರಾವೆಲ್ನ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಸುರಕ್ಷಿತವಾಗಿಡಿ. ಅದಕ್ಕೆ ಬೇಕಾಗುವ ಸಹಕಾರ ಹಾಗೂ ಹೆಚ್ಚಿನ ಮಾಹಿತಿಗಳನ್ನ ಪಂಜಾಬ್ ಪೊಲೀಸರು ಮತ್ತು ಎಸ್ಪಿಜಿ ಘಟಕಗಳಿಂದ ಪಡೆದುಕೊಳ್ಳಿ ಎಂದು ಸುಪ್ರೀಂಕೋರ್ಟ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ತಿಳಿಸಿದೆ.