ಬೆಳಗಾವಿ(ಆ.24): ಅನರ್ಹ ಶಾಸಕರು ಈಗ ಸಾಮಾನ್ಯ ಪ್ರಜೆಗಳಾಗಿದ್ದು, ಅವರಿಗೆ ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ (ಗುರುವಾರ) ದೆಹಲಿಯಲ್ಲಿ 15 ಜನ ಅನರ್ಹ ಶಾಸಕರನ್ನು ನಾನು ಭೇಟಿಯಾಗಿದ್ದೇನೆ. ನಮ್ಮ ಪಕ್ಷಕ್ಕೆ ನೀವು ಬರಬಹುದು. ಅನರ್ಹ ಶಾಸಕರಿಗೆ ನಮ್ಮ ಪಕ್ಷದ ತತ್ವ ಸಿದ್ಧಾಂತಗಳು ಗೊತ್ತಿವೆ ಎಂದರು.

ಪ್ರವಾಹ ಹಾನಿ : ಅಧಿಕಾರಿಗಳಿಗೆ ನೂತನ ಸಚಿವೆ ಶಶಿಕಲಾ ಜೊಲ್ಲೆ ವಾರ್ನಿಂಗ್‌

ನಮ್ಮ ಪಕ್ಷದ ಸಿದ್ಧಾಂತ ಅಳವಡಿಸಿಕೊಂಡು ಬರುವ ಎಲ್ಲರಿಗೂ ಸ್ವಾಗತವಿದೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ಸಿನ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಿದ್ದರು. ಆದರೆ, ಅವರಿಗೆ ಕಾಂಗ್ರೆಸ್‌ನಲ್ಲಿ ಗೌರವ ಸಿಕ್ಕಿಲ್ಲ. ಹಾಗಾಗಿ, ಅವರಿಗೆ ಬಿಜೆಪಿಗೆ ಬರುವಂತೆ ಹೇಳಿದ್ದೇನೆ. ಅವರು ಕೂಡ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.

ಭಿನ್ನಮತಕ್ಕೆ ಹೆದರಬೇಕಿಲ್ಲ:

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಬಿಜೆಪಿಯಲ್ಲಿ ಭಿನ್ನಮತಕ್ಕೆ ಯಾರು ಹೆದರುವ ಅಥವಾ ಆತಂಕ ಪಡುವ ಕಾರಣವಿಲ್ಲ. ವಿರೋಧ ಪಕ್ಷದವರು ಸರ್ಕಾರದ ವಿರುದ್ಧ ಟೀಕಿಸುತ್ತಿದ್ದಾರೆ. ಸರ್ಕಾರವನ್ನು ಅತಂತ್ರಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಬೆಳಗಾವಿ: ಸಂತ್ರ​ಸ್ತರ ಸಂಕಷ್ಟಆಲಿ​ಸಿದ ಉಮಾ​ಶ್ರೀ

ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ತಪ್ಪಿದ್ದು ಹೈಕಮಾಂಡ್‌ ತೀರ್ಮಾನ. ಮುಂದೆ ಸಚಿವ ಸ್ಥಾನ ವಂಚಿತರಿಗೆ ಅವಕಾಶ ಸಿಗಬಹುದು. ಅಭಿವೃದ್ಧಿಯನ್ನೇ ಮಂತ್ರಿವಾಗಿಸಿಕೊಂಡು ಎಲ್ಲರೂ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.