Asianet Suvarna News Asianet Suvarna News

ಮೋದಿಯಯರ ಸ್ವಾರ್ಥ ರಹಿತ ರಾಜಕಾರಣ ನೋಡಿ ಮಾಜಿ ಪ್ರಧಾನಿ ಕಲಿಯಲಿ

ಮೋದಿಯವರು ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸುತ್ತಾ ತಮ್ಮ ನಡೆ, ನುಡಿ, ಕ್ರಿಯಾಶೀಲತೆಯಲ್ಲಿ ಸಂಬಂಧಿಕರನ್ನು ಬಂಧು ಬಳಗದವರನ್ನು ಕಚೇರಿ ಮೆಟ್ಟಿಲು ಹತ್ತಲು ಬಿಟ್ಟಿಲ್ಲ, ಅವರ ಬಂಧು ಬಳಗಕ್ಕೆ ಸಂಬಂಧಿಕರಿಗೆ ಯಾವುದೇ ಉದ್ಯೋಗ ಶಿಫಾರಸ್ಸು ಮಾಡಿದ ಉದಾಹರಣೆ ಇಲ್ಲ,

BJP State Leader Kudluru Sridhar Slams HD Devegowda
Author
Bengaluru, First Published Oct 14, 2018, 5:18 PM IST

ಮೈಸೂರು(ಅ.14): ಸ್ವಾರ್ಥ ಮತ್ತು ಕುಟುಂಬ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಾರ್ಥ ರಹಿತ ರಾಜಕಾರಣವನ್ನು ನೋಡಿ ಕಲಿಯಲಿ ಎಂದು ಬಿಜೆಪಿಯ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೂಡ್ಲೂರು ಶ್ರೀಧರ್ ಮೂರ್ತಿ ಹೇಳಿದ್ದಾರೆ.

ಮೋದಿಯವರು ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸುತ್ತಾ ತಮ್ಮ ನಡೆ, ನುಡಿ, ಕ್ರಿಯಾಶೀಲತೆಯಲ್ಲಿ ಸಂಬಂಧಿಕರನ್ನು ಬಂಧು ಬಳಗದವರನ್ನು ಕಚೇರಿ ಮೆಟ್ಟಿಲು ಹತ್ತಲು ಬಿಟ್ಟಿಲ್ಲ, ಅವರ ಬಂಧು ಬಳಗಕ್ಕೆ ಸಂಬಂಧಿಕರಿಗೆ ಯಾವುದೇ ಉದ್ಯೋಗ ಶಿಫಾರಸ್ಸು ಮಾಡಿದ ಉದಾಹರಣೆ ಇಲ್ಲ, ದಿನದಲ್ಲಿ 5 ಗಂಟೆ ಮಾತ್ರ ನಿದ್ರೆ ಮಾಡಿ ಉಳಿದ ಸಮಯವನ್ನು ರಾಷ್ಟ್ರಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ದೇವೇಗೌಡರು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದಾಗ ಮೋದಿಯವರು ಇದೇನು ನಿಮ್ಮ ಅರ್ಧ ಕುಟುಂಬವೇ ಇಲ್ಲಿದ್ದೀರಿ? ಎಂದು ಪ್ರಶ್ನಿಸಿದಾಗ, ದೇವೇಗೌಡರು ಉತ್ತರಿಸಲಾಗಲಿಲ್ಲ, ಭವಿಷ್ಯ ರಾಜಕೀಯ ಮೌಲ್ಯಗಳ ಚಿಂತನೆ, ದೇವೇಗೌಡ ಅವರಲ್ಲಿದ್ದರೆ ಪ್ರತಿ ಬಾರಿಯೂ ಇವರನ್ನು ದೆಹಲಿಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಸಮಾಜದ ಹಿಂದುಳಿದ ವರ್ಗದವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ರಾಜಕೀಯ ಇಚ್ಛಾಶಕ್ತಿಯಿದ್ದಿದ್ದರೆ ದೆಹಲಿಗೆ ಹೋಗುವಾಗ ಒಬ್ಬ ಅಲ್ಪಸಂಖ್ಯಾತ, ಪ. ಜಾತಿ, ಹಿಂದುಳಿದ ವರ್ಗದ ಮಂತ್ರಿಗಳನ್ನು ಜೊತೆಯಲ್ಲಿ ಕೆರೆದುಕೊಂಡು ಹೋಗಬೇಕಾಗಿತ್ತು.

ಈ ವರ್ಗಗಳ ಜನಪ್ರತಿನಿಧಿಗಳನ್ನು ದೂರವಿಟ್ಟಿರುವುದು ಆ ಜನಾಂಗದ ಪ್ರತಿನಿಧಿಗಳಿಗೆ ಘೋರ ಅವಮಾನ ಮಾಡಿದಂತೆ ಎಂದು ಅವರು ಟೀಕಿಸಿದ್ದಾರೆ. ಸ್ವಾರ್ಥ ರಾಜಕಾರಣಕ್ಕಾಗಿ ಈ ಇಳಿವಯಸ್ಸಿನಲ್ಲಿ ಕೂಡ ಸಮಾಜವನ್ನು ಕರ್ನಾಟಕ ರಾಜ್ಯವನ್ನು ಹಸಿ ಹಸಿಯಾಗಿ ಸುಳ್ಳುಗಳಿಂದ ವಂಚಿಸುತ್ತಿರುವುದು ಯಾವ ನ್ಯಾಯ? ಒಂದು ವೇಳೆ ಮನುಷ್ಯ 300 ವರ್ಷ ಬದುಕುತ್ತಿದ್ದಾರೆ ಏನಾಗುತ್ತಿತ್ತು ಎಂಬ ಭಯ ನನ್ನನ್ನು ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.
 

Follow Us:
Download App:
  • android
  • ios