'ಸಿಎಂ ಬದಲಾವಣೆ, ಸಿದ್ದರಾಮಯ್ಯ ಕುತಂತ್ರ'

* ಸುಳ್ಳು ಕಾಂಗ್ರೆಸ್‌ನವರ ಮನೆ ದೇವ್ರು
* ತೇರದಾಳ ಕ್ಷೇತ್ರದ ಬಗ್ಗೆ ಮಾತನಾಡಲು ಉಮಾಶ್ರೀಗೆ ನೈತಿಕತೆಯಿಲ್ಲ
* ನೇಕಾರರ ಸಾಲಮನ್ನಾ ಮಾಡಿದ್ದು ಮೊದಲಿಗೆ ಯಡಿಯೂರಪ್ಪ

BJP MLA Siddu Savadi Talks Over Siddaramaiah grg

ರಬಕವಿ-ಬನಹಟ್ಟಿ(ಮೇ.31): ಸಿಎಂ ಬದಲಾವಣೆ ಊಹಾಪೋಹ. ದೆಹಲಿಗೆ ಪಕ್ಷದ ನಾಯಕರು ಸ್ವಂತ ಕೆಲಸಕ್ಕೆ ತೆರಳಿದ್ದು, ಇದನ್ನೇ ವಿಪಕ್ಷ ಅದರಲ್ಲೂ ಸುಳ್ಳಿನ ಕಂತೆಯಲ್ಲಿ ಡಬಲ್‌ ಸ್ಟ್ಯಾಂಡರ್ಡ್‌ ಪರ್ಸನ್‌ ಪದವಿಗಿಟ್ಟಿಸಿಕೊಂಡಿರುವ ಸಿದ್ದರಾಮಯ್ಯರ ಕುತಂತ್ರವೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ. 

ಬನಹಟ್ಟಿಯ ರುದ್ರಭೂಮಿಯಲ್ಲಿ ಭಾನುವಾರ ನಮೋ 2.0 ಆಡಳಿತದ ಎರಡು ವರ್ಷ ಪೂರೈಸಿದ್ದರ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಳ್ಳು ಕಾಂಗ್ರೆಸ್‌ನವರ ಮನೆ ದೇವ್ರು. ತೇರದಾಳ ಕ್ಷೇತ್ರದ ಬಗ್ಗೆ ಮಾತನಾಡಲು ಮಾಜಿ ಸಚಿವೆ ಉಮಾಶ್ರೀ ಅವರಿಗೆ ಯಾವುದೇ ನೈತಿಕತೆಯಿಲ್ಲ. ಕಳೆದ ಬಾರಿ 5 ವರ್ಷ ಅವಧಿಯಲ್ಲಿ ಸಚಿವೆಯಾಗಿ ನೇಕಾರರಿಗೆ ನೀಡಿದ ಕಾರ್ಯ ಶೂನ್ಯ. ನೇಕಾರರ ಸಾಲಮನ್ನಾ ಮಾಡಿದ್ದು ಮೊದಲಿಗೆ ಸಿಎಂ ಬಿಎಸ್‌ವೈ. ಇದನ್ನು ಅರಿತು ಮಾತನಾಡಲಿ. ಕೋವಿಡ್‌ ಸಂದರ್ಭದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್‌ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. 

ಮಮತಾಗೆಗೆ ಶಿಷ್ಟಾಚಾರ ಗೊತ್ತಿಲ್ಲ : ಕಾರಜೋಳ

ಹಿಂದೂ ರುದ್ರಭೂಮಿಯಲ್ಲಿ 200ಕ್ಕೂ ಅಧಿಕ ಸಸಿಗಳನ್ನು ನೆಡುವಲ್ಲಿ ಕಾರಣರಾದರು. ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ರಾಜು ಅಂಬಲಿ, ಪ್ರಶಾಂತ ಕೊಳಕಿ, ಸದಾಶಿವ ಪರೀಟ, ಚಿದಾನಂದ ಹೊರಟ್ಟಿ ಸೇರಿದಂತೆ ಅನೇಕರಿದ್ದರು.
 

Latest Videos
Follow Us:
Download App:
  • android
  • ios