ಬಾಗಲಕೋಟೆ(ಮೇ.31): ಪ್ರಕೃತಿ ವಿಕೋಪದ ವೀಕ್ಷಣೆಗೆ ದೇಶದ ಪ್ರಧಾನಿಗಳು ಪಶ್ಚಿಮ ಬಂಗಾಲಕ್ಕೆ ಹೋದರೆ ಪ್ರಧಾನಿಗಳನ್ನು ಅರ್ಧಗಂಟೆಗಳ ಕಾಲ ಕಾಯಿಸಿದ ಮಮತಾ ಬ್ಯಾನರ್ಜಿ ಅವರ ವಿರುದ್ದ ಡಿಸಿಎಂ ಅಸಮಾಧಾನ ಹೊರಹಾಕಿದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವರ್ತನೆ ಖಂಡನೀಯ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ತುರ್ತಾಗಿ ಸಿಎಂ ಆಗಬೇಕಂತಾರೆ, ಅದು ಆಗಲ್ಲ: ಡಿಸಿಎಂ ಕಾರಜೋಳ

 ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಮತಾ ಅವರಿಗೆ ಸಾಮಾನ್ಯ ಜ್ಞಾನ ಸಹ ಇಲ್ಲವಾಗಿದೆ. ದೇಶದ ಶಿಷ್ಟಾಚಾರವನ್ನು ಪಾಲಿಸದೆ ಹೋಗಿರುವ ಅವರ ವರ್ತನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.