'ಉಡಾಫೆ ಬಿಟ್ಟು ಕೆಲಸ ಮಾಡಿ' ಕತ್ತಿ ವಿರುದ್ಧ ರೇಣುಕಾ ಗುಡುಗು

* ಸಚಿವ ಉಮೇಶ್ ಕತ್ತಿ ವಿರುದ್ಧ ಕಿಡಿ ಕಾರಿದ ಶಾಸಕ ರೇಣುಕಾಚಾರ್ಯ
* ಸಚಿವರರಾಗಿ ಉಡಾಫೆಯಾಗಿ ಮಾತಾಡ್ತಾರೆ,  ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ~
*  ಹಿಂದಿನ ಪಡಿತರ ವ್ಯವಸ್ಥೆಯನ್ನೇ ಮುಂದುವರಿಸಬೇಕು
*  ಎಂಟು ಸಾರಿ ಗೆದ್ದವರು ಉಡಾಫೆ ಮಾತು ನಿಲ್ಲಿಸಬೇಕು

BJP MLA MP Renukacharya slams minister umesh katti mah

ಬೆಂಗಳೂರು/ ದಾವಣಗೆರೆ(ಮೇ 13)  ವಿವಾದಾತ್ಮಕ ಹೇಳಿಕೆ ನೀಡುವುದರಲ್ಲೇ  ನಿರತರಾಗಿರುವ ಆಹಾರ ಮತ್ತು ನಾಗರಿಕ ಪೂರೂಕೆ ಸಚಿವ ಉಮೇಶ್ ಕತ್ತಿ ವಿರುದ್ಧ ಸ್ವಪಕ್ಷದ ನಾಯಕರೇ ಕಿಡಿ ಕಾರಿದ್ದಾರೆ.  ಶಾಸಕ ಎಂಪಿ ರೇಣುಕಾಚಾರ್ಯ ಕತ್ತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಉಮೇಶ್ ಕತ್ತಿ ಕೊರೊನಾ ಸಂಕಷ್ಟದ ಸಮಯದಲ್ಲಿ ಅಕ್ಕಿ ಪೂರೈಸುವುದರಲ್ಲಿ ಎಡವಿದ್ದಾರೆ. ಉಮೇಶ್ ಕತ್ತಿಯವರು ಅಧಿಕಾರಿಗಳಿಂದ ಪ್ರೇರೇಪಿತರಾಗಿ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಮೊದಲಿನಂತೆ ಜನರಿಗೆ 5ಕೆಜಿ ಅಕ್ಕಿ ಪೂರೈಸುವುದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ  ಅವರಿಗೆ ಮನವಿ ಮಾಡಿದ್ದೇನೆ. ಅದಕ್ಕೆ  ಸಿಎಂ  ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಕೊರೋನಾ ಗೆದ್ದು ಬಂದ ರೇಣುಕಾಚಾರ್ಯ

ಉಮೇಶ್ ಕತ್ತಿ ಉಡಾಫೆ ಉತ್ತರವನ್ನು ಮತ್ತು ವ್ಯಂಗ್ಯ ಹೇಳಿಕೆಯನ್ನು ನಿಲ್ಲಿಸಬೇಕು. ಇದರಿಂದ ಸರ್ಕಾರ ಮತ್ತು ಸಂಘಟನೆಗೆ ಮುಜುಗರ ಆಗುತ್ತಿದೆ.  ಅವರು 8 ಬಾರಿ MLA, ಈಗ ಮಂತ್ರಿಯಾಗಿದ್ದಾರೆ ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯದ ಜನರ ಸೇವೆಯನ್ನು ಗಂಭೀರವಾಗಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಪಡಿತರ ಕಡಿತ ಮಾಡಿದ್ದರ ಬಗ್ಗೆ ಅನೇಕರಿಂದ ವಿರೋಧದ ಮಾತುಗಳು ಕೇಳಿಬಂದಿದ್ದವು. ಕೊರೋನಾ ಸಂಕಷ್ಟದ ಸಮಯದಲ್ಲಿ ಇದು ಯಾವ ನ್ಯಾಯ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಮಾಯ್ಯ ಪ್ರಶ್ನೆ ಮಾಡಿದ್ದರು . 

Latest Videos
Follow Us:
Download App:
  • android
  • ios