Asianet Suvarna News Asianet Suvarna News

ಪಕ್ಷ ನನಗೆ ಮೋಸ ಮಾಡುತ್ತಿದೆ. : ಬಿಜೆಪಿ ಶಾಸಕರೋರ್ವರ ರಾಜೀನಾಮೆ ಬೆದರಿಕೆ

  • ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶಗೌಡ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ಶಾಸಕರಿಂದ ಅಸಮಾಧಾನ
  •  , ‘ಪಕ್ಷದಲ್ಲಿ ಇರುವುದಿಲ್ಲ’ ಎಂಬ ಎಚ್ಚರಿಕೆ ಕೊಟ್ಟ ಬಿಜೆಪಿ ಶಾಸಕ
BJP MLA Masala Jayaram warns about resignation snr
Author
Bengaluru, First Published Oct 14, 2021, 8:41 AM IST

 ತುಮಕೂರು (ಅ.14):  ಜಿಲ್ಲಾ ಬಿಜೆಪಿ (BJP) ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶಗೌಡ (Suresh Gowda) ರಾಜೀನಾಮೆ (Resignation) ಕೊಟ್ಟ ಬೆನ್ನಲ್ಲೇ ತುರುವೇಕೆರೆ ಶಾಸಕ ಮಸಾಲ ಜಯರಾಂ (Masala jayaram) ಅವರು, ‘ಪಕ್ಷದಲ್ಲಿ ಇರುವುದಿಲ್ಲ’ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. 

ತುಮಕೂರಿನಲ್ಲಿ (Tmakur) ಕೆಡಿಪಿ (KDP) ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲೋ ಒಂದು ಕಡೆ ಪಕ್ಷ ನನಗೆ ದ್ರೋಹ ಮಾಡುತ್ತಿದೆ ಎನ್ನುವ ಮಟ್ಟಕ್ಕೆ ಬಂದಿದೆ. ನಾವು ಕೇಳೋತನಕ ಕೇಳಿಕೊಂಡು ಬಂದಿದ್ದೇವೆ ಎಂದ ಅವರು, ರಾಜ್ಯಾಧ್ಯಕ್ಷರನ್ನು (State President) ಹಾಗೂ ಮುಖ್ಯಮಂತ್ರಿಯನ್ನು (CM) ಕೇಳಿದ್ದೇನೆ. ಅವರು ಕಡೆಗಣಿಸಿದರೆ ರಾಜಕೀಯನೇ (Politics) ಕಡೆ ಮಾಡುವುದಾಗಿ ತಿಳಿಸಿದರು.

ರಾಜೀನಾಮೆ ಬಳಿಕ ಕಟೀಲ್ ವಿರುದ್ಧ ಅಸಮಾಧಾನ, ಬಿಎಸ್‌ವೈ ಭೇಟಿಯಾದ ಸುರೇಶ್ ಗೌಡ

ನಮ್ಮ ತಾಳ್ಮೆಗೂ ಒಂದು ಸಹಕಾರ ಇರಬೇಕು. ಈ ತಿಂಗಳ ಅಂತ್ಯಕ್ಕೆ ಗಡವು ಕೊಟ್ಟಿದ್ದೇವೆ. ನವಂಬರ್‌ ಅಂತ್ಯದವರೆಗೂ ನೋಡ್ತೀವಿ ಎಂದಿದ್ದಾರೆ. ನಾವೇನೂ ಸಚಿವ ಸ್ಥಾನದ (Minister Post) ಆಕಾಂಕ್ಷಿ ಅಲ್ಲಾ. ಒಳ್ಳೆಯ ನಿಗಮ ಕೊಡಿ ಅಂತಾ ಕೇಳಿದ್ದೇವೆ, ಕೊಟ್ಟರೆ ಕೊಡಲಿ ಇಲ್ಲಾ ಅಂದರೆ ನಾವು ಏನ್‌ ಮಾಡಬೇಕೋ ಮಾಡುವುದಾಗಿ ತಿಳಿಸಿದರು.

ಧರ್ಮಸ್ಥಳ ಭಕ್ತರಿಗೆ ಗುಡ್ ನ್ಯೂಸ್ : KSRTC ನೇರ ಬಸ್

ಜನರು ನಮಗೆ ಮತ ಹಾಕಿದ್ದಾರೆ. ಅವರಿಗೆ ತೃಪ್ತಿಯಾಗುವ ಹಾಗೆ ಕೆಲಸ ಮಾಡಿದ್ದೇನೆ. ನನಗೆ ಹಾಗೆಯೇ ಕೆಲಸ ಮಾಡುವ ತಾಕತ್ತಿದೆ ಎಂದಿರುವ ಅವರು, ತಮಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಸಾಂಬರು ಅಭಿವೃದ್ಧಿ ನಿಗಮದಲ್ಲಿ ಹತ್ತು ರೂಪಾಯಿ ದುಡ್ಡಿಲ್ಲ. ನಾನೇ ಊಟ ತೆಗೆದುಕೊಂಡು ಹೋಗಿ ಕೊಟ್ಟು ಬರಬೇಕು ಎಂದು ವ್ಯಂಗ್ಯವಾಡಿದ್ದಾರೆ.

20 ಶಾಸಕರು ಬಿಜೆಪಿ ಸೇರುತ್ತಾರೆ

 

 ಪಕ್ಷಾಂತರ ಪರ್ವಕ್ಕೆ ಮುಂದಾದ ಕಾಂಗ್ರೆಸ್‌ನ (Congress) 20 ಶಾಸಕರು ಶೀಘ್ರದಲ್ಲಿ ಬಿಜೆಪಿ (BJP) ಸೇರ್ಪಡೆಗೊಳ್ಳಲಿದ್ದಾರೆ. ಆದರೆ ಬಿಜೆಪಿಯ ಯಾವ ಶಾಸಕರು ಅಥವಾ ಮಾಜಿ ಶಾಸಕರು ಪಕ್ಷ ಬಿಡುವ ಮಾತೇ ಇಲ್ಲ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ (Masala Jayaram) ಸ್ಪಷ್ಟಪಡಿಸಿದರು. 

ತಾಲೂಕಿನ ಸಿ.ಎಸ್.ಪುರ ಹೋಬಳಿ ಕೆಂಚನಹಳ್ಳಿ ಕೆರೆಯು ಇಪ್ಪತು ವರ್ಷದ ಬಳಿಕ ಹೇಮೆಯಿಂದ ತುಂಬಿದ ಹಿನ್ನೆಲೆ ಗಂಗಾಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿ ಮಾತನಾಡಿದ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಶಾಸಕ ಸುರೇಶ್‌ಗೌಡ (Suresh Gowda) ತಮ್ಮ ಗ್ರಾಮಾಂತರ ಕ್ಷೇತ್ರದಲ್ಲಿ ಸಂಘಟನೆಗೆ ಸಮಯ ಸಿಗದ ಹಿನ್ನೆಲೆ ಜವಾಬ್ದಾರಿಯಿಂದ ವಿಮುಕ್ತಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವ ಮಾತಿಲ್ಲ. ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಶುದ್ದ ಸುಳ್ಳು ಎಂದರು. 

ರಾಜೀನಾಮೆ ಬಳಿಕ ಕಟೀಲ್ ವಿರುದ್ಧ ಅಸಮಾಧಾನ, ಬಿಎಸ್‌ವೈ ಭೇಟಿಯಾದ ಸುರೇಶ್ ಗೌಡ

ಸಂಸದರ ಚುನಾವಣೆ, ಶಿರಾ ಉಪಚುನಾವಣೆ (BY Election) ಮತ್ತು ಎಂಎಲ್‌ಸಿ ಚುನಾವಣೆಯನ್ನು ಸಮರ್ಥವಾಗಿ ನಿಬಾಯಿಸಿದ ಸುರೇಶ್‌ಗೌಡ ಅವರ ಸಾರಥ್ಯ ಜಿಲ್ಲೆಗೆ ಅವಶ್ಯವಿದೆ. ಈ ಬಗ್ಗೆ ರಾಜ್ಯಾಧ್ಯಕ್ಷರ ಬಳಿ ಚರ್ಚಿಸುತ್ತೇವೆ. ಕಾಂಗ್ರೆಸ್‌ನತ್ತ ಹೋಗುತ್ತಾರೆ ಎಂದು ಮಾಧ್ಯಮದಲ್ಲಿ ಮಾತ್ರ ಬರುತ್ತಿದೆ. ಎಲ್ಲಿಯೂ ಈ ಬಗ್ಗೆ ಹೇಳಿಕೆ ನೀಡಿಲ್ಲ ಎಂದ ಅವರು ಸಿ.ಎಸ್.ಪುರ ಭಾಗದಲ್ಲಿ 40 ಕೋಟಿ ರೂಗಳ ಕೆಲಸಗಳು ಶೀಘ್ರದಲ್ಲಿ ಚಾಲನೆಗೊಳ್ಳಲಿದೆ. ಈ ಜತೆಗೆ ಸಿಸಿ ರಸ್ತೆಗಳು ಬಹುತೇಕ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಇಂದು ಸಹ ಒಂದು ಕೋಟಿ ರೂಗಳ ರಸ್ತೆ ಮತ್ತು ಚರಂಡಿ ಕೆಲಸಕ್ಕೆ ಪೂಜೆ ಮಾಡಲಾಗಿದೆ ಎಂದರು. 

Follow Us:
Download App:
  • android
  • ios