Asianet Suvarna News Asianet Suvarna News

ಧರ್ಮಸ್ಥಳ ಭಕ್ತರಿಗೆ ಗುಡ್ ನ್ಯೂಸ್ : KSRTC ನೇರ ಬಸ್

  • ಧರ್ಮಸ್ಥಳ ಮಂಜುನಾಥಸ್ವಾಮಿ ಭಕ್ತರ  ಬಹುದಿನದ  ಬೇಡಿಕೆ ಈಡೇರಿಕೆ
  • ಬೇಡಿಕೆಯನ್ನು ಈಡೇರಿಸಿರುವ ಸ್ಥಳೀಯ  ಶಾಸಕ ಮಸಾಲ ಜಯರಾಮ್  
KSRTC Bus Service Starts To Dharmasthala From Turuvekere snr
Author
Bengaluru, First Published Oct 4, 2021, 12:40 PM IST

ತುರುವೆಕೆರೆ (ಅ.04): ಧರ್ಮಸ್ಥಳ (Dharmasthala) ಮಂಜುನಾಥಸ್ವಾಮಿ ಭಕ್ತರ  ಬಹುದಿನದ  ಬೇಡಿಕೆಯನ್ನು ಈಡೇರಿಸಿರುವ ಸ್ಥಳೀಯ  ಶಾಸಕ ಮಸಾಲ ಜಯರಾಮ್ (Masala Jayaram)  ಪಟ್ಟಣದಿಂದ ಧರ್ಮಸ್ಥಳಕ್ಕೆ ಬೇರ ಬಸ್ ಸೌಕರ್ಯಕ್ಕೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು. 

ಪಟ್ಟಣದ KSRTC ಬಸ್  ನಿಲ್ದಾಣದಿಂದ  ಶನಿವಾರ ಧರ್ಮಸ್ಥಳ ಮಾರ್ಗದ ನೂತನ ಸಾರಿಗೆ ಬಸ್‌ಗೆ  ಹಸಿರು ನಿಶಾನೆ  ತೋರಿ ಚಾಲನೆ ನೀಡಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿಗೆ ತುರುವೆಕೆರೆ (Turuvekere) ತಾಲೂಕಿನಲ್ಲಿ ಅಪಾರ ಭಕ್ತವೃಂದವಿದೆ. 

ಕಾಗದ ರಹಿತ ವ್ಯವಸ್ಥೆಗೆ ಸಾರಿಗೆ ಇಲಾಖೆ ಸಿದ್ಧತೆ: ಸಚಿವ ರಾಮುಲು

ಆದರೆ ಭಕ್ತರಿಗೆ ನೇರ ಬಸ್ ವ್ಯವಸ್ಥೆ ಇಲ್ಲದೇ ಹತ್ತಾರು ಕಡೆ ಬಸ್ ಹಿಡಿದು ಪ್ರಯಾಣಿಸಬೇಕಿತ್ತು. ಇದನ್ನು ಮನಗಂಡ ತಾವು  ತಾಲೂಕಿನ ಪ್ರಯಾಣಿಕರಿಗೆ ಅನುಕೂಲವಾಗಿಸುವ ದೃಷ್ಟಿಯಿಂದ ಧರ್ಮಸ್ಥಳಕ್ಕೆ ನೇರ ಬಸ್ ಸೌಲಭ್ಯವನ್ನು ಏರ್ಪಾಟು ಮಾಡಿರುವುದಾಗಿ ಹೇಳಿದರು. 

ಸಾರಿಗೆ ನೌಕರರಿಗೆ ಗುಡ್‌ನ್ಯೂಸ್: ಎಲ್ಲಾ ಕೇಸ್‌ಗಳನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧಾರ

ಪಟ್ಟಣದ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಬಸ್  ಹೊರಡಲಿದೆ. ದಿಡಗ  ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ (Sakaleshpur) ಮೂಲಕ ಮಧ್ಯಾಹ್ನ 1.30ಕ್ಕೆ ಧರ್ಮಸ್ಥಳ ತಲುಪಲಿದೆ ಎಂದು ಸಾರಿಗೆ ಇಲಾಖಾ ಅಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ತುರುವೆಕೆರೆ ಬಸ್ ಡಿಪೋ ಮ್ಯಾನೇಜರ್ ತಮ್ಮಯ್ಯ, ಸಹಾಯಕ ಸಂಚಾರ ಅಧೀಕ್ಷಕ ಶ್ರೀನಿವಾಸ್ ಮುಖಂಡರು ಇದ್ದರು.

ಹಂಪಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್ 

ಕೆಎಸ್‌ಆರ್‌ಟಿಸಿ (KSRTC)ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ‘ಬೆಂಗಳೂರು   -ಹಂಪಿ  -ತುಗಭದ್ರ ಡ್ಯಾಮ್‌ (Bengaluru-Hampi- Tungabhdra) ಪ್ಯಾಕೇಜ್‌ನ್ನು ಪ್ರಕಟಿಸಿದೆ.

ಹವಾನಿಯಂತ್ರಣ ರಹಿತ ಸ್ಲೀಪರ್‌ ವಾಹನದೊಂದಿಗೆ ಅಕ್ಟೋಬರ್‌ 1ರಿಂದ ಪ್ಯಾಕೇಜ್‌ ಆರಂಭವಾಗುತ್ತಿದ್ದು, ಇದರಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟದ ವ್ಯವಸ್ಥೆ ಒಳಗೊಂಡಿರಲಿದೆ. ಜೊತೆಗೆ, ಹಂಪಿ ವೀಕ್ಷಣೆಯ ಪ್ರವೇಶ ಶುಲ್ಕವನ್ನು ನಿಗಮದಿಂದ ಭರಿಸಲಾಗುತ್ತಿದೆ.

ಈ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ 2,500 ಮತ್ತು ಮಕ್ಕಳಿಗೆ 2,300 ರು.ಗಳನ್ನು ನಿಗದಿಪಡಿಸಿಸಲಾಗಿದ್ದು, ವಿಜಯ ವಿಠ್ಠಲ ದೇವಸ್ಥಾನ, ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಸಾಸಿವೆಕಾಳು, ಕಡಲೇಕಾಳು ಗಣೇಶ, ಲಕ್ಷ್ಮೀ ನರಸಿಂಹ, ಬಡವಲಿಂಗ, ಆನೆಗಳ ಆಶ್ವಶಾಲೆ, ಕಲ್ಯಾಣಿ, ಕಮಲಮಹಲ್‌, ಮಹಾನವಮಿ ದಿಬ್ಬ, ರಾಣಿಯರ ಈಜುಕೊಳವನ್ನು ನೋಡಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಶಿರಡಿಗೆ ಅಂಬಾರಿ ಡ್ರೀಮ್‌ ಕ್ಲಾಸ್‌ ಪುನರಾರಂಭ:

ಕೊರೋನಾದಿಂದ (Coronavirus) ಸ್ಥಗಿತಗೊಂಡಿದ್ದ ಬೆಂಗಳೂರು-ಶಿರಡಿ (Shiradi) ಮಾರ್ಗದಲ್ಲಿ ಅಂಬಾರಿ ಡ್ರೀಮ್‌ ಕ್ಲಾಸ್‌ (ಮಲ್ಟಿಆಕ್ಸ್‌ಲ್‌ ಸ್ಲೀಪರ್‌) ಸೇವೆಯನ್ನು ಕೆಎಸ್‌ಆರ್‌ಟಿಸಿ ಪುನರಾರಂಭಿಸಿದೆ. ಅಕ್ಟೋಬರ್‌ 6 ರಿಂದ ಶಿರಡಿ ಪ್ರಯಾಣಕ್ಕೆ 1,600 ರು.ಗಳನ್ನು ನಿಗದಿ ಪಡಿಸಿದ್ದು, ಪ್ರಯಾಣಿಕರು ಈ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Follow Us:
Download App:
  • android
  • ios