Asianet Suvarna News Asianet Suvarna News

ಅಭಿವೃದ್ಧಿಯಿಂದ ವಿಜಯಪುರದ ಚಿತ್ರಣವೇ ಬದಲು: ಶಾಸಕ ಯತ್ನಾಳ

ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಚೇರಿಗಳಿಗೆ ಅಲೆದಾಡಿ, ದಲ್ಲಾಳಿಗಳ ಹಣ ವಸೂಲಿಗೆ ಬೇಸತ್ತಿದ್ದರು. ನಾನು ಶಾಸಕನಾದ ಮೇಲೆ ಕಾಲೋನಿ, ಓಣಿಗಳಿಗೆ, ಮನೆಗಳಿಗೆ ಮುಟ್ಟುವಂತೆ ದಾಖಲೆ ರೀತಿಯಲ್ಲಿ ಸೌಲಭ್ಯ ಮುಟ್ಟುವಂತೆ ಮಾಡಿರುವೆ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ 
 

BJP MLA Basanagouda Patil Yatnal Talks Over Development of Vijayapura grg
Author
First Published Jan 8, 2023, 9:30 PM IST

ವಿಜಯಪುರ(ಜ.08):  ನಾಲ್ಕೂವರೆ ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ವಿಜಯಪುರ ನಗರದ ಚಿತ್ರಣ ಬದಲಾಗಿದೆ. ಈ ಹಿಂದೆ ಹೇಗಿತ್ತು, ಈಗ ಹೇಗಿದೆ ನೀವೆ ನೋಡಿ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಮಹಾನಗರ ಪಾಲಿಕೆ ವಾರ್ಡ್‌ ನಂ.32ರ ಜೋರಾಪೇಠ ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್‌ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಚೇರಿಗಳಿಗೆ ಅಲೆದಾಡಿ, ದಲ್ಲಾಳಿಗಳ ಹಣ ವಸೂಲಿಗೆ ಬೇಸತ್ತಿದ್ದರು. ನಾನು ಶಾಸಕನಾದ ಮೇಲೆ ಕಾಲೋನಿ, ಓಣಿಗಳಿಗೆ, ಮನೆಗಳಿಗೆ ಮುಟ್ಟುವಂತೆ ದಾಖಲೆ ರೀತಿಯಲ್ಲಿ ಸೌಲಭ್ಯ ಮುಟ್ಟುವಂತೆ ಮಾಡಿರುವೆ. 2018 ರಿಂದ ಇಂದಿನವರೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ 14,482 ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಗಿದೆ. ಇಂದು ಕೂಡ 50 ಫಲಾನುಭವಿಗಳಿಗೆ ವಿತರಿಸಲಾಯಿತು. ಈ ಹಿಂದೆ ಯಾವ ಶಾಸಕ ಸಹ ಬಂದಿಲ್ಲ ಎಂದರು.

Vijayapura : 8 ವಿಧಾನಸಭಾ ಕ್ಷೇತ್ರಗಳಲ್ಲಿ 18,38,452 ಮತದಾರರು

ಕೊರೋನಾದಿಂದ ಎರಡು ವರ್ಷ ಅಭಿವೃದ್ಧಿಗೆ ಹಿನ್ನಡೆ ಆಗಿತ್ತು. ನಂತರ ಕಡಿಮೆ ಅವಧಿಯಲ್ಲಿಯೇ ಸಾಕಷ್ಟುಅನುದಾನ ತರುವ ಮೂಲಕ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ. ಅಭಿವೃದ್ಧಿ ಮೆಚ್ಚಿ ಪಾಲಿಕೆ ಚುನಾವಣೆಯಲ್ಲಿ ನಮ್ಮ 18 ಜನ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅದುವೇ ನಾನು ಮಾಡಿದ ಕೆಲಸ ಬಗ್ಗೆ ತೋರಿಸುತ್ತದೆ ಎಂದು ತಿಳಿಸಿದರು.

ಅಪಾರ್ಟಮೆಂಟ್‌ಗಳನ್ನು ಮೀರಿಸುವಂತೆ 1493 ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ 650 ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ಉಳಿದವುಗಳನ್ನು ಸಹ ನೀಡಲಾಗುವುದು. ಈ ಮನೆಗಳ ಬಳಿಕ ಮತ್ತೆ 2250 ಮನೆಗಳು ತರುವುದಾಗಿ ತಿಳಿಸಿದರು.

ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ ಆಗಿರುವುದು ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಅಂತ್ಯಕ್ರಿಯೆಗೆ 30-40 ಲಕ್ಷ ಜನರು ಬಂದರೂ ಎಳ್ಳಷ್ಟುತೊಂದರೆ ಆಗದಂತೆ ಅಧಿಕಾರಿಗಳ ಸಹಕಾರದಿಂದ ವ್ಯವಸ್ಥೆ ಮಾಡಿದ್ದೇವೆ. ವಿಜಯಪುರ ಸುರಕ್ಷಿತ ಇಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ. ವಿಸ್ತಾರವಾಗಿ ಸುಭಾಸಚಂದ್ರ ಬೋಸ್‌ ಮಾಡಿದ್ದರಿಂದಲೇ ಲಕ್ಷಾಂತರ ಜನ ಓಡಾಟಕ್ಕೆ ತೊಂದರೆ ಆಗಲಿಲ್ಲ. ಇದನ್ನು ಅಧಿಕಾರಿಗಳೆ ಹೇಳಿದ್ದಾರೆ. ಶ್ರೀಗಳ ಹೆಸರಿನಲ್ಲಿ ಗುರು ವಂದನೆ ಮತ್ತಿತರೆ ಕಾರ್ಯಕ್ರಮಗಳಿಗೆ ನಗರದಲ್ಲಿ ಹಣ ವಸೂಲಿ ಮಾಡುವಂತಿಲ್ಲ. ಬೇಕಿದ್ದರೆ ಸ್ವತ ಮಾಡುವವರಿದ್ದರೆ ಮಾಡಲಿ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ಸಾಕಷ್ಟು ಹುದ್ದೆಗಳ ಕೊರತೆಯಿಂದ ಜನರ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿತ್ತು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದ್ದರಿಂದ ಸುಗಮವಾಗಿ ಕೆಲಸಗಳು ಆಗುತ್ತಿವೆ. .26 ಕೋಟಿ ರೆವಿನ್ಯೂ ಸಹ ಪಾಲಿಕೆಗೆ ಬಂದಿದೆ ಎಂದರು.

Big 3: ಇತಿಹಾಸವ ಸೃಷ್ಟಿಸಿದ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ: ವಿಜಯಪುರದ ತ್ರಿಮೂರ್ತಿಗಳ ಕಾರ್ಯ ಶ್ಲಾಘನೀಯ

ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ವಾರ್ಡ್‌ ನಂ.32 ರಲ್ಲಿಯೇ ಸುಮಾರು 400ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿವಿಧ ಯೋಜನೆಗಳಲ್ಲಿ ಆದೇಶ ಪತ್ರ ನೀಡಿದ್ದೇವೆ. ಯಾವ ಸಮಸ್ಯೆಗಳು ಉಳಿಯದಂತೆ ಶಾಸಕರು ಕೆಲಸ ಮಾಡಿದ್ದಾರೆ ಎಂದರು.

ತಹಸೀಲ್ದಾರ್‌ ಸಿದರಾಯ ಬೋಸಗಿ, ಗ್ರೇಡ್‌-2 ತಹಸೀಲ್ದಾರ್‌ ಈರಪ್ಪ ತುಂಬಗಿ, ಪಾಲಿಕೆ ಸದಸ್ಯರಾದ ರಾಹುಲ್‌ ಜಾಧವ, ವಿಠ್ಠಲ ಹೊರಪೇಠ, ರಾಜು ಕುರಿ, ನಗರಸಭೆ ಮಾಜಿ ಉಪಾಧ್ಯಕ್ಷ ಸುರಪ್ಪ ಮಿರ್ಜಿ, ಶಂಕರಲಿಂಗ ದೇವಸ್ಥಾನದ ಅಧ್ಯಕ್ಷ ಮಹೇಶ ಹೆರಲಗಿ, ರೇವಣಸಿದ್ದಪ್ಪ ಗಿಡವಿರ, ಅರುಣ ಹೇರಲಗಿ, ಸಿದ್ದು ಬೆಲ್ಲದ, ಅಜೀತ ಜೋಶಿ, ಶಿವಾನಂದ ಗಿಡವಿರ ಮತ್ತಿತರರು ಇದ್ದರು.

Follow Us:
Download App:
  • android
  • ios