Asianet Suvarna News Asianet Suvarna News

JDS ಜೊತೆ ಕೈ ಜೋಡಿಸಲು ಎಸ್ ಎಂದ BJP ಶಾಸಕ : ಪ್ರತಾಪ್ ಸಿಂಹ ವಿರುದ್ಧ ಗರಂ

JDS ಜೊತೆ ಕೈ ಜೋಡಿಸುವ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

BJP May Join Hand With JDS In Mysuru Mayor Election snr
Author
Bengaluru, First Published Feb 1, 2021, 10:52 AM IST

ಮೈಸೂರು (ಫೆ.01) : ವಿಪ ಉಪಸಭಾಪತಿ ಚುನಾವಣೆಯಂತೆ ಮೈಸೂರು ನಗರ ಪಾಲಿಕೆಯಲ್ಲೂ ಜೆಡಿಎಸ್‌ ಜೊತೆ ಮೈತ್ರಿ ಸಾಧ್ಯತೆ ಇದೆ ಎಂದು ಬಿಜೆಪಿ ಶಾಸಕ ಎಲ್‌. ನಾಗೇಂದ್ರ ಹೇಳಿದ್ದಾರೆ. ಇನ್ನೂ ಮೇಯರ್‌ ಮೀಸಲಾತಿ ಪ್ರಕಟವಾಗಿಲ್ಲ. ಪ್ರಕಟವಾದ ನಂತರ ನಮ್ಮ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದಿದ್ದಾರೆ. ಸದ್ಯ ಯಾವುದೇ ಮಾತುಕತೆ ಆಗಿಲ್ಲ. ಹೈಕಮಾಂಡ್‌ ಈ ಬಗ್ಗೆ ನಿರಂತರ ಸಂಪರ್ಕದಲ್ಲಿದೆ. ಮೀಸಲಾತಿ ಪ್ರಕಟ ನಂತರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಸಂಸದರಿಗೆ ಮಾಹಿತಿ ಕೊರತೆ :  ಕಳೆದ 20 ವರ್ಷಗಳಿಂದ ಸರಿಯಾದ ಕೆಲಸಗಳಾಗಿರಲಿಲ್ಲ. ಕೆಲಸ ಮಾಡೋಕೆ ನಾವೇ ಬರಬೇಕಾಯ್ತು. ಸಂಸದರು ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಳ್ಳಬೇಕು. ನಾನು ಎಂಡಿಎನಲ್ಲಿ ಸಾಕಷ್ಟುಕೆಲಸ ಮಾಡಿದ್ದೇನೆ ಎಂದು ನಾಗೇಂದ್ರ ಹೇಳಿದ್ದಾರೆ.

ನಾನು ಹೇಳಿದಂತೆ ಯಶಸ್ವಿ ಆಗದಿದ್ರೆ ಜೆಡಿಎಸ್ ಪಕ್ಷ ವಿಸರ್ಜನೆ: ಕುಮಾರಸ್ವಾಮಿ ಶಪಥ..! .

ಎಂಡಿಎ ಸಭೆಯಲ್ಲಿ ಪ್ರತಾಪ್‌ ಸಿಂಹ ಹೇಳಿಕೆ ವಿಚಾರವಾಗಿ ಸಂಸದರಿಗೆ ಮಾಹಿತಿ ಕೊರತೆ ಇದೆ ಅನ್ನಿಸುತ್ತದೆ, ನನ್ನ ಅವಧಿಯಲ್ಲಿ  500 ಕೋಟಿಯಷ್ಟುಹಣ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮೂರು ಬಾರಿ ಪಾಲಿಕೆ ಸದಸ್ಯನಾದಾಗ, ಎಂಡಿಎ ಅಧ್ಯಕ್ಷನಾದಾಗ ಅವರು ಇರಲಿಲ್ಲ. ಆ ದಿನಗಳಲ್ಲಿ ಕೆಲಸ ಮಾಡಿದ್ದರಿಂದಲೇ ನಾನು ಈಗ ಶಾಸಕನಾಗಿರೋದು. ಸಂಸದರು ಹಿಂದಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದಿದ್ದಾರೆ.

ಇವರು ಸಂಸದರಾಗಿ 7 ವರ್ಷಗಳಾಗಿದೆ. ಇವರು ಬಂದ ಮೇಲೆ ಏನು ಬದಲಾಗಿದೆ ಅನ್ನೋದು ಮಾಹಿತಿ ನಮಗೆ, ಅವರಿಗೆ, ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಮೈಸೂರು ನಗರಕ್ಕೆ ಯಾರು ಶಕ್ತಿ ಮೀರಿ ಎಷ್ಟುಕೆಲಸ ಮಾಡಿದ್ದೇವೆ ಅನ್ನೋದು ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ನಾವು ಸಂಸದರು ಸೇರಿದಂತೆ ಮೈಸೂರಿನ ಎಲ್ಲರಿಗೂ ನಮ್ಮ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ನಾವು ಸಹ ಸಾಕಷ್ಟುಅಭಿವೃದ್ಧಿ ಮಾಡುತ್ತಿದ್ದೇವೆ. ಪಾಲಿಕೆ ಸದಸ್ಯ, ಶಾಸಕರು, ಎಲ್ಲರಿಗೂ ಎಷ್ಟುಸಾಧ್ಯ ಅಷ್ಟುಕೆಲಸ ಮಾಡುತ್ತಿದ್ದೇವೆ. ಅವರೇ ನಮ್ಮ ಕೆಲಸಗಳ ಬಗ್ಗೆ ಸಾಕಷ್ಟುಬಾರಿ ವೇದಿಕೆಗಳಲ್ಲಿ ಹೊಗಳಿದ್ದಾರೆ. ನಮ್ಮ ಕೆಲಸಗಳ ಬಗ್ಗೆ ಅವರಿಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios