Asianet Suvarna News Asianet Suvarna News

Halal Row: 'ಕೋಮು ತಿಕ್ಕಾಟ ನಿಲ್ಲಿಸಿ, ಐಟಿ ಬಿಟಿಗೆ ಬಂದ್ರೆ ಕಷ್ಟ'

*ಹಿಜಾಬ್, ಹಲಾಲ್ ವಿಚಾರಗಳು ಚರ್ಚೆಗೆ
* ಕೋಮು ಭಾವನೆ ನಿಲ್ಲಿಸಿ, ಕಿರಣ್ ಶಾ
* ಬಿಜೆಪಿ ನಾಯಕರಿಂದಲೂ ಪ್ರತಿಕ್ರಿಯೆ
* ಸೋಶಿಯಲ್ ಮೀಡಿಯಾದಲ್ಲಿ ಸಮರ

BJP Leader vs  Kiran Mazumdar Shaw Over Muslim traders Ban mah
Author
Bengaluru, First Published Mar 31, 2022, 8:35 PM IST

ಬೆಂಗಳೂರು(ಮಾ. 31)  ಹಿಜಾಬ್, (Hija) ಹಲಾಲ್ ಹೀಗೆ ವಿಚಾರಗಳು ಗಿರಕಿ ಹೊಡಿಯುತ್ತಿರಿವಾಗ ಬಯೋಕಾನ್(Biocon) ಕಿರಣ್ ಮಜುಂದಾರ್ ಷಾ ( Kiran Mazumdar Shaw ) ಮಾಡಿರುವ  ಟ್ವೀಟ್  ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. ಬಿಜೆಪಿ (BJP) ನಾಯಕ ಸಿಟಿ ರವಿ (CT Ravi) ಮತ್ತು ಸಚಿವ ಆರ್ ಅಶೋಕ್ (R Ashok) ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಮುಸ್ಲಿಂ (Muslim) ವ್ಯಾಪಾರಿಗಳ ಜತೆ ವ್ಯಾಪಾರ ನಿಲ್ಲಿಸಬೇಕು ಎಂದು ಎಂದು ಸಂಘಟನೆಗಳು ಪಟ್ಟು ಹಿಡಿದಿರುವ ಸಂದರ್ಭ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಷಾ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಕಂಡುಬರುತ್ತಿರುವ ಕೋಮು ವಿಭಾಗ ಭಾವನೆಯನ್ನು ನಿಯಂತ್ರಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಒತ್ತಾಯ ಮಾಡಿದ್ದಾರೆ.

ಈ ಕೋಮು ವಿಭಾಗೀಯ ಭಾವನೆ ಏನಾದರೂ ಐಟಿ ಬಿಟಿ ಕ್ಷೇತ್ರದಲ್ಲಿ ಕಾಣಿಸಿಕೊಂಡರೆ ಅಪಾಯ ಇದೆ. ಗ್ಲೋಬಲ್ ಲೀಡರ್ ಶಿಪ್ ನ್ನು ಕಳೆದುಕೊಳ್ಳಬೇಕಾಗುತ್ತದೆ. ಗಾಗಾಗಿ ಈಗ ನಡೆಯುತ್ತಿರುವ ಬೆಳವಣಿಗೆ ನಿಲ್ಲಿಸಲು ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಿದ್ದಾರೆ.

Halal Row ಕುಮಾರಸ್ವಾಮಿ ಮಾತಿಗೆ ಉತ್ತರ ಕೊಡೋಕೆ ನಾನು ಇಲ್ಲಿರೋದಲ್ಲ ಎಂದ ಸಿಎಂ!

ರಾಜ್ಯ ಬಹಳ ಅಭಿವೃದ್ಧಿ ಪರವಾಗಿ ನಡೆಯುತ್ತಿದೆ. ಆತಂಕ ಪಡುವಂತ ವಿಚಾರ ಇಲ್ಲ. ಹಿಜಾಬ್ ನಲ್ಲಿ ಹೈಕೋರ್ಟ್ ಸ್ಪಷ್ಟ ನೀಲುವು ನೀಡಿದೆ.  ಸರ್ಕಾರ ಪಾಲನೆ ಮಾಡ್ತಿದೆ. ನಾಲ್ಕೈದು ಜನರು ಬಿಟ್ಟರೆ ಮುಸ್ಲಿಂಮರು ಬಾಂಧವ್ಯದ ಸ್ವಾಗತ ಮಾಡಿದ್ದಾರೆ.  ಹಲಾಲ್ ವಿಚಾರ  ದಿನನಿತ್ಯ ಮಾಧ್ಯಮದಲ್ಲಿ ಬರ್ತಿದೆ. ಇದು ಒಳ್ಳೆಯದಲ್ಲ. ಸರ್ಕಾರ ಸ್ಪಷ್ಟ ನಿಲುವು ಹೇಳಿದೆ

ಆಹಾರ ಪದ್ದತಿ ಅವರ ಸ್ವ ಇಚ್ಛೆ. ಯಾವ ಅಂಗಡಿಯಲ್ಲಿ ತಗೋಬೇಕು ಎಂಬುದು ಅವರ ಸ್ವಾತಂತ್ರ್ಯ. ಎರಡೂ ಸಮುದಾಯಲ್ಲಿ ಮಾಡ್ತಿದ್ದಾರೆ, ಯಾವ ಕಿಡಿಗೇಡಿಗಳು ಮಾಡಿದ್ದಾರೆ ಇದೆಲ್ಲ ಒಳ್ಳೆಯದಲ್ಲ. ಇದು ಸಂವಿಧಾನದ ವಿರೋಧ ಕೂಡ. ಬೊಮ್ಮಾಯಿ‌ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಕಾನೂನು ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ  ಇದಕ್ಕಾಗಿ ಯಾವ ವರ್ಗದವರು ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿಟಿ ರವಿ, ಹಲಾಲ್ ಯಾರು ಪ್ರಾರಂಭಿಸಿದ್ರು? ಕೆ ಪ್ರಾರಂಭಿಸಿದ್ರು ಅಂತ? ಇದು ಆರ್ಥಿಕ ಜಿಹಾದ್ ಅಂತ ಸೂಟ್ ಆಗುತ್ತೆ. ಒಂದು ಪ್ರಾಡಕ್ಟ್ ಗುಣಮಟ್ಟ ಪರೀಕ್ಷಿಸಿ ISI ಸರ್ಟಿಫಿಕೇಟ್ ಕೊಡ್ತಾರೆ. ಹಲಾಲ್ ಸರ್ಟಿಫಿಕೇಟ್ ಕೊಡೋದು ಯಾರು.?  ಸರ್ಕಾರಾನಾ, ಇಲಾಖೆನಾ, ಪ್ಯೂರಿಟಿಗೆ ಕೊಡುವ ಸರ್ಟಿಫಿಕೇಟಾ.? ಪ್ಯೂರಿಟಿ ಇದ್ರೆ, ಹಲಾಲ್ ಬಗ್ಗೆ ಮಾತನಾಡಲು ಯಾರೂ ಹೋಗಬೇಡಿ, ಹರಾಮ್ ಆಗುತ್ತೆ ಅಂತ ನಾನೇ ಮನವಿ ಮಾಡ್ತೀನಿ. ಸರ್ಟಿಫಿಕೇಟ್ ಹಾಕೊಂಡ್ರೆ ಮಾತ್ರ ಜಾತ್ಯತೀತ ಆಗ್ತಾರಾ.? ರಾದ್ರೂ ಬುದ್ಧಿಜೀವಿಗಳು ಈ ಬಗ್ಗೆ ಹೇಳಿದ್ರೆ ಕೇಳ್ತೀನಿ. ದೆ ಆಲ್ ಮೈ ಬ್ರದರ್ ಅಂತ ಹೇಳುವವರೂ ಹಲಾಲ್ ಬಗ್ಗೆ ಬೆಳಕು ಚೆಲ್ಲಲಿ ಎಂದರು.

ಪ್ರಧಾನಿ ಮೋದಿ ಎಲ್ಲಾ ಧರ್ಮದವರಿಗೂ ಎಲ್ಲಾ ಯೋಜನೆ ನೀಡಿದ್ದಾರೆ. ಇತರೆ ಪಕ್ಷಕ್ಕಿಂತ, ಬಿಜೆಪಿಯೇ ಹೆಚ್ಚು ಅಭಿವೃದ್ಧಿ ಮಾಡಿದೆ. ಎಲ್ಲಾ ಸಮುದಾಯಕ್ಕೆ ಎಲ್ಲಾ ಯೋಜನೆ ನೀಡಿದೆ. ಸಬ್ ಕಾ ಸಾತ್, ಸನ್ ಕಾ ವಿಕಸ್, ಸಬ್ ಕಾ ವಿಶ್ವಾಸ್ ಅಡಿಯಲ್ಲಿ ಹೋಗ್ತಿದ್ದೀವಿ. ಎಲ್ಲಾ ಯೋಜನೆ ನೀಡೊದ್ರೂ ಒಂದು ಕಮ್ಯುನಿಟಿ ಬಿಜೆಪಿಗೆ ಮತ ಹಾಕಲ್ಲ ಯಾಕೆ.? ಇದು ಮತೀಯ ನಿರ್ಧಾರ ಅಲ್ವಾ.? ಎಲ್ಲಾ ಯೋಜನೆ ಕೊಟ್ಟ ಬಳಿಕವೂ ಓಟ್ ಹಾಕದಿದ್ರೆ ಏನಂತಾರೆ ಎಂದರು.

ಕಿರಣ್ ಮಜುಂದಾರ್ ಶಾ ಟ್ವೀಟ್ ಬಗ್ಗೆ ಸಿಟಿ ರವಿ ಪ್ರತಿಕ್ರಿಯೆ ನೀಡಿ, ಅವರು ಹೇಳಿದ್ದು ಸರಿ ಇದೆ. ಕೋಮುವಾದ ಬರಬಾರದು ಆದ್ರೆ ಅದೇ ರೀತಿ ಹಲಾಲ್ ಕ್ವಾಲಿಟಿಗಾ ಹಲಾಲ್ ಸೀಲ್ ಕ್ವಾಲಿಟಿಗೆ ಎನ್ನೋದಾದರೆ ನಾನು ವಿಷಾದ ವ್ಯಕ್ತಪಡಿಸ್ತೇನೆ ಎಂದಿದ್ದಾರೆ.


'

 

 

 


 

Follow Us:
Download App:
  • android
  • ios