ಬಾಗಲಕೋಟೆ: ನೌಕರಿ ಆಸೆ ತೋರಿಸಿ ಲಕ್ಷ ಲಕ್ಷ ಪೀಕಿದ ಬಿಜೆಪಿ ಮುಖಂಡ?

ಕೆಲಸ ಕೊಡಿಸುವುದಾಗಿ ಹೇಳಿ ಬಿಜೆಪಿ ಮುಖಂಡನಿಂದ ಲಕ್ಷಾಂತರ ರೂ. ವಂಚನೆ| ರಾಘವೇಂದ್ರ ಎಂಬುವರ ಮೇಲೆ ಕೇಳಿ ಬಂದ ಆರೋಪ| ಮದ್ಯವರ್ತಿ ಅಶೋಕ ಎಂಬುವರಿಂದ ಆರೋಪ| ಮಾರ್ಚ್‌ 3 ರಿಂದ ನಾಪತ್ತೆ‌ಯಾದ ಅಶೋಕ| 

BJP Leader Raghavendra Cheat to People in Bagalkot

ಬಾಗಲಕೋಟೆ(ಮಾ.11): ಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬಿಜೆಪಿ ಮುಖಂಡರೊಬ್ಬರು ಲಕ್ಷಾಂತರ ರೂ. ವಂಚನೆ ಮಾಡಿರುವ ಆರೋಪ ಬಾಗಲಕೋಟೆಯಲ್ಲಿ ಕೇಳಿ ಬಂದಿದೆ.

ಬಿಜೆಪಿ ಮುಖಂಡ ರಾಘವೇಂದ್ರ ಎಂಬುವರ ಮೇಲೆ ವಂಚನೆ ಆರೋಪ ದಾಖಲಾಗಿದೆ. ವಂಚನೆಗೊಳಗಾದ ಮದ್ಯವರ್ತಿ ಅಶೋಕ ಎಂಬುವರು ಆರೋಪ ಮಾಡಿದ್ದಾರೆ.
ರಾಘವೇಂದ್ರ ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸ ಕೊಡಿಸುವುದಾಗಿ ಆಸೆ ತೋರಿಸಿ ಒಟ್ಟು 24.5 ಲಕ್ಷ ರೂ. ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಹೇಳಲಾಗಿದೆ. ರಾಘವೇಂದ್ರ ಆರು ಜನ ಯುವಕರಿಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು. 

BJP Leader Raghavendra Cheat to People in Bagalkot

ಮಾರ್ಚ್‌ 3 ರಿಂದ ಅಶೋಕ ಸಹ ನಾಪತ್ತೆ‌ಯಾಗಿದ್ದಾರೆ. ಈ ಸಂಬಂಧ ಅಶೋಕ ಪತ್ನಿ ಸುಖದೇವಿ ಅವರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Latest Videos
Follow Us:
Download App:
  • android
  • ios