ಬಿಜೆಪಿ ಮಾಜಿ ಶಾಸಕರ ಪುತ್ರ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ ಬಿಜೆಪಿ ಮುಖಂಡ ವೀರಭದ್ರಪ್ಪ ಹಾಲಹರವಿ ಪುತ್ರ ಸೂರಜ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

BJP Former MLA veerabhadrappa Halaharavi Son Committed Suicide

ಹುಬ್ಬಳ್ಳಿ (ಸೆ.08): ಬಿಜೆಪಿ ಮಾಜಿ ಶಾಸಲ ವೀರಭದ್ರಪ್ಪ ಹಾಲಹರವಿ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೀರಭದ್ರಪ್ಪ ಪುತ್ರ ಸೂರಜ್ ಹಾಲಹರವಿ (18) ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಹುಬ್ಬಳ್ಳಿ ದೇಶಪಾಂಡೆನಗರದಲ್ಲಿನ ಮನೆಯಲ್ಲಿ ಈ ಘಟನೆ ನಡೆದಿದೆ. 

ಆದರೆ ಸೂರಜ್ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ವಿಚಾರ ಮಾತ್ರ ಹೊರ ಬಿದ್ದಿಲ್ಲ. 

ಉಪ್ಪು ತಿಂದವರು ನೀರು ಕುಡಿಯಲೇಕು, ಇದು ಇಷ್ಟಕ್ಕೆ ಮುಗಿಯಲ್ಲ: ಸಂಜನಾಗೆ ಸಂಬರಗಿ ವಾರ್ನಿಂಗ್!

ಹಾಲಹರವಿ ಪುತ್ರನಿಗೆ  ಯಾವುದೇ ರೀತಿ ಸಮಸ್ಯೆ ಇರಲಿಲ್ಲ. ಆರೋಗ್ಯ ವಂತರಾಗಿಯೇ ಇದ್ದ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆಯೂ ಇರಲಿಲ್ಲ ಎನ್ನಲಾಗಿದೆ. 

ಈ ಸಂಬಂಧ ಉಪ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ, 

ರಾಗಿಣಿ ಸೇವಿಸುತ್ತಿದ್ದ ಒಂದು ಮಾತ್ರೆಗೆ 3000 ರು..
 
ಸೂರಜ್ ತಂದೆ ವೀರಭದ್ರಪ್ಪ ಹಾಲಹರವಿ 2008ರಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಗೆದ್ದು ಬಿಜೆಪಿ ಶಾಸಕರಾಗಿದ್ದರು. 

Latest Videos
Follow Us:
Download App:
  • android
  • ios