ಬಿಜೆಪಿಯಿಂದ 6 ಮಂದಿ ಉಚ್ಛಾಟನೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Aug 2018, 4:01 PM IST
BJP expels 6 rebel leaders in Mysuru
Highlights

ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ 6 ನಾಯಕರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ

ಮೈಸೂರು[ಆ.31]: ನಗರ ಪಾಲಿಕೆ ಹಾಗೂ ಪುರಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿರುವ ಇನ್ನೂ ಆರು ಮಂದಿಯನ್ನು ಬಿಜೆಪಿ ಉಚ್ಛಾಟಿಸಿದೆ.

ನಗರ ಪಾಲಿಕೆ 58ನೇ ವಾರ್ಡಿನಲ್ಲಿ ಕಣದಲ್ಲಿರುವ ರಾಕೇಶ್, 44ನೇ ವಾರ್ಡಿನಿಂದ ಸ್ಪರ್ಧಿಸಿರುವ ಕೆ.ಎನ್. ಶೋಭಾ, ಟಿ. ನರಸೀಪುರ ಪುರಸಭೆ 4ನೇ ವಾರ್ಡಿನ ಎಲ್. ಮಂಜುನಾಥ್, 7ನೇ ವಾರ್ಡಿನ ಲಕ್ಷ್ಮೀ, ಎಚ್. ಡಿ. ಕೋಟೆ ಪುರಸಭೆ 12ನೇ ವಾರ್ಡಿನ ವಿಶ್ವರಾಧ್ಯ, 21ನೇ ವಾರ್ಡಿನ ಉಮೇಶ ಅವರು ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿರುವುದರಿಂದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ. ಶಿವಣ್ಣ ತಿಳಿಸಿದ್ದಾರೆ. ಈ ಹಿಂದೆಯೇ ಏಳು ಮಂದಿಯನ್ನು ಉಚ್ಛಾಟಿಸಲಾಗಿತ್ತು.

loader