ಮಂಡ್ಯ(ಜ.03): ಕೆ.ಆರ್. ಪೇಟೆ ನಂತರ ಕಮಲ ಪಾಳಯ ಇದೀಗ ಮದ್ದೂರಲ್ಲಿ ಅಧಿಪತ್ಯ ಸಾಧಿಸಲು ಸಜ್ಜಾಗಿದೆ. ಜೆಡಿಎಸ್ ಭದ್ರಕೋಟೆ ಕೆ.ಆರ್. ಪೇಟೆಯಲ್ಲಿ ವಿಜಯ ಮತಾಕೆ ಹಾರಿಸಿದ ಬಿಜೆಪಿ ಇದೀಗ ಮದ್ದೂರಿನಲ್ಲಿ ಕಮಲ ಅರಳಿಸಲು ಸಜ್ಜಾಗಿದೆ.

 ಕೆ.ಆರ್.ಪೇಟೆ ಬಳಿಕ ಬಿಜೆಪಿ ಮದ್ದೂರನ್ನು ಟಾರ್ಗೆಟ್ ಮಾಡಿದ್ದು, ಮದ್ದೂರಿನಲ್ಲಿ ಅಧಿಪತ್ಯ ಸಾಧಿಸಲು ಕಮಲ ಪಡೆ ಪ್ಲಾನ್ ಮಾಡಿದೆ. ಕೆ.ಆರ್‌. ಪೇಟೆಯಲ್ಲಿ ಗೆದ್ದು ಬೀಗಿದ ಕಮಲ ಪಡೆ ಮುಂದಿನ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.

ನೇತ್ರಾವತಿಗೆ ಮತ್ತೊಬ್ಬ ಆಹುತಿ: ಸಿದ್ಧಾಥ್‌ ಹೆಗ್ಡೆ ಆತ್ಮಹತ್ಯೆ ಸ್ಥಳದಲ್ಲಿಯೇ ನದಿಗೆ ಹಾರಿದ ಯುವಕ

ಮುಂದಿನ ಚುನಾವಣೆಯ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಸ್ವಾಮಿಯಿಂದ ಸಿದ್ಧತೆ ಆರಂಭವಾಗಿದೆ. ಬಿಜೆಪಿ ನಾಯಕರ ಅಣತಿಯಂತೆ ಪಕ್ಷ ಬಲವರ್ಧನೆಗೆ ಸ್ವಾಮಿ ತಂತ್ರ ರೂಪಿಸಿದ್ದಾರೆ. ಮನ್ಮುಲ್ ನಿರ್ದೇಶಕ ಹಾಗೂ ಜಿಪಂ ಅಧ್ಯಕ್ಷೆ ನಾಗರತ್ನ ಪತಿ ಸ್ವಾಮಿ ಪಕ್ಷ ಬಲವರ್ಧನೆಗೆ ಸಜ್ಜಾಗಿದ್ದಾರೆ.

ಜೆಡಿಎಸ್ ಪ್ರಭಾವಿ ಮುಖಂಡರಾಗಿದ್ದ ಸ್ವಾಮಿ ಮನ್ಮುಲ್ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು. ಮದ್ದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ಸ್ವಾಮಿ ಪುತ್ರನ ಹುಟ್ಟುಹಬ್ಬದ ಹೆಸರಲ್ಲಿ ಇಂದು ಬೃಹತ್ ಆರೋಗ್ಯ ಮೇಳ ಆಯೋಜನೆ ಮಾಡುತ್ತಿದ್ದಾರೆ. ಆ ಮೂಲಕ ಈಗಿನಿಂದಲೇ ಜನರನ್ನು ತಲುಪುವ ತಂತ್ರವನ್ನು ರೂಪಿಸಿದ್ದಾರೆ.

ಕೊಂಬಿನಿಂದಲೇ ತೊಟ್ಟಿಲು ತೂಗಿ ಮಗು ಮಲಗಿಸಿದ ಬಸವ

ಹೆಸರಿಗೆ ಆರೋಗ್ಯ ಮೇಳವಾದ್ರೂ ಕಾರ್ಯಕ್ರಮ ಮಾತ್ರ ಬಿಜೆಪಿ ಸಮಾವೇಶದಂತೆ ಬಿಂಬಿತವಾಗಿದೆ. ಮದ್ದೂರಿನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಮೇಳದಲ್ಲಿ ಡಿಸಿಎಂ ಅಶ್ವತ್ ನಾರಾಯಣ್, ಸಚಿವ ಆರ್.ಅಶೋಕ್, ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ಬಿಜೆಪಿ ಮುಖಂಡು ಭಾಗಿಯಾಗಲಿದ್ದಾರೆ.