ಹಳೆಯ ಮನೆ ರಿಪೇರಿ ಮಾಡುವ ಪ್ಲಂಬರ್‌ಗೆ ಸಿಕ್ತು ನಿಧಿ; ಕೆಜಿಗಟ್ಟಲೆ ಚಿನ್ನದ ನಾಣ್ಯ ಲಭ್ಯ!
ರಾಜಮನೆತನ ಆಳ್ವಿಕೆ ಮಾಡಿದ ಈ ಊರಿನಲ್ಲಿ ಪ್ಲಂಬರ್ ಹಳೆಯ ಕಟ್ಟಡವನ್ನು ನವೀಕರಣ ಮಾಡುವಾಗ ನೆಲದಲ್ಲಿ ಕಂಡುಬಂದ ನಿಗೂಢ ಹಗ್ಗವನ್ನು ಪರಿಶೀಲಿಸಿದಾಗ ಅದರ ಜಾಡು ಹಿಡಿದು ಅಗೆದಾಗ ದೊಡ್ಡ ನಿಧಿ ಭಂಡಾರವೇ ಸಿಕ್ಕಿದೆ.
ಜಾಗತಿಕ ಮಟ್ಟದಲ್ಲಿ ಯಾವುದೇ ರಾಜಮನೆತನ ಆಳ್ವಿಕೆ ಮಾಡಿದ ಈ ಪ್ರದೇಶಗಳಲ್ಲಿ ಆಗಾಗ ಮನೆ ನಿರ್ಮಾಣ ಹಾಗೂ ನವೀಕರಣ ವೇಳೆ ನಿಧಿ ಸಿಗುತ್ತವೆ. ಅದೇ ರೀತಿ ಇಲ್ಲೊಬ್ಬ ಪ್ಲಂಬರ್ ಹಳೆಯ ಕಟ್ಟಡವನ್ನು ನವೀಕರಣ ಮಾಡಿ ಪೈಪ್ ಅಳವಡಿಸುವಾಗ ನೆಲದ ಸ್ವಲ್ಪ ಆಳದಲ್ಲಿ ಕಂಡುಬಂದ ನಿಗೂಢ ಹಗ್ಗ ಕಂಡಿದೆ. ಅದರ ಜಾಡು ಹಿಡಿದು ಭೂಮಿ ಅಗೆಯುತ್ತಾ ಹೋದಾಗ ಆತನಿಗೆ ದೊಡ್ಡ ನಿಧಿ ಭಂಡಾರವೇ ಸಿಕ್ಕಿದೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಬಂಗಾರ, ಬೆಳ್ಳಿ, ವಜ್ರ, ವೈಡೂರ್ಯಗಳನ್ನು ಬೀದಿಗಳಲ್ಲಿ ಸೇರಿನಲ್ಲಿ ತುಂಬಿ ಅಳೆದು ಮಾರುತ್ತಿದ್ದ ವಿಜಯನಗರ ಸಮ್ರಾಜ್ಯದ ಹಂಪಿ, ಉಳಿದಂತೆ ಹಲವು ರಾಜಮನೆತನಗಳ ರಾಜಧಾನಿಗಳಾದ ಬೇಲೂರು, ಹಳೆಬೀಡು, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೀದರ್, ಮುಳಖೇಡ, ತಲಕಾಡು ಸೇರಿ ಕೆಲವೊಂದು ಪ್ರದೇಶಗಳಲ್ಲಿ ಈಗಲೂ ಎಲ್ಲೆಂದಲ್ಲಿ ಭೂಮಿಯನ್ನು ಅಗೆಯುವಂತಿಲ್ಲ. ಇಲ್ಲಿ ಪುರಾತತ್ವ ಇಲಾಖೆ ನಿಗದಿ ಮಾಡಿದ ಕೆಲವೊಂದಿಷ್ಟು ಪ್ರದೇಶದಲ್ಲಿ ಯಾರೂ ಮನೆ ನಿರ್ಮಾಣ ಮಾಡುವಂತಿಲ್ಲ. ಹಂಪಿ ಸುತ್ತಲಿನ ಗ್ರಾಮಗಳಲ್ಲಿ ಯಾರೇ ಮನೆ ನಿರ್ಮಾಣಕ್ಕೆ ಪಾಯ ಅಗೆಯುವುದು, ಬಾವಿ ತೋಡುವುದಕ್ಕೆ, ಗುಂಡಿ ಅಗೆಯಲಿಕ್ಕೆ ಹಾಗೂ ಇತರೆ ನಿರ್ಮಾಣ ಕಾರ್ಯಗಳಿಗೆ ಭೂಮಿಯನ್ನು ಅಗೆಯುವಂತಿಲ್ಲ. ಒಂದು ವೇಳೆ ಅಗೆಯಬೇಕೆಂದರೂ ಸ್ಥಳೀಯ ಆಡಳಿತ ಸಂಸ್ಥೆಯ ಅನುಮತಿ ಪಡೆದುಕೊಂಡು ಅವರ ಸಮಕ್ಷಮದಲ್ಲಿಯೇ ಅಗೆಯಬೇಕು. ಆಗ ಭೂಮಿಯಲ್ಲಿ ಒಂದು ವೇಳೆ ನಿಧಿ ಸಿಕ್ಕಿದರೆ ಅದನ್ನು ಸರ್ಕಾರಕ್ಕೆ ಒಪ್ಪಿಸಲಾಗುತ್ತದೆ.
ಆದರೆ, ಯುರೋಪ್ ಖಂಡದಲ್ಲಿ ಸುಮಾರು ದಶಕಗಳ ಕಾಲ ಆಸ್ಟ್ರಿಯಾದಲ್ಲಿ ಆಳ್ವಿಕೆ ನಡೆಸಿದ ಆಸ್ಟ್ರಿಯಾ ರಾಜಮನೆತನವು ವಿಯೆನ್ನಾ ನಗರವನ್ನು ರಾಜಧಾನಿಯಾಗಿ ಮಾಡಿಕೊಂಡು ಸುಮಾರು ನೂರಾರು ವರ್ಷಗಳ ಕಾಲ ಆಳ್ವಿಕೆ ಮಾಡಿದೆ. ಇದೊಂದು ಐತಿಹಾಸಿಕ ಪರಂಪರೆಯ ನಗರವಾಗಿದ್ದು, ಇಲ್ಲಿ ಹಳೆಯ ಮನೆಯೊಂದನ್ನು ನವೀಕರಣ ಮಾಡುವಾಗ ಪೈಪ್‌ಲೈನ್ ಅಳವಡಿಕೆಗಾಗಿ ಭೂಮಿ ಅಗೆಯುವಾಗ ಒಂದು ಅಪರೂಪದ ಹಗ್ಗ ಸಿಕ್ಕಿದೆ. ಈ ಹಗ್ಗ ಏನೆಂದು ಅದನ್ನು ಹಿಡಿದು ಎಳೆದರೂ ಬಾರದ ಹಿನ್ನೆಲೆಯಲ್ಲಿ ಹಗ್ಗ ಎಷ್ಟು ಉದ್ದವಿದೆ ಎಂದು ನೋಡಲು ಭೂಮಿಯನ್ನು ಅಗೆದಿದ್ದಾನೆ. ಅವನಿಗೆ ಆಶ್ಚರ್ಯವೇ ಕಾದಿತ್ತು.
ಇದನ್ನೂ ಓದಿ: ಬ್ರಿಟೀಷ್ ಇತಿಹಾಸದಲ್ಲಿ 950 ವರ್ಷದ ಹಿಂದಿನ ಅತಿದೊಡ್ಡ ನಿಧಿ ಪತ್ತೆ!
ಆ ಹಗ್ಗದ ಜಾಡು ಹಿಡಿದು ಭೂಮಿ ಅಗೆದವನಿಗೆ ತುಕ್ಕು ಹಿಡಿದ ಲೋಹದ ಪೆಟ್ಟಿಗೆಯೊಂದು ಪತ್ತೆಯಾಗಿದೆ. ಸುಮಾರು 2.4 ಮಿಲಿಯನ್ ಡಾಲರ್ ಮೌಲ್ಯದ 66 ಪೌಂಡ್ ತೂಕದ ಚೆನ್ನದ ನಾಣ್ಯಗಳು ಈ ಪೆಟ್ಟಿಗೆಯಲ್ಲಿ ಇದ್ದವು. ಎರಡನೇ ಮಹಾಯುದ್ಧದ ಕಾಲದ ಚಿನ್ನದ ನಾಣ್ಯಗಳಿವು. ಪ್ರತಿ ನಾಣ್ಯದ ಮೇಲೂ ಮೊಜಾರ್ಟ್‌ನ ಚಿತ್ರ ಮುದ್ರಿತವಾಗಿತ್ತು. 15 ವರ್ಷಗಳಿಂದ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದೀನಿ, ಆದರೆ ಇಂಥದ್ದೊಂದು ಘಟನೆ ಮೊದಲ ಬಾರಿ ನನ್ನ ಜೀವನದಲ್ಲಿ ನಡೆದಿದೆ ಎಂದು ಪ್ಲಂಬರ್ ಹೇಳಿಕೊಂಡಿದ್ದಾರೆ.
ಆಸ್ಟ್ರಿಯಾದಲ್ಲಿ ನಿಧಿ ಪತ್ತೆಯಾದಾಗ ಅದನ್ನು ಹಂಚಿಕೊಳ್ಳುವ ಕಾನೂನಿದೆ. ನಿಧಿ ಸಿಕ್ಕವರಿಗೂ ಮತ್ತು ನಿಧಿ ಇದ್ದ ಜಾಗದ ಮಾಲೀಕರಿಗೂ ಸಮಾನವಾಗಿ ಹಂಚಿಕೊಳ್ಳಬೇಕು. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಇದೇ ರೀತಿಯ ಎರಡು ಘಟನೆಗಳು ವರದಿಯಾಗಿವೆ. ಏಳು ಜನ ಸ್ನೇಹಿತರ ತಂಡವೊಂದು ರೈತನೊಬ್ಬನ ಜಮೀನಿನಲ್ಲಿ 5.6 ಮಿಲಿಯನ್ ಡಾಲರ್ ಮೌಲ್ಯದ 2,584 ಬೆಳ್ಳಿ ನಾಣ್ಯಗಳನ್ನು ಪತ್ತೆ ಹಚ್ಚಿತ್ತು. 1066 ರಿಂದ 1088 ರವರೆಗಿನ ಕಾಲದ ಬೆಳ್ಳಿ ನಾಣ್ಯಗಳಿವು. ಇನ್ನೊಂದು ಪ್ರಕರಣದಲ್ಲಿ, ಇಂಗ್ಲೆಂಡ್‌ನ ದಂಪತಿಗಳು ತಮ್ಮ ಮನೆಯ ನವೀಕರಣದ ವೇಳೆ 100 ನಾಣ್ಯಗಳನ್ನು ಕಂಡುಹಿಡಿದಿದ್ದರು. 17 ನೇ ಶತಮಾನದ ಕಟ್ಟಡವನ್ನು ನವೀಕರಿಸುವಾಗ ಮೊದಲ ಇಂಗ್ಲಿಷ್ ಅಂತರ್ಯುದ್ಧದ ಕಾಲದ ನಾಣ್ಯಗಳು ಅವರಿಗೆ ಸಿಕ್ಕಿದ್ದವು.
ಇದನ್ನೂ ಓದಿ: ನಿಧಿ ಶೋಧಕರಿಗೆ ಬೆಟ್ಟದಲ್ಲಿ 1000 ವರ್ಷ ಹಳೆಯ ಚಿನ್ನದ ನಾಣ್ಯ ಸಿಕ್ಕಿದೆ!
ಇನ್ನು ಭಾರತದಲ್ಲಿ ಎಲ್ಲಿಯೇ ನಿಧಿ ಸಿಕ್ಕಿದರೂ ಅದು ಸರ್ಕಾರದ ಆಸ್ತಿಯಾಗಿದೆ. ಇದರಲ್ಲಿ ಸಾರ್ವಜನಿಕರ ಪಾಲು ಇಲ್ಲ. ಇನ್ನು ಸರ್ಕಾರ ಈ ನಿಧಿಯನ್ನು ವಶಕ್ಕೆ ಪಡದ ನಂತರ ಮನಸ್ಸಿದ್ದರೆ ಒಂದು ಪ್ರಶಂಸೆ ಪತ್ರವನ್ನು ನೀಡಲಿದೆ. ಇಲ್ಲವಾದಲ್ಲಿ ನಿಧಿ ಶೋಧನೆ ಮಾಡಿದ ವ್ಯಕ್ತಿಗೆ ಬಿಡಿಗಾಸೂ ಸಿಗುವುದಿಲ್ಲ. ಬೇರೆ ಬೇರೆ ದೇಶಗಳಲ್ಲಿ ನಿಧಿ ಸಿಕ್ಕವರಿಗೇ ಅದನ್ನು ಕೊಡಲಾಗುತ್ತದೆ.