Asianet Suvarna News Asianet Suvarna News

ಕೊರೋನಾ ಕಾಟ: ಆಫೀಸ್‌ಗಳಲ್ಲಿ ಬಯೋಮೆಟ್ರಿಕ್‌ ಲಾಗಿನ್‌ಗೆ ಬ್ರೇಕ್..?

ಕೊರೋನಾ ವೈರಸ್ ಆತಂಕ ಎಲ್ಲೆಡೆ ಹಬ್ಬಿದೆ. ಇದೀಗ ಸರ್ಕಾರಿ ಸೇರಿ ಖಾಸಗಿ ಆಫೀಸ್‌ಗಳಲ್ಲಿಯೂ ಬಯೋಮೆಟ್ರಿಕ್ ಲಾಗಿನ್‌ಗಳನ್ನು ಸ್ಥಗಿತಗೊಳಿಸುವ ಬಗ್ಗೆ ಚಿಂತಿಸಲಾಗಿದೆ.

 

Biometrics login to be canceled in offices due to coronavirus
Author
Bangalore, First Published Mar 7, 2020, 3:50 PM IST
  • Facebook
  • Twitter
  • Whatsapp

ಮೈಸೂರು(ಮಾ.07): ಕೊರೋನಾ ವೈರಸ್ ಆತಂಕ ಎಲ್ಲೆಡೆ ಹಬ್ಬಿದೆ. ಇದೀಗ ಸರ್ಕಾರಿ ಸೇರಿ ಖಾಸಗಿ ಆಫೀಸ್‌ಗಳಲ್ಲಿಯೂ ಬಯೋಮೆಟ್ರಿಕ್ ಲಾಗಿನ್‌ಗಳನ್ನು ಸ್ಥಗಿತಗೊಳಿಸುವ ಬಗ್ಗೆ ಚಿಂತಿಸಲಾಗಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿದ್ದಾರೆ.

ಮೈಸೂರಿನಲ್ಲಿ ರಾಜ್ಯದಲ್ಲಿ ಈವರೆಗೆ ಒಂದೆ ಒಂದು ಕೋರೋನಾ ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದಲ್ಲಿ ಗ್ರಾಮಪಂಚಾಯಿತಿ ವ್ತಾಪ್ತಿಯಿಂದ ಹಿಡಿದು ನಗರ ಪ್ರದೇಶದ ಎಲ್ಲ ಸ್ಥಳದಲ್ಲು ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ‌ದಿಂದ ಟಾಸ್ಕ್ ಫೋರ್ಸ್‌ ರಚಿಸಿ ಕೋರೋನಾ ಪ್ರಕರಣಗಳ ಮೇಲೆ ನಿಗಾ ವಹಿಸಲಾಗಿದೆ ಎಂದಿದ್ದಾರೆ.

ಕೊರೋನಾ ಭಯನಾ? ಹೋರಾಡಲು ರೆಡಿಯಾಗಲಿ ನಮ್ಮೊಳಗಿನ ಸೈನಿಕರು!

ನಮ್ಮ ಸರ್ಕಾರದ ಮುಂಜಾಗ್ರತಾ ಕ್ರಮದಿಂದಾಗಿ ಕರ್ನಾಟಕಕ್ಕೆ ಕೋರೋನಾ ಬಂದಿಲ್ಲ‌. ಲಕ್ಷಾಂತರ ಜನ ನಿತ್ಯ ರಾಜ್ಯದಿಂದ ಓಡಾಟ ಮಾಡ್ತಿದ್ರು ಒಂದೆ ಒಂದು ಪ್ರಕರಣ ಪತ್ತೆಯಾಗಿಲ್ಲ. ರಾಜ್ಯದ ಕಾರ್ಪೋರೇಟ್ ಹಾಗೂ ಐಟಿ ಕಂಪನಿಯಲ್ಲಿ ಬಯೋಮೆಟ್ರಿಕ್ ಲಾಗ್‌ಇನ್ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ

ಸರ್ಕಾರಿ ಕಚೇರಿಗಳಲ್ಲು ಬಯೋಮೆಟ್ರಿಕ್ ಲಾಗ್ಇನ್ ನಿಲ್ಲಿಸುವಂತೆ ಶೀಘ್ರದಲ್ಲೇ ಆದೇಶ ಮಾಡುತ್ತೇವೆ ಎಂದು ಹೇಳಿದ್ದಾರೆ. ಕೋರೋನ ಪತ್ತೆಗಾಗಿ ಹೊಸ ಯಂತ್ರಗಳನ್ನ ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios