ಮೈಸೂರು[ಫೆ.21]: ಬಸ್‌ಗಾಗಿ ಕಾಯುತ್ತಿದ್ದವರಿಗೆ ಬೈಕ್ ಗುದ್ದಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಅತಿ ವೇಗವಾಗಿ ಸ್ಕೂಟರ್‌ ಬಂದ ಕಾರಣ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ.

ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಸ್ಕೂಟರ್ ಗುದ್ದಿದ್ದು, ಸ್ಥಳದಲ್ಲಿ ಮೂರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಅಮೂಲ್ಯ ವಿರುದ್ಧ ಪ್ರತಿಭಟನೆಯಲ್ಲಿ ಪಾಕ್ ಜಿಂದಾಬಾದ್ ಎಂದ ಯುವತಿ

ಅತಿ ವೇಗವಾಗಿ ಸ್ಕೂಟರ್‌ನಲ್ಲಿ ಬಂದ ಸವಾರ ಡಿಕ್ಕಿ ಹೊಡೆದಿದ್ದಾನೆ. ಕರೋಹಟ್ಟಿ ಗ್ರಾಮದ ಬಸವರಾಜು, ಹೊಸಹಳ್ಳಿ ಗ್ರಾಮದ ಚಿಕ್ಕಣಮ್ಮ, ಹಾಗು‌ ಮತ್ತೊಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮೂಲ್ಯ ಕುಟುಂಬಕ್ಕೆ ನಕ್ಸಲ್‌ ನಂಟು..?

ಅಪಘಾತ ಮಾಡಿದ ವ್ಯಕ್ತಿ ಕೇರಳ‌ ಮೂಲದವನೆಂದು ತಿಳಿದುಬಂದಿದೆ. ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಸ್ಕೂಟರ್ ಗುದ್ದಿದ್ದು, ಕೇರಳ ಮೂಲದ ಸಲ್ಮಾನ್‌ಸೇಠ್ ಎಂಬ ವ್ಯಕ್ತಿಯಿಂದ ಅಪಘಾತ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಬೈಕ್  ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.