ಚಿಕ್ಕಮಗಳೂರು(ಫೆ.21): ಬೆಂಗಳೂರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ‘ಪಾಕ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದ ಶಿವಪುರದ ಗಬುಗದ್ಧೆ ನಿವಾಸಿ ಅಮೂಲ್ಯ ಲಿಯೋನಾ ಕುಟುಂಬಕ್ಕೆ ನಕ್ಸಲ್‌ ಸಂಘಟನೆಯ ನಂಟಿದೆ ಎಂದು ಹೇಳಲಾಗುತ್ತಿದೆ.

ಎರಡು ದಶಕದ ಹಿಂದೆ ಕೊಪ್ಪದ ಗಬುಗದ್ದೆಯಲ್ಲಿ ನಡೆದಿದ್ದ ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಅಮೂಲ್ಯ ಲಿಯೋನಾ ಕುಟುಂಬದವರು ಪಾಲ್ಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಈದು ಗ್ರಾಮದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ ಪಾರ್ವತಿ, ನಕ್ಸಲ್‌ ಶರಣಾಗತಿಯಡಿ ಮುಖ್ಯವಾಹಿನಿಗೆ ಬಂದಿರುವ ಸಿರಿಮನೆ ನಾಗರಾಜ್‌, ನಿಲುಗುಳಿ ಪದ್ಮನಾಭ ಆ ಸಂದರ್ಭದಲ್ಲಿ ಅಮೂಲ್ಯ ಮನೆಗೂ ಭೇಟಿ ನೀಡಿದ್ದರು.

ಫೇಸ್‌ಬುಕ್‌ನಲ್ಲೂ ಪಾಕ್‌ಗೆ ಅಮೂಲ್ಯ ‘ಜೈ’!

2000ರಲ್ಲಿ ಮಲೆನಾಡಿನಲ್ಲಿ ತುಂಗಾ ಮೂಲ ಉಳಿಸಿ ಹೋರಾಟ ತೀವ್ರವಾಗಿತ್ತು. ಇದೇ ಸಂದರ್ಭದಲ್ಲಿ ಗಬುಗದ್ದೆಯಲ್ಲೂ ಹೋರಾಟ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಘಟನಾವಳಿ ಹಿನ್ನೆಲೆಯಲ್ಲಿ ಅಮೂಲ್ಯ ಕೂಡ ಎಡಪಂಥೀಯ ಸಿದ್ಧಾಂತದತ್ತ ಆಕರ್ಷಿತರಾಗಿರಬಹುದು ಎನ್ನಲಾಗಿದೆ.