ಬೆಂಗಳೂರು[ಫೆ.21]: ಗುರುವಾರವಷ್ಟೇ ಅಮೂಲ್ಯ ಜೈ ಪಾಕಿಸ್ತಾನ ಎಂದು ಘಟನೆಯ ಇತ್ಯರ್ಥವಾಗುವ ಮುನ್ನವೇ ಇದೀಗ ಮತ್ತೊಬ್ಬ ಮಹಿಲೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ.

ಅಮೂಲ್ಯ ಜೈ ಪಾಕಿಸ್ತಾನ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮತ್ತೊಂದು ಮಹಿಳೆಯಿಂದ ದೇಶದ್ರೋಹದ ಹೇಳಿಕೆ ಕೇಳಿ ಬಂದಿದೆ. ಅಮೂಲ್ಯ ಘಟನೆಯ ಬಳಿಕ ಮಹಿಳೆಯ ಪುಂಡಾಟ ಹೆಚ್ಚಾಗಿದ್ದು, ಅಮೂಲ್ಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬಳಿ ಬಂದು ಪುಂಡಾಟಿಕೆ ನಡೆಸಲಾಗಿದೆ.

ಮಂಗಳೂರು: CAA ವಿರೋಧಿ ಪ್ರತಿಭಟನೆಯಿಂದ ಅಮೂಲ್ಯ ಔಟ್..!

ಟೌನ್ ಹಾಲ್‌ನಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಫ್ರೀ ಕಾಶ್ಮೀರ ಬೇಕು ಎಂದ ಮಹಿಳೆ ಘೋಷಣೆ ಕೂಗಿದ್ದಾಳೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಮಹಿಳೆಯನ್ನು ಎಸ್ ಜೆ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದು, ಠಾಣೆಗೆ ಕರೆದೊಯ್ದಿದ್ದಾರೆ.