Asianet Suvarna News Asianet Suvarna News

ಕಾರ್ಕಳದಲ್ಲಿ ಬೃಹತ್ ರಕ್ಕಸ‌ ಮಿಡತೆ ಪತ್ತೆ!

ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಕರ್ನಾಟಕಕ್ಕೂ ಪ್ರವೇಶಿಸುವ ಆತಂಕದ ನಡುವೆ ಇದೀಗ ಕಾರ್ಕಳದ ನಗರದಲ್ಲಿ ರಕ್ಕಸ ಮಿಡತೆಯನ್ನೇ ಹೊಲುವ ಮಿಡತೆಯೊಂದು ಹವಾಲ್ದಾರ್‌ ಬೆಟ್ಟು ಪ್ರದೇಶದಲ್ಲಿ ಕಂಡು ಬಂದಿದೆ.

big locusts found in karkala
Author
Bangalore, First Published May 28, 2020, 10:39 AM IST

ಕಾರ್ಕಳ(ಮೇ 28): ಉತ್ತರ ಭಾರತವನ್ನು ಬಾಧಿಸುತ್ತಿರುವ ರಕ್ಕಸ ಮಿಡತೆಗಳು ಕರ್ನಾಟಕಕ್ಕೂ ಪ್ರವೇಶಿಸುವ ಆತಂಕದ ನಡುವೆ ಇದೀಗ ಕಾರ್ಕಳದ ನಗರದಲ್ಲಿ ರಕ್ಕಸ ಮಿಡತೆಯನ್ನೇ ಹೊಲುವ ಮಿಡತೆಯೊಂದು ಹವಾಲ್ದಾರ್‌ ಬೆಟ್ಟು ಪ್ರದೇಶದಲ್ಲಿ ಕಂಡು ಬಂದಿದೆ.

ಈ ಮಿಡತೆ ಕಂದು ಬಣ್ಣದಿಂದ ಕೂಡಿದ್ದು ಅದರ ಮೇಲು ಮೈಭಾಗ ಒಣಗಿದ ಮರದ ಎಲೆಯನ್ನು ಹೊದಿಸಿದ ರೀತಿಯಲ್ಲಿ ಕಂಡು ಬಂದಿದೆ. ಒಣಗಿದ ಪೇರಳೆ ಗಿಡದ ಎಲೆಯ ರೂಪದಲ್ಲಿ ಈ ಕೀಟ ಗೋಚರವಾಗಿದೆ.

ಮನೆ ಕೇರಳದಲ್ಲಿ, ರಸ್ತೆ ಕರ್ನಾಟಕದಲ್ಲಿ: ಅತಂತ್ರ ಸ್ಥಿತಿಯಲ್ಲಿ 700 ಕನ್ನಡಿಗರ ಕುಟುಂಬ!

ಅದಲ್ಲದೆ ಈ ಮಿಡತೆ ಕೀಟದ ಬಣ್ಣ ಗಾತ್ರ ಹಾಗೂ ಹಾರಾಟ ಒಂದೇ ರೀತಿಯಾಗಿದ್ದು ರಕ್ಷಸ ಮಿಡತೆಯನ್ನು ಹೋಲುತ್ತಿರುವುದರಿಂದ ಜನತೆ ಸ್ವಲ್ಪ ಮಟ್ಟದಲ್ಲಿ ಅತಂಕಕ್ಕೆ ಒಳಗಾಗಿದ್ದಾರೆ. ಇಂತಹ ಮಿಡತೆಯನ್ನು ಈ ಭಾಗದಲ್ಲಿ ಎಂದೂ ಕಂಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

Follow Us:
Download App:
  • android
  • ios