Asianet Suvarna News Asianet Suvarna News

ಬಂಗಾಳದಲ್ಲಿ ಕರ್ತವ್ಯದಲ್ಲಿದ್ದ ಬೀದರ್‌ ಯೋಧ ನಿಧನ: ಇಂದು ಸ್ವಗ್ರಾಮಕ್ಕೆ ಪಾರ್ಥಿವ ಶರೀರ

ಬೀದರ್: ಬೀದರ್ ಮೂಲದ ಬಿಎಸ್ಎಫ್ ಯೋಧರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದು, ಇಂದು ಸ್ವಗ್ರಾಮಕ್ಕೆ ಅವರ ಪಾರ್ಥಿವ ಶರೀರ ಆಗಮಿಸಲಿದೆ.

Bidar soldier who was on duty in Bengal passed away akb
Author
Bidar, First Published Aug 7, 2022, 1:36 PM IST

ಬೀದರ್: ಬೀದರ್ ಮೂಲದ ಬಿಎಸ್ಎಫ್ ಯೋಧರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದು, ಇಂದು ಸ್ವಗ್ರಾಮಕ್ಕೆ ಅವರ ಪಾರ್ಥಿವ ಶರೀರ ಆಗಮಿಸಲಿದೆ. ಕಮಲನಗರ ತಾಲೂಕಿನ ಚಿಕ್ಕಮುರ್ಗ ಗ್ರಾಮದ ಮಹಾದೇವ ಕಾಳೇಕರ್ ಅನಾರೋಗ್ಯದಿಂದ ಮೃತರಾದ ಯೋಧ, ಇವರು ಗಡಿ ಭದ್ರತಾ ಪಡೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯದಲ್ಲಿದ್ದರು. 48 ವರ್ಷ ಪ್ರಾಯದ ಮಹಾದೇವ್‌ ಕಾಳೇಕರ್ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಅವರ ಪಾರ್ಥಿವ ಶರೀರ ಇಂದು ಸ್ವಗ್ರಾಮವಾದ ಕಮಲನಗರ ತಾಲೂಕಿನ ಚಿಕ್ಕಮುರ್ಗ ಗ್ರಾಮಕ್ಕೆ ಆಗಮಿಸಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧರ ಅಂತಿಮ ಕ್ರಿಯೆ ನಡೆಯಲಿದೆ. ಮಗನ ಆಕಾಲಿಕ ನಿಧನದಿಂದ ಮಹಾದೇವ್‌ ಕಾಳೇಕರ್ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. 

ನಿವೃತ್ತಿ ಆಗಬೇಕಿದ್ದ ಯೋಧ ಹೃದಯಾಘಾತದಿಂದ ಸಾವು

ಸಾವು ಎಷ್ಟು ಅನಿರೀಕ್ಷಿತ,‌ ಕೆಲವೊಮ್ಮೆ ಈ ಜೀವನ ನೀರಿನ‌ ಮೇಲಿನ ಗುಳ್ಳೆ ಅಂತ ನಶ್ವರತೆಯ ಭಾವ ಆವರಿಸಿಕೊಂಡು ಬಿಡುತ್ತೆ. ಹೌದು ಸಾವು ಹೇಳಿ ಕೇಳಿ ಬರೋದಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು. ಕೆಲವರ ಸಾವಿಗೆ ಕಾರಣಗಳೇ ಇರೋದಿಲ್ಲ. ದಾರಿಯಲ್ಲಿ ಹೊರಟವನ ಮೇಲೆ ಮರದ ಕೊಂಬೆ ಮುರಿದು ಬೀಳುವುದು, ಎಚ್ಚರಿಕೆಯಿಂದ ಬೈಕ್ ಮೇಲೆ ಹೊರಟಿದ್ದವನಿಗೆ ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡ ಬಂದ ಲಾರಿ ಚಾಲಕ ಡಿಕ್ಕಿ ಹೊಡೆಯುವುದು, ಮನೆಯಿಂದ ಆಫೀಸ್‌ಗೆ ಹೊರಟ ಐದೇ ನಿಮಿಷದಲ್ಲಿ ಅಪಘಾತದಲ್ಲಿ ಸಾಯುವುದು, ಮದುವೆ ಸಂಭ್ರಮದಲ್ಲಿ ವರನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗುವುದು, ಮುಂದಿನ ವರ ಊರಿಗೆ ಬರುತ್ತೇನೆಂದು ಹೇಳಿದ ಮಗ, ಹೆಣವಾಗಿ ಬರುವುದು. ಇದೆಲ್ಲ ಸಾವು ಎಷ್ಟೊಂದು ಅನಿರಿಕ್ಷಿತ ಅನ್ನಿಸದೇ ಇರಲಾರದು. ಅಂಥದ್ದೇ ಘಟನೆಯೊಂದು ಇಲ್ಲಿದೆ. 19 ವರ್ಷ ದೇಶಸೇವೆಗಾಗಿ ಜೀವನ ಮುಡಿಪಿಟ್ಟು ಶತ್ರುಗಳಿಗೆ ಎದೆಯೊಡ್ಡಿ ದೇಶ ಸೇವೆ ಮಾಡಿದ್ದ ಯೋಧರೊಬ್ಬರು ಇನ್ನು ಕೆಲವೇ ತಿಂಗಳುಗಳಲ್ಲಿ ನಿವೃತ್ತಿಯಾಗಿ ಊರಿಗೆ ವಾಪಸ್ ಆಗುವವರಿದ್ದರು. ಪುಟ್ಟ ಸಂಸಾರ, ದೇಶ ಸೇವೆ ಮಾಡಿದ ಹೆಮ್ಮೆ, ಹುಟ್ಟಿದ ಊರಿಗೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಮರಳುವೆ ಎನ್ನುವ ಸಂತಸ. ಆದರೆ ಆ ವಿಧಿಗೆ ಕರುಣೆಯೇ ಇಲ್ಲ.

ಪಶ್ಚಿಮ ಬಂಗಾಳದಲ್ಲಿ ಅಪಘಾತ, ಬೆಳಗಾವಿಯ ಯೋಧ ಸಾವು

19 ವರ್ಷ 7 ತಿಂಗಳ ಸೇವೆ ಸಲ್ಲಿಸಿ ಇನ್ನೈದು ತಿಂಗಳಲ್ಲಿ ಸ್ವಗ್ರಾಮಕ್ಕೆ ಮರಳುತ್ತೇನೆಂದ ಯೋಧನ ಸಾವು  ಅಕ್ಷರಶಃ ಈ ಗ್ರಾಮಸ್ಥರನ್ನು ಶೋಕ‌ಸಾಗರದಲ್ಲಿ ಮುಳುಗಿಸಿದೆ. ಪಂಜಾಬ್(Punjab) ರಾಜ್ಯದ ಪಠಾಣ ಕೋಟ್(Pathankot) ಪ್ರಾಂತ್ಯದಲ್ಲಿ BSF ಯೋಧರಾಗಿ ಕರ್ತವ್ಯ  ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಸುತ್ತೂರಮಠ(Mallikarjunaiah Suttoorumath)ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಾವೇರಿ(Haveri) ಜಿಲ್ಲೆ ಗುತ್ತಲ ಪಟ್ಟಣ(Guttal town)ದ ಸಮೀಪದ ಎಂ.ಜಿ. ತಿಮ್ಮಾಪುರ(M.G.Timmapur) ಗ್ರಾಮದ ನಿವಾಸಿ   ಮಲ್ಲಿಕಾರ್ಜುನಯ್ಯ ಸುತ್ತೂರಮಠ  ಜುಲೈ 23 ರಂದು ತಡರಾತ್ರಿ ಹೃದಯಾಘಾತ(Heart attack)ದಿಂದ  ನಿಧನರಾಗಿದ್ದಾರೆ. 
 

ಯೋಧರ ಕಾಲಿಗೆರಗಿದ ಪುಟಾಣಿ: ವಿಡಿಯೋ ವೈರಲ್‌

Follow Us:
Download App:
  • android
  • ios