ಪಶ್ಚಿಮ ಬಂಗಾಳದಲ್ಲಿ ಅಪಘಾತ, ಬೆಳಗಾವಿಯ ಯೋಧ ಸಾವು
ಹತ್ತು ವರ್ಷದಿಂದ ಗಡಿಭದ್ರತಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿಯ ಯೋಧ ಪಶ್ಚಿಮ ಬಂಗಾಳದಲ್ಲಿ ಅಪಘಾತದಲ್ಲಿ ಸಾವು.ಬೆಳಗಾವಿ, ಜಿಲ್ಲೆಯ ಯಡೂರವಾಡಿ ಗ್ರಾಮದ ಬಿ ಸೂರಜ್ ಸುತಾರ್ (32) ಮೃತಪಟ್ಟಿರುವ ಯೋಧ
ಚಿಕ್ಕೋಡಿ (ಜು.20): ಆತ ಬಡತನ ದೂರಮಾಡಲು ಸೈನ್ಯಕ್ಕೆ ಸೇರಿದ್ದ. ಹತ್ತು ವರ್ಷದಿಂದ ದೇಶದ ಗಡೀ ಕಾಯುವ ಕೆಲಸ ಮಾಡುತ್ತಿದ್ದ. ಸೇವೆಯಲ್ಲಿರುವಾಗಲೇ ಹೆಂಡತಿ ಮಗುವನ್ನು ಕರೆ ತರಲು ಹೋದಾಗ ಆಟೋದಿಂದ ಇಳಿದು ರಸ್ತೆ ದಾಟುವಾಗ ಜವರಾಯನ ಸ್ವರೂಪದಲ್ಲಿ ಹಿಂದುಗಡೆಯಿಂದ ಲಾರಿ ಡಿಕ್ಕಿಯಾಗಿ ಸಾವನ್ನಪ್ಪದ್ದಾನೆ. ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ಯೋಧನ ಅಂತ್ಯ ಸಂಸ್ಕಾರ ನೇರವೇರಿತು.
ಹೌದು ಆತ ಮನೆಯ ಬಡತನವನ್ನ ಹೋಗಲಾಡಿಸಬೇಕು, ಕುಟುಂಬಸ್ಥರನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂದು ಕಷ್ಟಪಟ್ಟು ಓದಿ ಗಡಿ ಭದ್ರತಾ ಪಡೆ ಬಿಎಸ್ ಎಫ್(BSF) ಸೇರಿದ್ದ. 2012 ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆಗೆ ಹಾಜರಾಗಿದ್ದ ಸುಮಾರು 10 ವರ್ಷಗಳ ಕಾಲ ಸೇನೆಯಲ್ಲಿ ಪಶ್ಚಿಮ ಬಂಗಾಳ(West bengal), ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ಮತ್ತೆ ಪ್ರಸ್ತುತ ಪಶ್ಚಿಮ ಬಂಗಾಳದ ಪನಜಿಪರಾದ ಉತ್ತರ ದೀನಜಪುರ್ ನ 152 ಬಟಾಲಿಯನ್ ಲ್ಲಿ ಸೇವೆಯನ್ನ ಸಲ್ಲಿಸುತ್ತಿದ್ದ ಈತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿ.ಎಸ್.ಎಫ್ ಯೋಧ ಸೂರಜ್ ಸುತಾರ್ (32) ಕಳೆದ 18 ನೇ ತಾರೀಖಿನಂದು ಸೇವೆ ಸಲ್ಲಿಸುವಾಗಲೇ ಆಸ್ಸಾಂ ನ ಕಿಶನ್ ಗಂಜ್ ರೇಲ್ವೆ ಸ್ಟೇಷನ್ ಗೆ ತನ್ನ ಹೆಂಡತಿ ಮಗುವನ್ನ ಕರೆ ತರಲು ಹೋದಾಗ ಆಟೋದಿಂದ ಇಳಿದು ರಸ್ತೆ ದಾಟುವಾಗ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ಪಶ್ಚಿಮ ಬಂಗಾಳದ ಯುವತಿಯೊಬ್ಬಳನ್ನ ಲವ್ ಮಾಡಿದ್ದ ಸೂರಜ್ ಐದು ವರ್ಷದ ಹಿಂದೆ ಮದುವೆ ಆಗಿದ್ದ ಕಳೆದು ಎರಡು ವರ್ಷಗಳಿಂದ ರಜೆ ನೀಡದ ಕಾರಣ ಸ್ವಗ್ರಾಮ ಯಡೂರವಾಡಿಗೆ ಬಂದಿರಲಿಲ್ಲ ರಜೆ ತಗೆದುಕೊಂಡು ಊರಿಗೆ ಬರತ್ತೀನಿ ಅಂತ ಹೇಳಿದ್ದ ಮನೆ ಮಗ ಈ ರೀತಿ ಹೆಣವಾಗಿ ಬಂದಿದ್ದಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಇನ್ನೂ ಸೂಸೆ ಮೊಮ್ಮಗಳ ಮುಂದಿನ ಭವಿಷ್ಯ ಹೇಗೆ ಎಂಬ ಚಿಂತೆ ಅಂತ ಕಣ್ಣಿರು ಹಾಕುತ್ತಿದ್ದಾರೆ ಮೃತ ಯೋಧನ ತಂದೆ.
ಪಾಕ್ ಗಡಿ ದಾಟಿ ಬಂದ ಕಂದನನ್ನು ಮರಳಿಸಿದ ಭಾರತೀಯ ಯೋಧರು
ಇನ್ನೂ ಸ್ವಗ್ರಾಮ ಯಡೂರವಾಡಿಯಲ್ಲಿ ಮೃತ ಯೋಧ ಸೂರಜ್ ಪಾರ್ಥಿವ್ ಶರೀರ ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು ಮೆರವಣಿಗೆ ವೇಳೆ ಪುಷ್ಪನಮನ, ಮನೆ ಮನೆಯವರಿಂದ ಆರತಿ ಬೆಳಗಿ ಯೋಧನ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದುಕೊಂಡರು. ಮೆರವಣಿಗೆಯಲ್ಲಿ ಊರಿನ ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಭಾಗಿಯಾಗಿದ್ರು. ಚಿಕ್ಕಮಕ್ಕಳು ರಾಷ್ಟ್ರಧ್ವಜ ಹಿಡಿದು ಭಾಗಿಯಾಗಿ ಮೆರವಣಿಗೆಯೂದ್ಧಕ್ಕೂ ದೇಶ ವಾಕ್ಯ ಘೋಷಣೆ ಕೂಗಿದ್ರು, ಇನ್ನೂ ಮೆರವಣಿಗೆ ಮುಂಚೆ ಗ್ರಾಮದ ಲಕ್ಷ್ಮೀ ದೇವಸ್ಥಾನದ ಮುಂದೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮೃತ ಯೋಧನ ಪಾರ್ಥಿವ ಶರೀರಕ್ಕೆ ಚಿಕ್ಕೋಡಿ ತಾಲೂಕು ಆಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗೌರವ ಸಲ್ಲಿಸಿದರು. ಇನ್ನೂ ಯೋಧನ ಅಂತಿಮ ದರ್ಷನ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಕಣ್ಣಿರು ಹಾಕಿದರು. ಅಣ್ಣ ಸೂರಜ್ ಪ್ರೇರಣೆಯಿಂದ ತಮ್ಮ ಕಿರಣ್ ಕೂಡ ಭಾರತೀಯ ಸೇನೆಯ ಸಿ.ಐ.ಎಸ್. ಎಫ್ ನಲ್ಲಿ ಎರಡು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಈ ಬಗ್ಗೆ ಹೇಳಿದ್ದು ಹೀಗೆ.
ಮಣಿಪುರ ಸೇನಾ ಕ್ಯಾಂಪ್‌ನಲ್ಲಿ ಭೂಕುಸಿತ,13 ಯೋಧರು ಹಾಗೂ ಐವರು ನಾಗರೀಕರ ರಕ್ಷಣೆ!
ಒಟ್ಟನಲ್ಲಿ ದೇಶಕ್ಕಗಿ 10 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧ ಹೀಗೆ ತನ್ನ ಕುಟುಂಬವನ್ನು ಕರೆದುಕೊಂಡು ಬರಲು ಹೋಗಿ ಅಪಘಾತದಲ್ಲಿ ಮೃತ ಪಟ್ಟಿರುವುದು ದುರಂತ. ಇನ್ನೂ ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ಗ್ರಾಮದ ಹೊರಲವಲಯದಲ್ಲಿ ಮೃತ ಸೂರಜ್ ಅಂತ್ಯಕ್ರಿಯೆ ನೆರವೇರಿತು.