Asianet Suvarna News Asianet Suvarna News

ಯೋಧರ ಕಾಲಿಗೆರಗಿದ ಪುಟಾಣಿ: ವಿಡಿಯೋ ವೈರಲ್‌

ಪುಟಾಣಿ ಬಾಲೆಯೊಬ್ಬಳು ಅಪರಿಚಿತ ಯೋಧರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸುತ್ತಿದೆ.

little girl Touches soldiers feet video goes viral akb
Author
Bangalore, First Published Jul 17, 2022, 12:13 PM IST

ನವದೆಹಲಿ: ಪುಟಾಣಿ ಬಾಲೆಯೊಬ್ಬಳು ಅಪರಿಚಿತ ಯೋಧರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸುತ್ತಿದೆ. ದೇಶಕ್ಕೆ ಕಷ್ಟ ಎಂದು ಬಂದಾಗ ಮೊದಲು ನೆನಪಾಗುವುದು ಯೋಧರು, ಭೂಕಂಪವೇ ಆಗಲಿ ಪ್ರವಾಹವೇ ಸಂಭವಿಸಲಿ ಇನ್ನೇನಾದರು ನೈಸರ್ಗಿಕ ವಿಕೋಪಗಳು ಸಂಭವಿಸಲಿ ಮೊದಲು ದೇಶದ ಜನರ ಸಹಾಯಕ್ಕೆ ಬಂದು ತಲುಪುವುದು ಯೋಧರು. ತಮ್ಮ ಪ್ರಾಣದ ಹಂಗು ತೊರೆದು ಯೋಧರು ದೇಶದ ಜನರನ್ನು ಸಾಕಷ್ಟು ಭಾರಿ ರಕ್ಷಣೆ ಮಾಡಿದ್ದಾರೆ. ತಮ್ಮ ಮನೆ ಕುಟುಂಬವನ್ನು ತೊರೆದು ದೂರದ ಗಡಿಯಲ್ಲಿ ನಿಂತು ದೇಶವನ್ನು ಕಾಯುತ್ತಾರೆ. ಅಂತಹ ಯೋಧರಿಗೆ ದೇಶದ ಪ್ರತಿಯೊಬ್ಬ ನಾಗರಿಕನು ಕೃತಜ್ಞನಾಗಿರಬೇಕು. ಹೀಗಾಗಿಯೇ ಈ ಪುಟ್ಟ ಬಾಲೆ ಯೋಧನಿಗೆ ನಮಸ್ಕರಿಸುತ್ತಿರುವ ವಿಡಿಯೋ ಈಗ ಸಂಚಲನ ಮೂಡಿಸಿದೆ.

ಮೆಟ್ರೋ ಸ್ಟೇಷನ್ ಒಂದರಲ್ಲಿ ಸೆರೆಯಾದ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಬಿಜೆಪಿ ಸಂಸದ ಪಿಸಿ ಮೋಹನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಳೆಯ ಮನಸ್ಸುಗಳಲ್ಲಿ ದೇಶಭಕ್ತಿಯನ್ನು ಬೆಳೆಸುವುದು ಈ ಮಹಾನ್‌ ದೇಶದ ಪ್ರತಿಯೊಬ್ಬ ಪೋಷಕರ ಕರ್ತವ್ಯ, ಜೈಹಿಂದ್‌ ಎಂದು ಅವರು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮೆಟ್ರೋ ನಿಲ್ದಾಣದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿರುವ ಪುಟಾಣಿಯೊಬ್ಬಳು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಂದು ಸಮವಸ್ತ್ರದಲ್ಲಿ ನಿಂತಿರುವ ಓರ್ವ ಸೇನಾ ಅಧಿಕಾರಿ ಬಳಿಗೆ ಬಂದು ಅವರ ಕಾಲಿಗೆ ನಮಸ್ಕರಿಸುತ್ತಾಳೆ. ಕೂಡಲೇ ಸೇನೆಯ ಅಧಿಕಾರಿ ಕೆಳಗೆ ಬಾಗಿ ಪುಟಾಣಿಯ ಕೆನ್ನೆ ಹಿಂಡಿ ಪ್ರೀತಿ ತೋರುತ್ತಾನೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ಗೆ ತೀವ್ರ ಮುಜುಗರ, ಅಗ್ನಿಪಥ ವಿರುದ್ಧದ ಪ್ರತಿಭಟನಾ ಪತ್ರಕ್ಕೆ ಸಹಿ ಹಾಕಲು ಮನೀಶ್ ತಿವಾರಿ ನಕಾರ!

ಈ ವೀಡಿಯೊವನ್ನು ಟ್ವಿಟರ್‌ನಲ್ಲಿ 1.1 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 83,000 ಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದು,  ಸಾವಿರಾರು ಬಳಕೆದಾರರು  ರಿಟ್ವೀಟ್ ಮಾಡಿದ್ದಾರೆ. ಬಾಲಕಿಯ ಈ ಕಾರ್ಯಕ್ಕೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ರೋಮಾಂಚನ ಮೂಡಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಹೃದಯವನ್ನು ಅಳವಾಗಿ ಸ್ಪರ್ಶಿಸುತ್ತಿದೆ. ಇದು ನನ್ನನ್ನು ಬಹಳ ಭಾವುಕರನ್ನಾಗಿಸುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಕಲಿಸಬೇಕಾದದ್ದು ಇದ್ದನ್ನೇ ಎಂದು ಬರೆದಿದ್ದಾರೆ. 

 

ಮಕ್ಕಳಿಗೆ ಸಂಸ್ಕಾರವನ್ನು, ದೇಶಭಕ್ತಿಯನ್ನು ಎಳವೆಯಲ್ಲಿಯೇ ಕಲಿಸಿಕೊಡಬೇಕು. ಬಾಲ್ಯದಲ್ಲಿ ಕಲಿಸಿಕೊಟ್ಟ ಸಂಸ್ಕಾರ ಅವರನ್ನು ಕೊನೆಯವರೆಗೆ ಕಾಯುವುದು ಅವರನ್ನು ಉದಾತ್ತ ವ್ಯಕ್ತಿಯಾಗಿ ಮಾಡುವುದು. ಈ ಪುಟ್ಟ ಬಾಲೆಯ ಪೋಷಕರು ಯೋಧ ಹಾಗೂ ದೇಶದ ಬಗೆಗಿನ ಗೌರವವನ್ನು ಎಳವೆಯಲ್ಲೇ ಪುಟ್ಟ ಬಾಲಕಿಗೆ ತುಂಬಿದ್ದು, ಆಕೆ ಯೋಧನ ಕಾಲಿಗೆ ನಮಸ್ಕರಿಸುವ ರೀತಿಯಲ್ಲೇ ಅದನ್ನು ಕಾಣಬಹುದಾಗಿದೆ. ಶಿಕ್ಷಣದ ಜೊತೆಗೆ ಪೋಷಕರು ನೀಡುವ ಸಂಸ್ಕಾರ ಈ ಬಾಲಕಿಯ ನಡತೆಯಲ್ಲಿ ಎದ್ದು ಕಾಣುತ್ತಿದೆ. 

ಮಣಿಪುರ ಸೇನಾ ಕ್ಯಾಂಪ್‌ನಲ್ಲಿ ಭೂಕುಸಿತ,13 ಯೋಧರು ಹಾಗೂ ಐವರು ನಾಗರೀಕರ ರಕ್ಷಣೆ!

Follow Us:
Download App:
  • android
  • ios