ಮೈಸೂರು: (ಸೆ. 19) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್‌ ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ ನೀಡುವ ತಾಣವಾಗುತ್ತದೆ ಎಂದು ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್‌ ಅಭಿಪ್ರಾಯಪಟ್ಟರು.

ವಿಷ್ಣುದಾದನ ಮೇಲಿತ್ತು ಕಿಚ್ಚನಿಗೆ ಕೋಪ! ಕಾರಣ ಬಿಚ್ಚಿಟ ಪೈಲ್ವಾನ್...

ನಿನ್ನೆ ತಾಲೂಕಿನ ಉದ್ಬೂರು ಬಳಿ ನಿಯೋಜಿತ ವಿಷ್ಣು ಸ್ಮಾರಕದ ಬಳಿ ಪೂಜೆ ಸಲ್ಲಿಸುವ ಮೂಲಕ ವಿಷ್ಣುವರ್ಧನ್‌ ಹುಟ್ಟುಹಬ್ಬ ಆಚರಿಸುವ ಮೂಲಕ ಮಾತನಾಡಿದ ಅವರು, ಹತ್ತು ವರ್ಷಗಳ ಹೋರಾಟದ ನಂತರ ಈಗ ಮೈಸೂರಿನಲ್ಲಿ ಸ್ಮಾರಕವಾಗುತ್ತಿದೆ. ವಿಷ್ಣು ಯಾವಾಗಲು ಅಭಿಮಾನಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಅಭಿಮಾನಿಗಳ ಜೊತೆ ಜನ್ಮದಿನ ಆಚರಣೆ ಮಾಡುವುದು ಖುಷಿ ನೀಡುತ್ತಿದೆ. ಇನ್ನೂ ಎರಡು ವರ್ಷದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ತಯಾರಿ ನಡೆದಿದೆ ಎಂದು ಅವರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳಿಕ ಮಾತನಾಡಿದ ವಿಷ್ಣು ಅಳಿಯ ಅನಿರುದ್ದ ಅವರು, ಇದು ಕೇವಲ ಪುತ್ಥಳಿಗೆ, ಸ್ಮಾರಕಕ್ಕೆ ಸೀಮಿತ ಆಗಬಾರದು. ಚಿತ್ರೋತ್ಸವ, ನಾಟಕೋತ್ಸವ ನಿರಂತರವಾಗಿ ನಡೆಯಬೇಕು. ಇದೊಂದು ಮಾದರಿ ಸ್ಮಾರಕ ಆಗಬೇಕು ಎಂಬುದು ನಮ್ಮ ಆಶಯ. ಅಪ್ಪಾಜಿಯವರ ಪ್ರತಿಮೆ ನಿಲ್ಲಿಸಿ ಏಕಾಂಗಿ ಮಾಡುವುದು ನಮಗೆ ಇಷ್ಟವಿಲ್ಲ. ಇಲ್ಲಿ ಉಚಿತ ಆರೋಗ್ಯ ಶಿಬಿರಗಳು ಈಗಿನಿಂದಲೇ ಆರಂಭವಾಗಲಿದೆ. 5.5 ಎಕರೆ ಜಾಗದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗುತ್ತೆ. ಇಲ್ಲಿ ಒಂದು ಫಿಲಂ ಇನ್ಸ್ ಟ್ಯೂಟ್‌ ಕೂಡ ಆಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಈ ಆಶಯ ಈಡೇರಿಸುತ್ತೇವೆ ಎಂದು ತಿಳಿಸಿದರು.

ಡಾ.ವಿಷ್ಣುವರ್ಧನ್ ಬಗ್ಗೆ ತಿಳಿಯಲೇಬೇಕಾದ 10 ಇಂಟರೆಸ್ಟಿಂಗ್ ಫ್ಯಾಕ್ಟ್!

ಸ್ಮಾರಕ ನಿರ್ಮಾಣದ ರೂಪುರೇಷೆ ಸಿದ್ದಗೊಳ್ಳುತ್ತಿದೆ. ಈ ಒಂದು ಸ್ಮಾರಕ ಪೂಜಾ ಸ್ಥಳ ಆಗುತ್ತೆ ಹಾಗೂ ಶೈಕ್ಷಣಿಕ ಸ್ಥಳ ಆಗುತ್ತದೆ. ದೇಶದಲ್ಲೇ ಒಂದು ಮಾದರಿ ಸ್ಮಾರಕವಾಗಿ ಇದು ರೂಪುಗೊಳ್ಳಲಿದೆ. ಸರ್ಕಾರ ಇದಕ್ಕೆ 11 ಕೋಟಿ ರೂ.  ಮಂಜೂರು ಮಾಡಿದೆ. ಇದು ಜನರ ದುಡ್ಡು, ಇದು ಜನರಿಗಾಗಿಯೇ ಎಂದರು.