ಸ್ಯಾಂಡಲ್ ವುಡ್ ಮೋಸ್ಟ್ ಎನರ್ಜಿಟಿಕ್ ಅ್ಯಂಡ್ ಕ್ರಿಯೇಟಿವ್ ಮ್ಯಾನ್ ಎಂದೇ ಖ್ಯಾತರಾದ ಸಾಹಸ ಸಿಂಹ ವಿಷ್ಣುವರ್ಧನ್ 59ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಸಂಘಗಳು ಅದ್ದೂರಿಯಾಗಿ ಆಚರಿಸುತ್ತಿವೆ. ಇನ್ನು ವಿಷ್ಣುದಾದನ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿವು......

 

- ಕನ್ನಡ ಚಿತ್ರರಂಗದ ಫೀನಿಕ್ಸ್ ಎಂದೇ ಖ್ಯಾತರಾಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರ ಶತ ದಿನ ಪೂರೈಸಿತ್ತು.

- ಒಟ್ಟಾರೆ 220 ಚಿತ್ರಗಳಲ್ಲಿ ನಟಿಸಿರುವ ವಿಷ್ಣುವನ್ನು CNN IBN 2008ರಲ್ಲಿ ಮೋಸ್ಟ್ ಪಾಪ್ಯೂಲರ್ ಕನ್ನಡ ನಟ ಎಂದು ಬಿರುದು ನೀಡಿ ಗೌರವಿಸಿದರು.

- ವಿಷ್ಣು ಅಸಲಿ ನಾಮ ಸಂಪತ್ ಕುಮಾರ್ ಎಂದು, ನಾಗರಹಾವು ಚಿತ್ರೀಕರಣದ ವೇಳೆ ಪುಟ್ಟಣ್ಣ ಕಣಗಲ್ ವಿಷ್ಣುವರ್ಧನ್ ಎಂದು ನಾಮಕರಣ ಮಾಡಿದ್ದರು.

- ಬಂಧನ ಚಿತ್ರದಲ್ಲಿ ಡಾ.ಹರೀಶ್ ಪಾತ್ರ ಎವರ್ ಗ್ರೀನ್ ಹಿಟ್ ಆಯ್ತು

- ನಿರ್ದೇಶಕ ಭಾರ್ಗವರೊಂದಿಗೆ ಅಸಾಧ್ಯ ಅಲಿಯಾ ಚಿತ್ರದಲ್ಲಿ ಮೂಲಕ ಕೈ ಜೋಡಿಸಿದ ವಿಷ್ಣು ಒಟ್ಟಾರೆ 23 ಚಿತ್ರದಲ್ಲಿ ಅವರಿಬ್ಬರ ಕಾಂಬಿನೇಷನ್ ಸಿನಿಮಾಗಳು ತೆರೆಕಂಡವು.

- 1980ರಲ್ಲಿ ಶಂಕರ್ ನಾಗ್ ಕನಸಿನ ಪ್ರಾಜೆಕ್ಟ್ ಆದ ಮಾಲ್ಗುಡಿ ಡೇಸ್ ಭಾಗವಾದ ‘Rupees Forty-Five a Month’ ಎಂಬ ಎಪಿಸೋಡ್ ನಲ್ಲಿ ನಟಿಸಿದ್ದರು.

- ನಾಗರಹಾವು ಚಿತ್ರದಿಂದ ಆಪ್ತರಕ್ಷಕ ಚಿತ್ರದವರಿಗೂ ಎಸ್.ಪಿ.ಬಾಲಸುಬ್ರಮಣ್ಯಂ ವಿಷ್ಣು ಚಿತ್ರದ ಹಾಡುಗಳಿಗೆ ಧ್ವನಿಯಾಗಿ ನಿಂತರು.

- ಸೇಹ್ನಿತ ಅಂಬರೀಶ್ ಅವರ ಪ್ರಕಾರ ವಿಷ್ಣುಗೆ ಶ್ವಾನಗಳೆಂದರೆ ಪಂಚಪ್ರಾಣ.

- ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿವರೆಗು ಇರುವ 14.5 ಕಿಮೀ ರಸ್ತೆಗೆ ವಿಷ್ಣುವರ್ಧನ್ ಹೆಸರು ಇಡಲಾಗಿದೆ.