ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರರಾದ ನಟ ವಿಷ್ಣುವರ್ಧನ್ ಜನ್ಮದಿನದಂದು ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ದಾದನ ಮೇಲಿರುವ ಪ್ರೀತಿಯ ವಿಚಾರ ಹಾಗೂ ಕೋಪದ ವಿಚಾರವನ್ನು ಹಂಚಿಕೊಂಡಿದ್ದಾರೆ....
ವಿಷ್ಣುವರ್ಧನ್ ಅಗಲಿ 10 ವರ್ಷವಾದರೂ ಅಭಿಮಾನಿಗಳ ಮನದಲ್ಲಿ ಇಂದಿಗೂ ಎಂದಿಗೂ ಶಾಶ್ವತವಾಗಿರುತ್ತಾರೆ. ಈಗಲೂ ವಿಷ್ಣು ಸಿನಿಮಾ ನೋಡುವುದರಲ್ಲಿ ಸಂತೋಷವಿದೆ, ಅವರು ಹೆಸರಿನಲ್ಲಿ ಅಭಿಮಾನಿಗಳು ದಾನ ಧರ್ಮದ ಕೆಲಸಗಳನ್ನು ಮಾಡುತ್ತಾರೆ.
ಡಾ.ವಿಷ್ಣುವರ್ಧನ್ ಬಗ್ಗೆ ತಿಳಿಯಲೇಬೇಕಾದ 10 ಇಂಟರೆಸ್ಟಿಂಗ್ ಫ್ಯಾಕ್ಟ್!
ಇನ್ನು ಕಿಚ್ಚ ಸುದೀಪ್ ತಮ್ಮ ಟ್ಟೀಟರ್ ಖಾತೆಯಲ್ಲಿ ‘ ಹುಟ್ಟುಹಬ್ಬದ ಶುಭಾಶಯಗ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿಯೆಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಅಷ್ಟೇ ಕೋಪ ಇದೆ. ಅನಾಥರಾಗಿದ್ದೀವಿ. ಬಹಳ ಬೇಗ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲ್ಲೊಬ್ಬ- ಕಿಚ್ಚ’ ಎಂದು ಬರೆದುಕೊಂಡಿದ್ದಾರೆ.
