ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಬೆಸ್ಕಾಂ: ವಿದ್ಯುತ್ ಬಿಲ್ ಮೇಲೆ 0.25%ರಷ್ಟು ರಿಯಾಯಿತಿ ಘೋಷಣೆ
ಸತತ ಮೂರು ತಿಂಗಳ ಕಾಲ ವಿದ್ಯುತ್ ಶುಲ್ಕ ಪಾವತಿಸದವರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು (ಬೆಸ್ಕಾಂ) ವಿದ್ಯುತ್ ಸಂಪರ್ಕ ಕಡಿತದ ಶಾಕ್ ನೀಡಿತ್ತು. ಜತೆಗೆ ವಿದ್ಯುತ್ ಸಂಪರ್ಕ ಪರವಾನಗಿಯನ್ನೇ ರದ್ದುಗೊಳಿಸುತ್ತಿರುವ ನಡುವೆ ಇದೀಗ ಬೆಸ್ಕಾಂ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಬೆಂಗಳೂರು (ಜ.18): ಸತತ ಮೂರು ತಿಂಗಳ ಕಾಲ ವಿದ್ಯುತ್ ಶುಲ್ಕ ಪಾವತಿಸದವರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು (ಬೆಸ್ಕಾಂ) ವಿದ್ಯುತ್ ಸಂಪರ್ಕ ಕಡಿತದ ಶಾಕ್ ನೀಡಿತ್ತು. ಜತೆಗೆ ವಿದ್ಯುತ್ ಸಂಪರ್ಕ ಪರವಾನಗಿಯನ್ನೇ ರದ್ದುಗೊಳಿಸುತ್ತಿರುವ ನಡುವೆ ಇದೀಗ ಬೆಸ್ಕಾಂ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೌದು! ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಅನ್ನ ನಿಗದಿತ ದಿನಾಂಕಕ್ಕಿಂತ 10 ದಿನ ಮುಂಚಿತವಾಗಿ ಪಾವತಿಸಿದಲ್ಲಿ ಶೇಕಡಾ 0.25 ರಷ್ಟು ರಿಯಾಯಿತಿಯನ್ನು ಬೆಸ್ಕಾಂ ಘೋಷಣೆ ಮಾಡಿದೆ.
ವಿದ್ಯುತ್ ಬಿಲ್ ಮೊತ್ತ 1 ಲಕ್ಷ ಮೀರಿದರೆ ಪ್ರೋತ್ಸಾಹ ಧನವನ್ನು ನೀಡಲು ಮುಂದಾಗಿದೆ. ಜೊತೆಗೆ ಮಾಸಿಕ ವಿದ್ಯುತ್ ಬಿಲ್ 1 ಸಾವಿರ ರೂಪಾಯಿ ಮೀರಿದ ಮುಂಗಡ ಪಾವತಿಗೂ ಕೂಡ ಶೇ 0.25ರಷ್ಟು ರಿಯಾಯಿತಿಯನ್ನು ನೀಡಿದ್ದು, ವಿದ್ಯುತ್ ಬಿಲ್ ಸಂಗ್ರಹಕ್ಕೆ ಗ್ರಾಹಕರಿಗೆ ಬೆಸ್ಕಾಂ ಬಂಪರ್ ಘೋಷಿಸಿದೆ. ಇನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ಗ್ರಾಹಕರು ನಿಗದಿತ ಅವಧಿಯೊಳಗೆ ಬಿಲ್ ಪಾವತಿಯಾಗದ ಹಿನ್ನಲೆಯಲ್ಲಿ ಬೆಸ್ಕಾಂ ಎಂ.ಡಿ. ಮಹಾಂತೇಶ ಬೀಳಗಿ ಈ ಅಫರ್ ನೀಡಿದ್ದು, ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಶಾಸಕರು ಬ್ರೋಕರ್‌ಗಳಾಗಿದ್ದಾರೆ: ಡಿ.ಕೆ.ಶಿವಕುಮಾರ್
ಫೆ.2ರವರೆಗೆ ವಿದ್ಯುತ್ ವ್ಯತ್ಯಯ: ರಾಜರಾಜೇಶ್ವರಿ ನಗರ 66/11 ಕೆವಿ ವಿದ್ಯುತ್ ಕೇಂದ್ರವಾದ ಎಂಯುಎಸ್‌ಎಸ್‌ನಲ್ಲಿ ತುರ್ತು ಕೆಲಸ ಕೈಗೊಂಡಿರುವುದರಿಂದ ಜ.16ರಿಂದ ಫೆ.2ರವರೆಗೆ ವಿವಿಧ ಪ್ರದೇಶಗಳಲ್ಲಿ ಆಗಾಗ್ಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪಟ್ಟಣಗೆರೆ, ಕೃಷ್ಣಗಾರ್ಡನ್, ಬಿಎಚ್‌ಇಎಲ್ ಲೇಔಟ್, ಭೂಮಿಕ ಲೇಔಟ್, ಬಿಇಎಂಎಲ್ 1ನೇ, 2ನೇ ಮತ್ತು 10ನೇ ಹಂತ, ಮೈಲಸಂದ್ರ, ಉತ್ತರಹಳ್ಳಿ ಮೈನ್ ರಸ್ತೆ, ಕಾನ್‌ಕಾರ್ಡ್ ಲೇಔಟ್, ಓಂಕಾರ ನಗರ, ಕೋಡಿಪಾಳ್ಯ, ಕೋನಸಂದ್ರ, ಹೆಮ್ಮಿಗೆಪುರ, ಚೆಟ್ಟಿಪಾಳ್ಯ, ಚೂಡೇನಪುರ, ಕಾಟನಾಯಕನಪುರ, ಬಿಜಿಎಸ್ ಹಾಸ್ಪಿಟಲ್, ಗಾಣಕಲ್ಲು, ಶ್ರೀನಿವಾಸಪುರ ಕಾಲೋನಿ, ಎಂ.ಎಲ್ ಲೇಔಟ್, ಬಿಡಿಎ ಲೇಔಟ್, ಸಚ್ಚಿದಾನಂದ ನಗರ, ಒಲಂಪಸ್ ಹಾಸ್ಪಿಟಲ್, ಹಲಗೇವಡೇರಹಳ್ಳಿ, ದ್ವಾರಕ ನಗರ, ಐಡಿಯಲ್ ಹೋಮ್ಸ್, ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಕದ್ದವರಿಗೆ ಬೆಸ್ಕಾಂ ಶಾಕ್: ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂ ಜಾಗೃತ ದಳವು ಕಳೆದ 4 ತಿಂಗಳಲ್ಲಿ 10,908 ಕಡೆ ತಪಾಸಣೆ ನಡೆಸಿ ಅನಧಿಕೃತ ಸಂಪರ್ಕ ಪಡೆದ ಗ್ರಾಹಕರಿಗೆ .2.59 ಕೋಟಿ ದಂಡ ವಿಧಿಸಿದೆ. ಸೆಪ್ಟೆಂಬರ್‌ನಿಂದ ಡಿಸೆಂಬರ್ ತಿಂಗಳವರೆಗೆ 1,781 ಪ್ರಕರಣಗಳನ್ನು ಜಾಗೃತ ದಳ ದಾಖಲಿಸಿಕೊಂಡಿದ್ದು 1,721 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಅದೇ ರೀತಿ ವಿದ್ಯುತ್ ಬಿಲ್ ಬಾಕಿ ವಸೂಲಿಗೂ ಕ್ರಮ ಕೈಗೊಂಡಿದ್ದು, ಕಳೆದ ಮೂರು ತಿಂಗಳಲ್ಲಿ ಬಾಕಿ ಇದ್ದ 1,417 ಕೋಟಿಗಳಲ್ಲಿ 358 ಕೋಟಿ ಬಿಲ್ ಸಂಗ್ರಹಿಸಲಾಗಿದೆ. ಬಿಲ್ ಪಾವತಿಸದ 23 ಲಕ್ಷ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ತಿಂಗಳಲ್ಲಿ ಸ್ಯಾಂಟ್ರೋ ರವಿ ಕೇಸ್ ಮುಚ್ಚಿ ಹಾಕ್ತಾರೆ: ಎಚ್.ಡಿ.ಕುಮಾರಸ್ವಾಮಿ
ಬೆಸ್ಕಾಂನ ಮಾಪಕ ವಿಭಾಗದ ಸಿಬ್ಬಂದಿ ಸೆಪ್ಟೆಂಬರ್‌ನಿಂದ ನವೆಂಬರ್ ತಿಂಗಳವರೆಗೆ 2373 ವಿದ್ಯುತ್ ಮೀಟರ್‌ಗಳ ಪರಿಶೀಲನೆ ಮಾಡಿದ್ದು, ವಿದ್ಯುತ್ ಕಳ್ಳತನ ಹೊರತುಪಡಿಸಿದ ವಿವಿಧ ಲೋಪಗಳಿಗೆ .7 ಕೋಟಿ ದಂಡ ವಿಧಿಸಿ .5 ಕೋಟಿ ಸಂಗ್ರಹಿಸಲಾಗಿದೆ. ಇನ್ನು 4,784 ವಿದ್ಯುತ್ ದುರುಪಯೋಗ ಪ್ರಕರಣಗಳಲ್ಲಿ .6.5 ಕೋಟಿ ದಂಡ ವಿಧಿಸಿ 3.9 ಕೋಟಿ ವಸೂಲಿ ಮಾಡಲಾಗಿದೆ. ಬೆಸ್ಕಾಂ ಕಾರ್ಯವ್ಯಾಪ್ತಿಯ ರಾಜಾಜಿ ನಗರ, ಜಯ ನಗರ, ಇಂದಿರಾ ನಗರ, ಮಲ್ಲೇಶ್ವರ, ಹೊಸಕೋಟೆ, ರಾಮ ನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ಚಿತ್ರದುರ್ಗ ಸೇರಿದಂತೆ ಒಟ್ಟು 11 ಜಾಗೃತ ದಳ ಠಾಣೆಗಳಲ್ಲಿ 11 ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಜಾಗೃತದಳ ತಪಾಸಣೆ ಅಭಿಯಾನ ಹಮ್ಮಿಕೊಂಡಿತ್ತು.