Asianet Suvarna News Asianet Suvarna News

ತಿಂಗಳಲ್ಲಿ ಸ್ಯಾಂಟ್ರೋ ರವಿ ಕೇಸ್‌ ಮುಚ್ಚಿ ಹಾಕ್ತಾರೆ: ಎಚ್‌.ಡಿ.ಕುಮಾರಸ್ವಾಮಿ

ಸಿಐಡಿ ವಿಚಾರಣೆಗೆ ಒಪ್ಪಿಸಿರುವ ಸ್ಯಾಂಟ್ರೋ ರವಿ ಪ್ರಕರಣವನ್ನು ಬಿಜೆಪಿ ಸರ್ಕಾರ ಇನ್ನೊಂದು ತಿಂಗಳಲ್ಲಿ ಮುಚ್ಚಿಹಾಕಲಿದೆ ಎಂದು ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Former CM HD Kumaraswamy Reaction On Santro Ravi Case gvd
Author
First Published Jan 18, 2023, 10:14 AM IST

ಹುಬ್ಬಳ್ಳಿ (ಜ.18): ಸಿಐಡಿ ವಿಚಾರಣೆಗೆ ಒಪ್ಪಿಸಿರುವ ಸ್ಯಾಂಟ್ರೋ ರವಿ ಪ್ರಕರಣವನ್ನು ಬಿಜೆಪಿ ಸರ್ಕಾರ ಇನ್ನೊಂದು ತಿಂಗಳಲ್ಲಿ ಮುಚ್ಚಿಹಾಕಲಿದೆ ಎಂದು ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಯಾವ ರೀತಿ ತನಿಖೆ ನಡೆಸುತ್ತಾರೋ, ಏನೆಲ್ಲ ತನಿಖೆ ಮಾಡುತ್ತಾರೋ, ತನಿಖೆಯಿಂದ ಯಾವೆಲ್ಲ ಸತ್ಯಾಂಶ ಹೊರಬರುತ್ತೆ ಕಾದು ನೋಡೋಣ. ಒಂದು ತಿಂಗಳಲ್ಲಿ ಪ್ರಕರಣ ಮುಚ್ಚಿಹಾಕುತ್ತಾರೆ’ ಎಂದು ಹೇಳಿದರು.

ಇದೆ ವೇಳೆ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅವರವರಲ್ಲೇ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಶಾಸಕ ತಿಪ್ಪಾರೆಡ್ಡಿ ಆಡಿಯೋ ಕುರಿತು ಬಿಜೆಪಿ ಶಾಸಕರು, ಸಚಿವರ ನಡುವೆ ಕೆಸರೆರಚಾಟ ಶುರುವಾಗಿದೆ. ಇದೆಲ್ಲವನ್ನು ಜನ ನೋಡುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ರಾಜ್ಯದಿಂದ ಹೊರಹಾಕಲು ಜನರು ಕಾಯುತ್ತಿದ್ದಾರೆ’ ಎಂದರು.

ಪಡಿತರ ಪಡೆಯುವ ಎಸ್ಸಿ, ಎಸ್ಟಿಗಳ ಸಮೀಕ್ಷೆ?: ಪಡಿತರ ನೀಡುವಾಗ ಜಾತಿ ಕೇಳುತ್ತಿರುವ ಅಂಗಡಿ ಮಾಲೀಕರು

ಪಂಚರತ್ನ ಯಾತ್ರೆ 3ನೇ ಹಂತಕ್ಕೆ ಚಾಲನೆ: ಪಂಚರತ್ನ ಯಾತ್ರೆಯ 3ನೇ ಹಂತಕ್ಕೆ ವಿಜಯಪುರ ಜಿಲ್ಲೆ, ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಚಾಲನೆ ನೀಡಿ ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ‘ರಾಜ್ಯದಲ್ಲಿ ಜೆಡಿಎಸ್‌ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಲಾಗುತ್ತದೆ. 

65ವರ್ಷ ವಯಸ್ಸಿನ ಎಲ್ಲ ಹಿರಿಯರಿಗೆ ಪ್ರತಿ ತಿಂಗಳು 5 ಸಾವಿರ, ಅಂಗವಿಕಲರು, ವಿಧವೆಯರಿಗೆ ಪ್ರತಿ ತಿಂಗಳು 2,500 ನೀಡಲಾಗುತ್ತದೆ. ಶಿಕ್ಷಣ, ಆರೋಗ್ಯ, ವಸತಿ, ಕೃಷಿ, ಉದ್ಯೋಗ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುವುದು. ಗ್ರಾಪಂ ಮಟ್ಟದಲ್ಲೇ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಲಾಗುವುದು, ರೈತ ಚೈತನ್ಯ, ತೆಲಂಗಾಣ ಮಾದರಿಯ ರೈತ ಬಂಧು ಯೋಜನೆ ಜಾರಿ ಮಾಡಲಾಗುವುದು, ರೈತರಿಗೆ 24 ಗಂಟೆ ನಿರಂತರ ಉಚಿತ ವಿದ್ಯುತ್‌ ಕಲ್ಪಿಸಲಾಗುವುದು‘ ಎಂದು ಭರವಸೆ ನೀಡಿದರು.

ಜೆಡಿಎಸ್‌ಗೆ ರಾಜ್ಯದ ಗದ್ದುಗೆ ಖಚಿತ: ಕರ್ನಾಟಕದಲ್ಲಿ ಕುಮಾರಸ್ವಾಮಿರ ಪಂಚರತ್ನ ರಥಯಾತ್ರೆ ಶುಭವಾಗಿ ಸಾಗುತ್ತಿದ್ದು, ಜೂನ್‌ ತಿಂಗಳಲ್ಲಿ ಹೆಚ್‌.ಡಿ ಕುಮಾರಸ್ವಾಮಿ ರವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಶತಸಿದ್ದ, ಹಾಗೇ ಚಿಂತಾಮಣಿಯಲ್ಲಿ ಜೆಕೆ ಕೃಷ್ಣಾರೆಡ್ಡಿ ಹೆಚ್ಚಿನ ಮತಗಳಿಂದ ಗೆದ್ದು ಬರಲಿದ್ದಾರೆಂದು ಜೆಡಿಎಸ್‌ ಪಕ್ಷದ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು. ನಗರದ ವೆಂಕಟಗಿರಿಕೋಟೆಯಲ್ಲಿನ ನಡೆದಾಡುವ ದೇವರು ಆಯತ್‌ ಬಾಬಾರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಕ್ಷೇಮ ವಿಚಾರಿಸಿ, ಬಾಬಾರ ಆಶಿರ್ವಾದ ಪಡೆದ ಬಳಿಕ ಪತ್ರಕರ್ತರ ಜತೆ ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಬ್ರೇಕ್ ಹಾಕಿದ ಹೈಕಮಾಂಡ್: ನಳಿನ್ ಕುಮಾರ್ ಕಟೀಲ್ ಸೇಫ್?

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಜೆಡಿಎಸ್‌ಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ಕುಮಾರಸ್ವಾಮಿರ ಪಂಚರತ್ನ ರಥ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಜೂನ್‌ ತಿಂಗಳಲ್ಲಿ ಕುಮಾರಸ್ವಾಮಿಯವರ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಖಚಿತ. ಹಲವಾರು ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಅಧಿಕಾರಿವನ್ನು ನೋಡಿದ್ದಾಗಿದೆ. ನಮಗೂ ಒಂದು ಅವಕಾಶ ನೀಡಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಸಿಕೆ ಶಬ್ಬೀರ್‌, ಅಲ್ಲು, ಜಯಮ್ಮ, ಸಾದಿಕ್‌, ಚಾಂದ್‌ ಪಾಷ ಸೇರಿದಂತೆ ಮತಿತ್ತರರು ಉಪಸಿತರಿದ್ದರು.

Follow Us:
Download App:
  • android
  • ios