ಜೂನ್ 1ರಿಂದ ಬೆಂಗಳೂರು- ಶಿವಮೊಗ್ಗ ರೈಲು ಸಂಚಾರ ಆರಂಭ
ಲಾಕ್‌ಡೌನ್‌ನಿಂದಾಗಿ ಪ್ರಯಾಣಿಕರ ರೈಲು ಸಂಚಾರ ಸಂಚಾರ ಸಂಪೂರ್ಣ ರದ್ದಾಗಿತ್ತು. ಇದೀಗ ಜೂನ್ 01 ರಿಂದ ದೇಶಾದ್ಯಂತ 100 ರೈಲುಗಳು ಸಂಚಾರ ಆರಂಭಿಸಲಿವೆ. ಇದರಲ್ಲಿ ಶಿವಮೊಗ್ಗ-ಬೆಂಗಳೂರು ನಡುವಿನ ಜನಶತಾಬ್ದಿ ರೈಲು ಕೂಡಾ ಸೇರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.21): ಜೂನ್ 1ರಿಂದ ದೇಶಾದ್ಯಂತ 100 ಜೋಡಿ ರೈಲು ಸಂಚಾರ ಆರಂಭಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈ ರೈಲುಗಳಲ್ಲಿ ಸಂಚರಿಸಲು ಗುರುವಾರ ಬೆಳಗ್ಗೆ 10 ಗಂಟೆಯಿಂದ ಅನ್‌ಲೈನ್‌ನಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿರುತ್ತದೆ.
ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಗೆ ಅವಕಾಶ ಇರುವುದಿಲ್ಲ. ಹವಾನಿಯಂತ್ರಿತ ಮತ್ತು ಸಾಮಾನ್ಯ ಬೋಗಿಗಳಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ವಿಶೇಷವೆಂದರೆ ಸಾಮಾನ್ಯ ಬೋಗಿಗಳಲ್ಲೂ ಟಿಕೆಟ್ ಕಾಯ್ದಿರಿಸಲಾಗುತ್ತದೆ. ಇದಕ್ಕೆ 2 ಕ್ಲಾಸ್ ಟಿಕೆಟ್‌ನ ದರ ವಿಧಿಸಲಾಗುತ್ತದೆ. ಈ ರೈಲುಗಳಲ್ಲಿ ಕಾಯ್ದಿರಿಸದ ಟಿಕೆಟ್‌ಗಳು ಲಭ್ಯವಿರುವುದಿಲ್ಲ. ಗರಿಷ್ಠ 30 ದಿನಗಳ ಮುಂದಿನ ಅವಧಿಗೆ ಮಾತ್ರ ಟಿಕೆಟ್ ಖರೀದಿಸಬಹುದು. ತತ್ಕಾಲ್, ಪ್ರೀಮಿಯಂ ತತ್ಕಾಲ್ ಟಿಕೆಟ್ ಲಭ್ಯವಿರುವುದಿಲ್ಲ.
ರಾಜ್ಯಕ್ಕೆ ಹಲವು ರೈಲು: ಈ ವಿಶೇಷ ರೈಲು ಯೋಜನೆಯಡಿ ಕರ್ನಾಟಕದೊಳಗೆ ಬೆಂಗಳೂರು- ಹುಬ್ಬಳ್ಳಿ ಮತ್ತು ಯಶವಂತಪುರ ಮತ್ತು ಶಿವಮೊಗ್ಗ ನಡುವಿನ ಜನಶತಾಬ್ಧಿ ರೈಲುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ 8 ರೈಲುಗಳು ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವಂಥದ್ದಾಗಿದೆ. ಒಂದು ರೈಲು ಮುಂಬೈನಿಂದ ಗದಗ್‌ಗೆæ ಆಗಮಿಸಲಿದೆ. ಕೆಲವು ರೈಲುಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಿಲ್ದಾಣಗಳನ್ನು ಹಾದು ಹೋಗಲಿವೆ.
ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಚಿವ ಮಾಧುಸ್ವಾಮಿ, ಇದೆಂಥಾ ಸಭ್ಯತೆ ಸ್ವಾಮಿ...!
ಅಹಾರ ಸೇವೆ ಆರಂಭ: ಈ ನಡುವೆ ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಪೂರೈಕೆ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ಸ್ಥಳದಲ್ಲಿ ತಿನ್ನಲು ಅವಕಾಶ ನೀಡುವುದಿಲ್ಲ. ಬದಲಾಗಿ ಪ್ಯಾಕ್ ಮಾಡಿ ನೀಡಲಾಗುತ್ತದೆ.
ಗಾಡಿ ಸಂಖ್ಯೆ ಎಲ್ಲಿಂದ ಎಲ್ಲಿಗೆ ರೈಲು ಹೆಸರು
02089/90 ಯಶವಂತಪುರ ಶಿವಮೊಗ್ಗ ಟೌನ್ - ಜನ ಶತಾಬ್ದಿ ಎಕ್ಸ್‌ಪ್ರೆಸ್
01139/40 ಮುಂಬೈ ಸಿಎಸ್‌ಟಿ -ಗದಗ ಎಕ್ಸ್‌ಪ್ರೆಸ್
01301/02 ಮುಂಬೈ ಸಿಎಸ್‌ಟಿ ಕೆಎಸ್‌ಆರ್ ಬೆಂಗಳೂರು - ಉದ್ಯಾನ್ ಎಕ್ಸ್‌ಪ್ರೆಸ್
02296/95 ದಾನಾಪುರ ಕೆಎಸ್‌ಆರ್ ಬೆಂಗಳೂರು - ಸಂಘಮಿತ್ರ ಎಕ್ಸ್‌ಪ್ರೆಸ್
02629/30 ನವದೆಹಲಿ ಯಶವಂತಪುರ - ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್
02079/80 ಕೆಎಸ್‌ಆರ್ ಬೆಂಗಳೂರು ಹುಬ್ಬಳ್ಳಿ- ಜನ ಶತಾಬ್ದಿ ಎಕ್ಸ್‌ಪ್ರೆಸ್
02245/46 ಹೌರಾ ಯಶವಂತಪುರ - ತುರಂತೋ ಎಕ್ಸ್‌ಪ್ರೆಸ್