ಶಿವಮೊಗ್ಗ ಜನಶತಾಬ್ದಿಗೆ ಮತ್ತೊಂದು ನಿಲ್ದಾಣ : ಒಂದೇ ನಿಮಿಷ ಸ್ಟಾಪ್
ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಸಂಚರಿಸುವ ಜನಶತಾಬ್ದಿ ರೈಲು ಮತ್ತೊಂದು ಕಡೆ ನಿಲ್ಲಲಿದೆ. ಇಂದಿನಿಂದಲೇ ತರಿಕೆರೆಯಲ್ಲಿ 1 ನಿಮಿಷ ನಿಂತು ತೆರಳಲಿದೆ.
ತರೀಕೆರೆ (ಜ.15): ಸಂಕ್ರಾಂತಿಯ ಕೊಡುಗೆಯಾಗಿ ಶಿವಮೊಗ್ಗ ದಿಂದ ಬೆಂಗಳೂರಿಗೆ ಪ್ರತಿನಿತ್ಯ ತೆರಳುವ ಪ್ರಯಾಣಿಕರ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಇಂದಿನಿಂದ [ ಜ.15 ರಿಂದ] ತರೀಕೆರೆ ರೈಲು ನಿಲ್ದಾಣದಲ್ಲಿ ನಿಂತು ಹೊರಡಲಿದೆ .
ತರೀಕೆರೆ ರೈಲು ನಿಲ್ದಾಣದಲ್ಲಿ ಜನಶತಾಬ್ದಿ ರೈಲು ನಿಲುಗಡೆ ಆಗಬೇಕೆಂದು ಇಲ್ಲಿನ ರೈಲು ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿತ್ತು. ಅದರಂತೆ ಇಲ್ಲಿ ಇನ್ಮುಂದೆ ರೈಲು ನಿಲ್ಲಲಿದೆ. ಆದರೆ ಒಂದು ನಿಮಿಷ ಮಾತ್ರ ಇಲ್ಲಿ ರೈಲು ನಿಂತು ತೆರಳಲಿದೆ.
ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು...
ಶಾಸಕ ಕೃತಜ್ಞತೆ: ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಪ್ರಯಾಣಿಕರ ಜನ್ಮಶತಾಬ್ದಿ ರೈಲು ನಿಲುಗಡೆಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ರೈಲ್ವೆ ಸಚಿವರಿಗೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಶಾಸಕ ಡಿ.ಎಸ್.ಸುರೇಶ್ ಅವರು ಕೃತಜ್ಞತೆ ಅರ್ಪಿಸಿ, ರೈಲು ನಿಲುಗಡೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..
ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರ ಜನಶತಾಬ್ದಿ ರೈಲು ನಿಲ್ದಾಣಕ್ಕೆ ಬೆಳಗ್ಗೆ 6 ಗಂಟೆ ವೇಳೆಗೆ ಬರುತ್ತದೆ.
ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು 9.50ಕ್ಕೆ ಯಶವಂತಪುರ ತಲುಪುತ್ತದೆ.