ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..!
ಶಿವಮೊಗ್ಗ-ಬೆಂಗಳೂರು ಸಂಚರಿಸುವ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಅಷ್ಟಕ್ಕೂ ಏನಿದು ಗುಡ್ ನ್ಯೂಸ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಶಿವಮೊಗ್ಗ[ನ.23] ನಗರದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಚರಿಸುವ ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಇನ್ನು ಮುಂದೆ ವಾರ ಪೂರ್ತಿ ಸಂಚರಿಸಲಿದೆ.
ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು
ಹೌದು, ಈ ಹಿಂದೆ ಶಿವಮೊಗ್ಗ-ಯಶವಂತಪುರ ನಡುವೆ ಮಂಗಳವಾರ ಹೊರತುಪಡಿಸಿ ಉಳಿದ ಆರು ದಿನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿತ್ತು, ಇದೀಗ ತಕ್ಷಣಕ್ಕೆ ಜಾರಿಗೆ ಬರುವಂತೆ ವಾರದ ಎಲ್ಲಾ ದಿನವೂ ಸಂಚರಿಸುವಂತೆ ರೈಲ್ವೆ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ. ಇನ್ನು ಮುಂದೆ ಶಿವಮೊಗ್ಗದಿಂದ ಪ್ರತಿದಿನ ಮುಂಜಾನೆ 5.30ಕ್ಕೆ ಹೊರಡುವ ರೈಲು[ಸಂಖ್ಯೆ: 12090] ಬೆಳಗ್ಗೆ 9.50ಕ್ಕೆ ಯಶವಂತಪುರ ತಲುಪುತ್ತದೆ. ಮತ್ತೆ ಅದೇ ದಿನ ಸಂಜೆ 5.30ಕ್ಕೆ ಸರಿಯಾಗಿ ಯಶವಂತಪುರದಿಂದ ಹೊರಡುವ ರೈಲು[ಸಂಖ್ಯೆ 12089] ರಾತ್ರಿ 9.55ಕ್ಕೆ ಶಿವಮೊಗ್ಗ ತಲುಪಲಿದೆ.
ಬೆಂಗಳೂರು-ಶಿವಮೊಗ್ಗ ಜನಶತಾಬ್ಧಿ ರೈಲು ಟಿಕೆಟ್ ದರ
ಕಳೆದ ತಿಂಗಳಷ್ಟೇ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿತ್ತು. ಈ ಮೊದಲು ಶಿವಮೊಗ್ಗದಿಂದ 5.15ಕ್ಕೆ ಹೊರಡುತ್ತಿದ್ದ ರೈಲು 5.30ಕ್ಕೆ ಹೊರಡುವಂತೆ ಮಾಡಲಾಗಿತ್ತು. ಅಲ್ಲದೇ 30 ನಿಮಿಷ ಪ್ರಯಾಣದ ಅವಧಿಯನ್ನು ತಗ್ಗಿಸಲಾಗಿತ್ತು. 2019ರ ಫೆಬ್ರವರಿ 03ರಂದು ಶಿವಮೊಗ್ಗ-ಯಶವಂತಪುರ ನಡುವಿನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದ್ದರು.