ಬೆಂಗಳೂರಿಗೆ ಗುಡ್ ನ್ಯೂಸ್: ಆಸ್ತಿ ತೆರಿಗೆ ಹೆಚ್ಚಳ ಮಾಡೊಲ್ಲವೆಂದು ಭರವಸೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ನಾವು ಬ್ರ್ಯಾಂಡ್ ಬೆಂಗಳೂರು ಮಾಡುತ್ತಿದ್ದರೂ ಟ್ಯಾಕ್ಸ್ ಹೆಚ್ಚಳ ಮಾಡಲ್ಲ. ಆದ್ರೆ ಎಲ್ಲ ಸ್ವತ್ತುಗಳನ್ನು ಮರು ಸಮೀಕ್ಷೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು (ಅ.09): ನಾವು ಬ್ರ್ಯಾಂಡ್ ಬೆಂಗಳೂರು ಮಾಡುತ್ತಿದ್ದರೂ ಟ್ಯಾಕ್ಸ್ ಹೆಚ್ಚಳ ಮಾಡಲ್ಲ. ಆದರೆ, ಬೆಂಗಳೂರಿನ ಎಲ್ಲಾ ಸ್ವತ್ತುಗಳನ್ನ ಮರು ಸಮೀಕ್ಷೆ ಮಾಡಿಸುತ್ತೇವೆ. ಎಲ್ಲಿ ತೆರಿಗೆ ಸೋರಿಕೆ ಆಗುತ್ತಿದೆಯೋ ಅದನ್ನು ಸರಿಪಡಿಸಿ ಡಿಜಿಟಲೀಕರಣ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ ಕಾರ್ಯಕ್ರಮ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಯಾವ ದಿಟ್ಟಿನಲ್ಲಿ ಬದಲಾವಣೆ ಆಗಬೇಕು ಅನ್ನೋ ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ 1.40 ಕೋಟಿ ಜನ ವಾಸ ಮಾಡುತ್ತಿದ್ದಾರೆ. ಪ್ರತಿವರ್ಷ 3 ಲಕ್ಷ ಹೊಸ ಕುಟುಂಬಗಳು ಸೇರ್ಪಡೆ ಆಗ್ತಿವೆ. ಕುಡಿಯುವ ನೀರಿನ ಬೇಡಿಕೆ ಕೂಡ ಜಾಸ್ತಿ ಆಗ್ತಾ ಇದೆ. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ತಜ್ಞರಿಂದ ಸಲಹೆ ಪಡೆದುಕೊಂಡಿದ್ದೇವೆ. ಎಲ್ಲಾ ವಲಯಗಳ ಎಂಟು ತಂಡಗಳನ್ನು ಮಾಡಿದ್ದೇವೆ. ಅವರಿಂದ ವರದಿ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ? ಜಗತ್ತಿನಲ್ಲಿ ಕಣ್ಮರೆಯಾಗಲಿರುವ ದೇಶ ಇಸ್ರೇಲ್ ಅಥವಾ ಪ್ಯಾಲೆಸ್ತೇನ್?
ಬ್ರ್ಯಾಂಡ್ ಬೆಂಗಳೂರು ಮಾಡುವುದಕಕೆ 70 ಸಾವಿರ ಜನರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಆದರೆ, ಟ್ಯಾಕ್ಸ್ ಹೆಚ್ಚಳ ಮಾಡಲ್ಲ. ಆದರೆ, ಬೆಂಗಳೂರಿನ ಎಲ್ಲಾ ಸ್ವತ್ತುಗಳನ್ನು ಮರು ಸಮೀಕ್ಷೆ ಮಾಡಿ ಸೋರಿಕೆ ಆಗುವುದನ್ನು ಸರಿಪಡಿಸುತ್ತೇವೆ. ಎಲ್ಲ ಆಸ್ತಿಗಳನ್ನು ಡಿಜಿಟಲೀಕರಣ ಮಾಡುತ್ತಿದ್ದೇವೆ. ಜೊತೆಗೆ, ಟ್ರಾಫಿಕ್ ಸಮಸ್ಯೆ ತಗ್ಗಿಸಲು ಹಣ ಜಾಸ್ತಿಯಾಗುತ್ತಿದ್ದು, ಮೆಟ್ರೋ ಹಾಗೂ ಟನಲ್ ನಿರ್ಮಾಣ ಪರಿಹಾರವಾಗಲಿದೆ. ರಾಜಕಾಲುವೆ ವಿಚಾರದಲ್ಲಿ ಬಿಬಿಎಂಪಿ ಫ್ರೀ ಹ್ಯಾಂಡ್ ಕೊಟ್ಟಿದ್ದೇನೆ. ಐಟಿ ಕಾರಿಡಾರ್‌ನಲ್ಲಿ ಮತ್ತೆ ಸಮಸ್ಯೆ ಆಗಬಾರದು ಎಂದು ಸೂಚಿಸಲಾಗಿದೆ ಎಂದರು.
ಶಾಲೆ ಸಮಯ ಬದಲಾವಣೆ ಕುರಿತು ಅಭಿಪ್ರಾಯ ಸಂಗ್ರಹ ಮಾಡಲು ಹೇಳಿದ್ದೇನೆ. ಇನ್ನು ಕಸತ್ಯಾಜ್ಯ ವಿಂಗಡಣೆ ಅದ್ಯಾವುದು ಕೂಡ ಬರ್ನ್ ಆಗ್ತಾ ಇಲ್ಲ. ನಾಳೆ ಈ ಸಂಬಂಧ ಸಭೆ ಕರೆದಿದ್ದೇನೆ. ಟ್ರಾಫಿಕ್ ಜೊತೆ ಟ್ಯಾಕ್ಸ್ ಕಲೆಕ್ಷನ್, ಕಸ ತ್ಯಾಜ್ಯ ವಿಂಗಡಣೆ ಇದಕ್ಕೆ ಮೊದಲ ಆದ್ಯತೆ ಕೊಟ್ಟಿದ್ದೇನೆ. ಆಟದ ಮೈದಾನ, ಪಾರ್ಕ್ ಗೆ ಸಂಬಂಧಿಸಿದಂತೆ ಅಯಾ ವಾರ್ಡಿನ ಕಮಿಟಿ ಮಾಡುವ ಒಂದು ಚಿಂತನೆ ಇದೆ. ನನ್ನ ಕಚೇರಿಗೆ ದೂರು ಸಲ್ಲಿಕೆ ಮಾಡಬಹುದು. ಸಹಾಯಹಸ್ತ ಅನ್ನೋ ಅಡಿಯಲ್ಲಿ ಸಾರ್ವಜನಿಕರು ದೂರು ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.
Bengaluru: ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮೂರು ವರ್ಷದ ಮಗು ಬಲಿ
ಕಾವೇರಿ 5 ನೇ ಹಂತ 20 ಎಸ್‌ಟಿಪಿ ಘಟಕಗಳನ್ನು ಆಪ್ ಗ್ರೇಡ್ ಮಾಡಲಾಗುತ್ತಿದೆ. ಶೀಘ್ರವೇ 110 ಹಳ್ಳಿಗೆ ಕಾವೇರಿ ನೀರು ಸಿಗಲಿದೆ. ಬಿಡಿಎಯಿಂದ ಆಟೋಮೆಟಿಕ್ ಅಪ್ರೂಲ್ ಲೈಸೆನ್ಸ್ ಸಿಗಲಿದೆ. ಬೆಂಗಳೂರಿನಲ್ಲಿ ಬಿಡಿಎಯಿಂದ ದೊಡ್ಡ ಸೈಟ್‌ಗಳಿಗೆ ಹಿಂದೆ ಕೊಟ್ಟಿದ್ದೇವೆ. ರಿಜಿಸ್ಟರ್ ಆರ್ಕಿಟೆಕ್ಟ್ ಅವರಿಂದ ಪ್ಲಾನ್ ಇರಬೇಕು. ಅಂತವರಿಗೆ ಆಟೋಮೆಟಿಕ್ ಲೈಸೆನ್ಸ್ ಅಪ್ರೂಲ್ ಸಿಗಲಿದೆ ಎಂದರು.