Asianet Suvarna News Asianet Suvarna News

Bengaluru: ಕಿಲ್ಲರ್‌ ಬಿಎಂಟಿಸಿ ಬಸ್‌ಗೆ ಮೂರು ವರ್ಷದ ಮಗು ಬಲಿ

ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ಬಿಎಂಟಿಸಿ ಬಸ್‌ಗೆ 3 ವರ್ಷದ ಚಿಕ್ಕ ಮಗು ಬಲಿಯಾಗಿರುವ ದುರ್ಘಟನೆ ಭಾನುವಾರ ಸಂಜೆ ವೇಳೆ ದುರ್ಘಟನೆ ನಡೆದಿದೆ. 

Bengaluru killer BMTC bus killed three year old child at Garepalya Junction sat
Author
First Published Oct 9, 2023, 11:47 AM IST

ಬೆಂಗಳೂರು (ಅ.09): ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆಗಳಲ್ಲಿ ಒಂದಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗೆ 3 ವರ್ಷದ ಚಿಕ್ಕ ಮಗು ಬಲಿಯಾಗಿರುವ ದುರ್ಘಟನೆ ಭಾನುವಾರ ಸಂಜೆ ವೇಳೆ ದುರ್ಘಟನೆ ನಡೆದಿದೆ. 

ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್ ನಲ್ಲಿ ನಿನ್ನೆ ಸಂಜೆ ವೇಳೆ ಘಟನೆ ನಡೆದಿದೆ. ಮೃತ ಮಗುವನ್ನು ಅಯಾನ್ (3) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ದೊಡ್ಡಮ್ಮನೊಂದಿಗೆ ವಾಸವಾಗಿದ್ದ ಮಗು ನಿನ್ನೆ ಭಾನುವಾರವಾದ್ದರಿಂದ ತಮ್ಮ ದೊಡ್ಡಮ್ಮನೊಂದಿಗೆ ಬೈಕ್‌ನಲ್ಲಿ ಹೊರಗೆ ಬಂದಿದೆ. ಈ ವೇಳೆ ರಸ್ತೆಯಲ್ಲಿ ಹೋಗುವ ಬೈಕ್‌ಗೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್‌ ಗುದ್ದಿದ್ದು, ಬೈಕ್‌ನಲ್ಲಿ ಕುಳಿತಿದ್ದ ಮಗು ಕೆಳಗೆ ಬೀಳುತ್ತಿದ್ದಂತೆ ಮಗುವಿನ ಮೇಲೆ ಬಸ್‌ ಹರಿದಿದೆ. ಸ್ಥಳದಲ್ಲಿಯೇ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಬಾಲಸೋರ್‌ ರೈಲು ದುರಂತ: 28 ಶವಗಳ ಗುರುತು ಪತ್ತೆಯಾಗದೇ, ರೈಲ್ವೆ ಇಲಾಖೆಯಿಂದ ಅಂತ್ಯಕ್ರಿಯೆ ಮಾಡಲು ತೀರ್ಮಾನ

ನಿನ್ನೆ ಸಂಜೆ ಅಂಗಡಿಗೆ ಹೋಗಿ ಮರಳಿ ಮನೆಗೆ ದೊಡ್ಡಮ್ಮನ ಜೊತೆಗೆ ಹೋಗುವಾಗ ಮಗು ಬೈಕ್‌ನಲ್ಲಿ ಕುಳಿತುಕೊಂಡಿತ್ತು. ಇನ್ನು ಹಿಂಬಂದಿಯಿಂದ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದ್ದು, ಕೂಡಲೇ ಮಗು ಕೆಳಗಡೆ ಬಿದ್ದಿದೆ. ಮಗು ಕೆಳಗಡೆ ಬಿಳುತ್ತಿದ್ದಂತೆ ಬಿಎಂಟಿಸ್ ಬಸ್ ಚಕ್ರ ಮಗುವಿನ ತಲೆಯ ಮೇಲೆ ಹತ್ತಿದೆ. ಮೆದುಳು ಅಪ್ಪಚ್ಚಿಯಾಗಿ ಕಣ್ಣುಗಳು ಹೊರಗೆ ಬಂದಿದೆ. ಪರಿಣಾಮವಾಗಿ 3 ವರ್ಷದ ಗಂಡು ಮಗು ಸ್ಥಳದಲ್ಲೆ ಮೃತ ಪಟ್ಟಿದೆ. ಘಟನೆ ಸಂಬಂದ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಿಎಂಟಿಸಿ ಬಸ್ ಹಾಗೂ ಚಾಲಕರನ್ನ ವಶಕ್ಕೆ ಪಡೆದಿದ್ದಾರೆ.

ಅತ್ತಿಬೆಲೆ ಪಟಾಕಿ ಮಳಿಗೆ ದುರಂತದ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ: ಅತ್ತಿಬೆಲೆ ಪಟಾಕಿ ದುರಂತದ ಘಟನೆಯಲ್ಲಿ 14 ಮಂದಿ ಘೋರವಾಗಿ ಸಾವನ್ನಪ್ಪಿದ್ದು, ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗೋದಾಮು ಮಾಲೀಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಗೋದಾಮಿಗೆ ಜಿಲ್ಲಾಧಿಕಾರಿಗಳು, ಪೊಲೀಸ್‌ ಹಾಗೂ ಅಗ್ನಿಶಾಮಕ ದಳ ಹೇಗೆ ನಿರಾಪೇಕ್ಷಣಾ ಪತ್ರ ನೀಡಿದರು ಎಂಬುದೂ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ಅತ್ತಿಬೆಲೆ ದುರಂತದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅತ್ತಿಬೆಲೆ ಪಟಾಕಿ ದುರಂತ ಸಿಐಡಿ ತನಿಖೆಗೆ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಸಿದ್ದರಾಮಯ್ಯ

ಅತ್ತಿಬೆಲೆಯಲ್ಲಿ ನಡೆದ ಅಗ್ನಿದುರಂತದ ಘಟನಾ ಸ್ಥಳಕ್ಕೆ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜತೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಐಡಿ ಪೊಲೀಸರ ತಂಡ ದುರಂತದ ಹಿಂದಿರುವ ಕಾರಣ ಹಾಗೂ ತಪ್ಪಿತಸ್ಥರನ್ನು ಪತ್ತೆ ಹಚ್ಚಲಿದೆ. ಪ್ರಕರಣದಲ್ಲಿ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೆ, ಮೃತರ ಕುಟುಂಬಕ್ಕೆ ಈಗಾಗಲೇ ಘೋಷಿಸಿರುವಂತೆ ರಾಜ್ಯ ಸರ್ಕಾರದ ವತಿಯಿಂದ 5 ಲಕ್ಷ ರು. ಪರಿಹಾರ ನೀಡಲಾಗುವುದು. ಜತೆಗೆ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಭರವಸೆ ನೀಡಿದರು. 

Follow Us:
Download App:
  • android
  • ios