Asianet Suvarna News Asianet Suvarna News

ಬೆಂಗಳೂರು ಮಳೆ: ಸಾವಿನ ಕದ ತಟ್ಟಿಬಂದ ಅನುಭವ ಹಂಚಿಕೊಂಡ ಫ್ಲಿಪ್‌ಕಾರ್ಟ್ ಉದ್ಯೋಗಿ!

ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಫ್ಲಿಪ್‌ಕಾರ್ಟ್‌ನ ಉದ್ಯೋಗಿಯೊಬ್ಬರು ನೀರಿನಲ್ಲಿ ಸಿಲುಕಿಕೊಂಡು ವಿದ್ಯುತ್ ತಂತಿ ಸ್ಪರ್ಶಗೊಂಡು ಸಾವಿನ ದವಡೆಯಿಂದ ಪಾರಾಗಿ ಬಂದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.

Bengaluru Rains Flipkart Employee Narrow Escape Waterlogged Roads sat
Author
First Published Oct 16, 2024, 3:48 PM IST | Last Updated Oct 16, 2024, 3:48 PM IST

ಬೆಂಗಳೂರು. ಭಾರೀ ಮಳೆಯಿಂದಾಗಿ ಭಾರತದ ಐಟಿ ನಗರಿ ಬೆಂಗಳೂರು (Bengaluru Rains) ಜಲಾವೃತಗೊಂಡಿದೆ. ಹಲವು ಪ್ರದೇಶಗಳಲ್ಲಿ ರಸ್ತೆಗಳು ಮುಳುಗಡೆಗೊಂಡಿವೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರ ಜೀವಕ್ಕೆ ಅಪಾಯ ಎದುರಾಗಿದೆ. ಇನ್ನು ಫ್ಲಿಪ್‌ಕಾರ್ಟ್ ಉದ್ಯೋಗಿಯೊಬ್ಬ ಮಳೆ ನೀರನ್ನೂ ಲೆಕ್ಕಿಸದೇ ಡೆಲಿವರಿ ಕೊಡಲು ಹೋಗಿ ಸಾವಿನ ಕದ ತಟ್ಟಿಬಂದ ಅನುಭವ ಹಂಚಿಕೊಂಡಿದ್ದಾರೆ.

ಹೌದು, ಬೆಂಗಳೂರಿನಲ್ಲಿ ಆನ್‌ಲೈನ್ ಡೆಲಿವರಿ ಕೊಡಲು ಹೋಗಿದ್ದ ಫ್ಲಿಪ್‌ಕಾರ್ಟ್‌ನ ಉದ್ಯೋಗಿಯೊಬ್ಬರು ಮಳೆಯ ನೀರಿನಲ್ಲಿ ಸಿಲುಕಿಕೊಂಡು ಪಾರಾಗಿದ್ದಾರೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎಕ್ಸಾಸ್ಟ್‌ಗೆ ನೀರು ನುಗ್ಗಿ ಸ್ಕೂಟರ್ ನಿಂತು ಹೋಯಿತು. ಈ ಘಟನೆ ಮಂಗಳವಾರ ಸಂಜೆ ನಡೆದಿದೆ. ಫ್ಲಿಪ್‌ಕಾರ್ಟ್ ಉದ್ಯೋಗಿ ಸಿಲುಕಿಕೊಂಡ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ವಿದ್ಯುತ್ ತಂತಿಯೊಂದು ಸ್ಪಾರ್ಕ್ ಆಗುತ್ತಿತ್ತು.  ಆದರೆ, ತನಗೆ ವಿದ್ಯುತ್ ಶಾಕ್‌ನ ಅನುಭವ ಆಗುತ್ತಿದ್ದರೂ ಪ್ರಾಣಕ್ಕೆ ಹಾನಿಯಾಗುವ ಘಟನೆ ನಡೆಯಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮ್ಯಾಟ್ರಿಮೊನಿ ಮೋಸ: ಫಸ್ಟ್ ನೈಟ್ ವಿಡಿಯೋ ಮಾಡಿಕೊಂಡು 2ನೇ ಹೆಂಡ್ತಿಗೆ ಕೈಕೊಟ್ಟ ಸರ್ಕಾರಿ ನೌಕರ ಗುರುರಾಜ್!

ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತನಗಾದ ಅನುಭವ ಹಂಚಿಕೊಂಡ ಫ್ಲಿಪ್‌ಕಾರ್ಟ್ ಉದ್ಯೋಗಿ ತುಂಬಾ ಭಯಭೀತರಾಗಿದ್ದಾಗಿ ಹೇಳಿದ್ದಾರೆ. 'ಈ ಮಳೆಯಲ್ಲಿ ಜೀವನ್ಮರಣದ ನಡುವಿನ ಪರಿಸ್ಥಿತಿ ಎದುರಾಯಿತು. ನಾನು ಮನೆಯಿಂದ ಹೊರಟಾಗ ಭಾರೀ ಮಳೆಯಾಗುತ್ತಿತ್ತು. ನಂತರ ಮಳೆ ಕಡಿಮೆಯಾಯಿತು. ನಾನು ಸೋನಿ ಸಿಗ್ನಲ್ ತಲುಪಿದಾಗ ಮತ್ತೆ ಭಾರೀ ಮಳೆಯಾಯಿತು. ರಸ್ತೆಗಳು ತುಂಬಾ ಹದಗೆಟ್ಟಿದ್ದವು ಮತ್ತು ಟ್ರಾಫಿಕ್ ಇರಲಿಲ್ಲ. ಎಂದು ಪೋಸ್ಟ್‌ ಅನ್ನು ಆರಂಭಿಸಿದ್ದಾರೆ.

'ನಾನು 80 ಅಡಿ ರಸ್ತೆಯಲ್ಲಿದ್ದಾಗ ನೀರಿನ ಮಟ್ಟ ತುಂಬಾ ಹೆಚ್ಚಾಯಿತು. ಸ್ಕೂಟರ್‌ನ ಎಕ್ಸಾಸ್ಟ್‌ಗೆ ನೀರು ನುಗ್ಗಿ ಸ್ಕೂಟರ್ ನಿಂತುಹೋಯಿತು. ಆಗ ನಾನು ವಿದ್ಯುತ್ ತಂತಿಯೊಂದು ನೆಲಕ್ಕೆ ಬಿದ್ದಿರುವುದನ್ನು ನೋಡಿದೆ. ನನ್ನಿಂದ ಕೇವಲ 10 ಮೀಟರ್ ದೂರದಲ್ಲಿ ಅದು ಸ್ಪಾರ್ಕ್ ಆಗುತ್ತಿತ್ತು. ನಾನು ತುಂಬಾ ಭಯಗೊಂಡೆ. ನನ್ನ ಸ್ಕೂಟರ್ ಅನ್ನು ತಳ್ಳಿಕೊಂಡು ಸ್ನೇಹಿತನ ಮನೆಗೆ ಹೋದೆ. ಅಲ್ಲಿಂದ ಓಲಾ ಆಟೋ ಬುಕ್ ಮಾಡಿದೆ. 6 ಕಿಲೋಮೀಟರ್ ಪ್ರಯಾಣಕ್ಕೆ 500 ರೂಪಾಯಿ ಖರ್ಚಾಯಿತು ಎಂದು ಬರೆದಿದ್ದಾರೆ.

ತಮಿಳುನಾಡು ಭಾರಿ ನಿರಂತರ ಮಳೆ: ಬೆಂಗಳೂರು - ಚೆನ್ನೈ - ಮೈಸೂರು 10 ರೈಲುಗಳ ಸಂಚಾರ ರದ್ದು

ಇಂತಹ ಅನೇಕ ಭಯಾನಕ ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ. ಇನ್ನು ಅನೇಕರು ತಾವು ಬದುಕಿ ಬಂದಿದ್ದೇ ಹೆಚ್ಚು ಎಂದು ನಿಟ್ಟುಸಿರು ಬಿಟ್ಟ ಘಟನೆಗಳು ನಡೆದಿವೆ. ಆದ್ದರಿಂದ ಬೆಂಗಳೂರಿನಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವಾಗ ನೀರಿನಲ್ಲಿ ಹೋಗುವ  ಸಾಹಸವನ್ನು ಮಾಡಬೇಡಿ. ಇನ್ನು ಕೆಲವು ವರ್ಷಗಳ ಹಿಂದೆ ಫುಟ್‌ಪಾತ್‌ನಲ್ಲಿ ಮಗುವಿನ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕೈಯಿಂದ ಮಗು ದಿಢೀರನೇ ಫುಟ್‌ಪಾತ್ ಕಲ್ಲಿನ ಸಂದಿಯಲ್ಲಿ ಕುಸಿದು ಬೀಳುತ್ತದೆ. ಆಗ, ಮೋರಿಯಲ್ಲಿ ರಭಸವಾಗಿ ಹರಿಯುತ್ತಿದ್ದ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿ ಮಗು ದಾರುಣವಾಗಿ ಸಾವನ್ನಪ್ಪಿತ್ತು. ಮಗುವಿನ ಮೃತದೇಹ 2 ದಿನಗಳ ನಂತರ ಪತ್ತೆಯಾಗಿತ್ತು. ಹೀಗಾಗಿ ಮಳೆಯ ವೇಳೆ ರಸ್ತೆ ಮೇಲೆ ನಿಂತಿರುವ ನೀರಿನಲ್ಲಿ ಹೋಗಬೇಡಿ ಎನ್ನುವುದು ನಮ್ಮ ಕಳಕಳಿ ಆಗಿದೆ.

Latest Videos
Follow Us:
Download App:
  • android
  • ios