ತಮಿಳುನಾಡು ಭಾರಿ ನಿರಂತರ ಮಳೆ: ಬೆಂಗಳೂರು - ಚೆನ್ನೈ - ಮೈಸೂರು 10 ರೈಲುಗಳ ಸಂಚಾರ ರದ್ದು
ತಮಿಳುನಾಡಿನಲ್ಲಿ ನಿರಂತರ ಮಳೆಯಿಂದಾಗಿ ಬೆಂಗಳೂರು ಮತ್ತು ಚೆನ್ನೈ ನಡುವಿನ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ವಿಭಾಗದಿಂದ ಈ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ.
ಬೆಂಗಳೂರು (ಅ.16): ತಮಿಳುನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದ್ದು, ಬಸ್, ರೈಲು ಹಾಗೂ ವಿಮಾನ ಸೇರಿದಂತೆ ಎಲ್ಲ ವಾಹನಗಳ ಸಂಚಾರಕ್ಕೆ ಸೂಕ್ತ ವಾತಾವರಣ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಚೆನ್ನೈಗೆ ಸಾಗುವ ಈ ರೈಲುಗಳ ಸಂಚಾರವನ್ನು ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಚೆನ್ನೈ ನಡುವೆ ಸಂಚಾರ ಮಾಡುತ್ತಿದ್ದ 10 ರೈಲುಗಳ ಕಾರ್ಯಚರಣೆ ನಿಲ್ಲಿಸಲಾಗಿದೆ. ಇಂದು ಬೆಂಗಳೂರಿಂದ ಚೆನ್ನೈಗೆ ಹೊರಡಬೇಕಿದ್ದ ಹಾಗೂ ಚೆನ್ನೈನಿಂದ ಬೆಂಗಳೂರಿಗೆ ಬರಬೇಕಿದ್ದ ರೈಲು ಸಂಚಾರ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ವಿಭಾಗದಿಂದ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ.
ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ವಿಶೇಷ ರೈಲು, ಅ.17 ರಿಂದ ನ.7ವರೆಗೆ ಸೇವೆ!
ಬೆಂಗಳೂರು-ಚೆನ್ನೈ ನಡುವೆ ರದ್ದಾದ ರೈಲುಗಳ ವಿವರ:
1. ರೈಲು ಸಂಖ್ಯೆ. 12657
ಡಾ.MGR ಚೆನ್ನೈ ಸೆಂಟ್ರಲ್- KSR ಬೆಂಗಳೂರು
2.ರೈಲು ಸಂಖ್ಯೆ 12607
ಡಾ. MGR ಚೆನ್ನೈ ಸೆಂಟ್ರಲ್-KSR ಬೆಂಗಳೂರು
3.ರೈಲು ಸಂಖ್ಯೆ 12608
KSR ಬೆಂಗಳೂರು- ಡಾ. MGR ಚೆನ್ನೈ ಸೆಂಟ್ರಲ್
4. ರೈಲು ಸಂಖ್ಯೆ 12609
ಡಾ.MGR ಚೆನ್ನೈ ಸೆಂಟ್ರಲ್- ಮೈಸೂರು.
5. ರೈಲು ಸಂಖ್ಯೆ 12610
ಮೈಸೂರು- ಡಾ. MGR ಚೆನ್ನೈ ಸೆಂಟ್ರಲ್
6. ರೈಲು ಸಂಖ್ಯೆ 12027
ಡಾ.MGR ಚೆನ್ನೈ ಸೆಂಟ್ರಲ್- KSR ಬೆಂಗಳೂರು
7. ರೈಲು ಸಂಖ್ಯೆ 12028
KSR ಬೆಂಗಳೂರು - ಡಾ MGR ಚೆನ್ನೈ ಸೆಂಟ್ರಲ್
8. ರೈಲು ಸಂಖ್ಯೆ 12007
ಡಾ. MGR ಚೆನ್ನೈ ಸೆಂಟ್ರಲ್- ಮೈಸೂರು
9. ರೈಲು ಸಂಖ್ಯೆ 12008
ಮೈಸೂರು- ಡಾ. MGR ಚೆನ್ನೈ ಸೆಂಟ್ರಲ್
10. ರೈಲು ಸಂಖ್ಯೆ 06275
ಚಾಮರಾಜನಗರ- ಮೈಸೂರು