ಬೆಂಗಳೂರು ಜಲಮಂಡಳಿಗೆ ವಾಟರ್ ಟ್ಯಾಂಕರ್‌ಗಳನ್ನು ಬಾಡಿಗೆಗೆ ಕೊಡಿ; ಉತ್ತಮ ದರ ಕೊಡ್ತೇವೆಂದ ಬಿಡಬ್ಲ್ಯೂಎಸ್‌ಎಸ್‌ಬಿ

ಬೆಂಗಳೂರಿನ ಖಾಸಗಿ ನೀರು ಸರಬರಾಜು ಟ್ಯಾಂಕರ್ ಮಾಲೀಕರೇ ನಿಮ್ಮ ಟ್ಯಾಂಕರ್‌ಗಳನ್ನು ಜಲಮಂಡಳಿಗೆ ತಿಂಗಳ ಆಧಾರದಲ್ಲಿ ಬಾಡಿಗೆಗೆ ಕೊಡಿ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಮನವಿ ಮಾಡಿದೆ.

Bengaluru Private Water Supply Tanker Owners plz give Rent Your Tankers to BWSSB sat

ಬೆಂಗಳೂರು (ಮಾ.03): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಅಭಾವ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಕೊಳೆಗೇರಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಖಾಸಗಿ ವಾಟರ್ ಟ್ಯಾಂಕರ್ ಮಾಲೀಕರಿಗೆ ನಿಮ್ಮ ಟ್ಯಾಂಕರ್‌ಗಳನ್ನು ಬಾಡಿಗೆ ನೀಡುವಂತೆ ಮನವಿ ಮಾಡಿದೆ.

ಹೌದು, ಬೆಂಗಳೂರು ಜಲಮಂಡಳಿಯಲ್ಲಿ ಸುಮಾರು 200 ವಾಟರ್ ಟ್ಯಾಂಕರ್‌ಗಳಿದ್ದು, ಅವುಗಳಿಂದ ನಗರಾದ್ಯಂತ ಅಗತ್ಯವಿದ್ದಾಗ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ಅಭಾವ ಉಂಟಾಗಿರಲಿಲ್ಲ. ಈಗ ಬೆಂಗಳೂರಿನಲ್ಲಿ ನೀರಿನ ಅಭಾವ ಉಂಟಾಗುತ್ತಿದ್ದು, 1.3 ಕೋಟಿ ಜನರಿಗೆ ನೀರು ಪೂರೈಕೆ ಮಾಡುವುದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ಸರ್ಕಾರ, ಬಿಬಿಎಂಪಿ ಹಾಗೂ ಜಲಮಂಡಳಿ ಸೇರಿ ಜಂಟಿಯಾಗಿ ದರ ನಿಗದಿ ಮಾಡಲು ಮುಂದಾಗಿವೆ.

ಬೆಂಗಳೂರಿನ ಎಲ್ಲ ನೀರು ಪೂರೈಕೆ ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೊಪ್ಪಿಸಿ: ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ

ಇದಕ್ಕಾಗಿ ನಗರದಲ್ಲಿರುವ ಎಲ್ಲ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನೋಂದಣಿ ಮಾಡಿದಿದ್ದರೆ ಅಂತಹ ಟ್ಯಾಂಕರ್‌ಗಳನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಬೆಂಗಳೂರಿನ ಎಲ್ಲ ಖಾಸಗಿ ನೀರು ಸರಬರಾಜು ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೆ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಂಗಳೂರು ಜಲಮಂಡಳಿಯು ತನ್ನ ಬಳಿ ಇರುವ ನೀರು ಸರಬರಾಜು ಟ್ಯಾಂಕರ್‌ಗಳು ಬೇಸಿಗೆ ಅವಧಿಯಲ್ಲಿ ನೀರು ಪೂರೈಕೆಗೆ ಕೊರತೆ ಆಗಲಿದೆ. ಆದ್ದರಿಂದ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಹೊಂದಿರುವ ಮಾಲೀಕರು ತಮ್ಮ ಟ್ಯಾಂಕರ್‌ಗಳನ್ನು ಜಲಮಂಡಳಿಗೆ ಬಾಡಿಗೆಗೆ ನೀಡುವಂತೆ ಮನವಿ ಮಾಡಿದೆ. ಆದ್ದರಿಂದ ಆಸಕ್ತು ಕೂಡಲೇ ಜಲಮಂಡಳಿಯ ಅಧಿಕಾರಿಯನ್ನು ಸಂಪರ್ಕ ಮಾಡುವಂತೆ ಸೂಚಿಸಿದೆ.

ಬೆಂಗಳೂರಿಗೆ ಕುಡಿಯುವ ನೀರಿನ ಗ್ಯಾರಂಟಿ ಕೊಡಿ: ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹ

ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಮಾಲೀಕರು ನಿರುಪಯುಕ್ತವಾಗಿ ನೀರಿನ ಟ್ಯಾಂಕರ್‌ಗಳನ್ನು ನಿಲ್ಲಿಸಿದ್ದಲ್ಲಿ ಅವುಗಳನ್ನು ಜಲಮಂಡಳಿಗೆ ತಿಂಗಳ ಬಾಡಿಗೆಗೆ ಕೊಡಿ. ಸರ್ಕಾರದಿಂದ ನಿಗದಿ ಪಡಿಸಲಾಗುವ ದರದ ಅನ್ವದ ಬಾಡಿಗೆಯನ್ನು ಪಾವತಿ ಮಾಡಲಾಗುವುದು. ನೀರು ಸರಬರಾಜು ಟ್ಯಾಂಕರ್‌ಗಳನ್ನು ಜಲಮಂಡಳಿಗೆ ಕೊಡಲು ಇಚ್ಛಿಸಿದ ಮಾಲೀಕರು ಜಲಮಂಡಳಿಯ ನೋಡಲ್ ಅಧಿಕಾರಿ ಮುಖ್ಯ ಇಂಜಿನಿಯರ್ ಜಯಶಂಕರ್- 9845444009 ಇವರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. 

Latest Videos
Follow Us:
Download App:
  • android
  • ios