ಬೆಂಗಳೂರು[ನ.05]   ಮತ್ತೆ ಬೆಂಗಳೂರಲ್ಲಿ ಬೆಸ್ಕಾಂ ಲೋಡ್ ಶೆಡ್ಡಿಂಗ್ ಸ್ಟಾರ್ಟ್, ಶ್ರೀ ಸಾಮಾನ್ಯನಿಗೆ ಕೊಡ್ತಿದ್ದಾರೆ ಬೆಸ್ಕಾಂ ಆಫೀಸರ್ಸ್ ಶಾಕ್   ಹೌದು ಬೆಸ್ಕಾಂ ಕಾಲ್ ಸೆಂಟರ್ ಗೆ ಬಂದ ಕರೆಗಳ ವಿವರ ನೋಡಿದ್ರೆ ಶಾಕ್ ಆಗಲೇಬೇಕು.

ಒಂದೇ ವಾರದಲ್ಲಿ  54,077 ಕರೆಗಳು ಬಂದಿವೆ/ ಕಳದೆ ಶನಿವಾರ 7344 ಲೋಡ್ ಶೆಡ್ಡಿಂಗ್ ದೂರು ದಾಖಲಾಗಿದೆ. ಭಾನುವಾರ 8006 ದೂರುಗಳು ಬಂದಿವೆ. ಸೋಮವಾರ 7182, ಮಂಗಳವಾರ 8879, ಬುಧವಾರ 8738,  ಗುರುವಾರ  5507, ಶುಕ್ರವಾರ 8421 ದೂರುಗಳು ಬಂದ ಒಟ್ಟು ಬಂದಿರುವ ಕರೆಗಳು ಬರೋಬ್ಬರಿ 54,077 ಕರೆಗಳು ಬಂದಿವೆ.

ಲೋಡ್ ಶೆಡ್ಡಿಂಗೆ ಸಾರ್ವಜನಿಕರು ಗರಂಆಗಿದ್ದು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 2 ಗಂಟೆ, ಸಂಜೆ ಒಂದು ಗಂಟೆ , ರಾತ್ರಿ ಒಂದೆರಡು ಗಂಟೆ ಲೋಡ್ ಶೆಡ್ಡಿಂಗ್ ನಾಗರಿಕರ ಅನುಭವಕ್ಕೆ ಬರುತ್ತಿದೆ. ಹೆಗಡೆ ನಗರ, ಟ್ಯಾನರಿ ರೋಡ್, ಕೆಜಿ ಹಳ್ಳಿ, ಮಾಗಡಿ ರೋಡ್, ಮಾಧವಪುರ, ಶಾಂತಿನಗರ ಸೇರಿದಂತೆ ಹಲವೆಡೆ ಒಂದೇ ತೆರನಾದ ಸಮಸ್ಯೆಯಿದೆ.