ಮೊಬೈಲ್‌ನಲ್ಲೇ ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಸಂಚರಿಸಿ
ಮುಂದಿನ ತಿಂಗಳ ಅಂತ್ಯಕ್ಕೆ ಕ್ಯೂಆರ್ ಕೋಡ್ ಯೋಜನೆ ಜಾರಿ. ಮೆಟ್ರೋ, ಪೇಟಿಎಂ, ಯಾತ್ರಾ ಆ್ಯಪಲ್ಲಿ ಹಣ ಪಾವತಿಸಿ. ಬಳಿಕ ಕ್ಯೂಆರ್ ಕೋಡ್ ಡೌನ್‌ಲೋಡ್ ಮಾಡಿಕೊಳ್ಳಿ. ಮೆಟ್ರೋ ಗೇಟ್‌ನಲ್ಲಿನ ಸ್ಕಾನರ್‌ಗೆ ಕೋಡ್ ತೋರಿಸಿ
ಬೆಂಗಳೂರು (ಆ.27): ಮುಂದಿನ ತಿಂಗಳಾಂತ್ಯಕ್ಕೆ ಬೆಂಗಳೂರು ಮೆಟ್ರೋವು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಈಗಾಗಲೇ ಸ್ಮಾರ್ಚ್ ಕಾರ್ಡ್, ಟೋಕನ್ ಮತ್ತು ಪಾಸ್ ಹಾಗೆಯೇ ವಿಶೇಷ ಸಂದರ್ಭದಲ್ಲಿ ಪೇಪರ್ ಟಿಕೆಟ್ ಬಳಸಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವ ನಮ್ಮ ಮೆಟ್ರೋ ಇನ್ನೊಂದು ಹೊಸ ಮಾದರಿಯ ಟಿಕೆಟ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಸ್ಮಾರ್ಚ್ ಕಾರ್ಡ್ ಹೊಂದಿಲ್ಲದ ಪ್ರಯಾಣಿಕರು ಮೆಟ್ರೋ ನಿಲ್ದಾಣದಲ್ಲಿ ಟೋಕನ್ ಪಡೆಯಲು ಉದ್ದನೆಯ ಸಾಲಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಮೆಟ್ರೋ ಕ್ಯೂಆರ್ ಕೋಡ್ ಆಧಾರಿತ ಟಿಕೆಟಿಂಗ್ ವ್ಯವಸ್ಥೆ ಒದಗಿಸಲು ಸಜ್ಜಾಗುತ್ತಿದೆ. ಜನದಟ್ಟಣೆಯ ಅವಧಿಯಲ್ಲಿ ಮತ್ತು ಕೆಲ ನಿಲ್ದಾಣಗಳಲ್ಲಿ ಮೆಟ್ರೋ ಟೋಕನ್‌ಗಾಗಿ ಉದ್ದನೆಯ ಸಾಲು ಸೃಷ್ಟಿಆಗುತ್ತಿದೆ. ಜನದಟ್ಟಣೆ ಕಡಿಮೆ ಮಾಡಲು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಚಿಲ್ಲರೆ ನೀಡುವ ಸಮಸ್ಯೆಯೂ ಪರಿಹಾರವಾಗಲಿದೆ. ನಮ್ಮ ಮೆಟ್ರೋ ಅಪ್ಲಿಕೇಷನ್, ಪೇಟಿಎಂ ಮತ್ತು ಯಾತ್ರಾ ಅಪ್ಲಿಕೇಷನ್‌ನಲ್ಲಿ ಹಣ ಪಾವತಿಸಿ, ಕ್ಯೂಆರ್ ಕೋಡ್ ಡೌನ್‌ಲೋಡ್ ಮಾಡಬೇಕು. ಮೆಟ್ರೋ ಗೇಟ್‌ನಲ್ಲಿರುವ ಕ್ಯೂಆರ್ ಸ್ಕಾ್ಯನರ್‌ಗೆ ಡೌನ್‌ಲೋಡ್ ಮಾಡಿರುವ ಕ್ಯೂಆರ್ ಕೋಡ್ ತೋರಿಸಿ ಸರಾಗವಾಗಿ ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಬಹುದು ಎಂದು ಮೆಟ್ರೋದ ಸಂವಹನ ವಿಭಾಗದ ಹಿರಿಯ ಅಧಿಕಾರಿ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
ನಾವು ಈಗಾಗಲೇ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡುವ ಉಪಕರಣ ಮತ್ತು ವ್ಯವಸ್ಥೆಯನ್ನು ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸುತ್ತಿದ್ದೇವೆ. ಮುಂದಿನ ಕೆಲ ದಿನಗಳಲ್ಲಿ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ. ಎಲ್ಲವೂ ಸುಸೂತ್ರವಾಗಿ ಸಾಗಿದರೆ ಸೆಪ್ಟೆಂಬರ್ ಅಂತ್ಯಕ್ಕೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಸ್ಮಾರ್ಚ್ ಕಾರ್ಡ್ ಬಳಕೆದಾರರಿಗೆ ಶೇ.5ರಷ್ಟುರಿಯಾಯಿತಿ ಇರುವಂತೆ ಕ್ಯೂಆರ್ ಕೋಡ್ ಬಳಕೆದಾರರಿಗೂ ರಿಯಾಯಿತಿ ನೀಡುವ ಚಿಂತನೆ ನಡೆದಿದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಸದ್ಯ ಯಾವುದೇ ಚರ್ಚೆ ನಡೆದಿಲ್ಲ. ಯೋಜನೆ ಕಾರ್ಯಗತಗೊಳ್ಳುವ ಮುಂಚಿತವಾಗಿ ಸ್ಪಷ್ಟಚಿತ್ರಣ ಸಿಗಲಿದೆ ಎಂದು ತಿಳಿಸಿದರು.
ಮೆಟ್ರೋ ಪ್ರಯಾಣಿಕರಲ್ಲಿ ದಿನನಿತ್ಯ ಶೇ.40ರಷ್ಟುಮಂದಿ ಟೋಕನ್ ಬಳಕೆದಾರರಿದ್ದಾರೆ. ಕ್ಯೂಆರ್ ಕೋಡ್ ಆಧಾರಿತ ವ್ಯವಸ್ಥೆಯು ಟೋಕನ್ ಬಳಕೆದಾರರಿಗೆ ಉಪಯುಕ್ತವಾಗಲಿದೆ.
ಮುಂಬೈ ಮೆಟ್ರೋ ಡಿಪೋ ನಿರ್ಮಾಣಕ್ಕೆ ಮರ ಕಡಿಯಕೂಡದು: ಸುಪ್ರೀಂ ಆದೇಶ
ನವದೆಹಲಿ: ಮುಂಬೈನ ಅರೆ ಕಾಲೋನಿ ಮೆಟ್ರೋ ಡಿಪೋ ನಿರ್ಮಾಣದ ವೇಳೆ ಒಂದೂ ಮರ ಕಡಿಯದಂತೆ ಮುಂಬೈ ಮೆಟ್ರೋ ರೇಲ್ ಕಾರ್ಪೋರೇಶನ್‌ಗೆ ಸುಪ್ರೀಂ ಕೋರ್ಚ್ ಬುಧವಾರ ಕಟ್ಟುನಿಟ್ಟಾದ ಆದೇಶ ನೀಡಿದೆ.
ನ್ಯಾ. ಯು.ಯು.ಲಲಿತ್ ಅವರನ್ನೊಳಗೊಂಡ ಪೀಠ ಈ ಕುರಿತು ಇರುವ ಮಹಾರಾಷ್ಟ್ರ ಸರ್ಕಾರ ಸಲ್ಲಿಸುವ ದಾಖಲೆಗಳನ್ನು ಆ.30ರಂದು ಮರುಪರಿಶೀಲಿಸಲಾಗುವುದು ಎಂದು ತಿಳಿಸಿದೆ.
ದೇಶದಲ್ಲೇ ಮೊದಲು ಬೆಂಗಳೂರು ಮೆಟ್ರೋದಲ್ಲಿ 5ಜಿ ಪ್ರಯೋಗ ಯಶಸ್ವಿ
‘ಎಂಎಂಆರ್‌ಸಿಎಲ್ ಈಗಾಗಲೇ ನಿರ್ಮಾಣದ ವೇಳೆ ಯಾವುದೇ ಮರ ಕಡಿಯಲಾಗಿಲ್ಲ ಹಾಗೂ ಕಡಿಯುವುದಿಲ್ಲ ಎಂದು ಹೇಳಿದೆ’ ಎಂದು ಎಂಎಂಆರ್‌ಸಿಎಲ್ ಪರ ವಕೀಲರು ತಿಳಿಸಿದ್ದಾರೆ.
Namma Metro: 2 ವರ್ಷದ ಬಳಿಕ ಲಾಭದ ಹಳಿಗೆ ‘ನಮ್ಮ ಮೆಟ್ರೋ’
ಸುಪ್ರೀಂ ಆದೇಶದ ಬಳಿಕವೂ 2019ರಲ್ಲಿ ತೆರವುಗೊಳಿಸುವ ಮತ್ತು ನೆಲಸಮಗೊಳಿಸುವ ಕಾಮಗಾರಿ ವೇಳೆ ಮರ ಕಡಿಯಲಾಗಿತ್ತು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಅರೆ ಕಾಲೋನಿ ಮೆಟ್ರೋ ನಿರ್ಮಾಣದ ವೇಳೆ ಯಾವುದೇ ಮರ ಕಡಿಯದಂತೆ 2019ರಲ್ಲೇ ಸುಪ್ರೀಂ ಆದೇಶ ಹೊರಡಿಸಿತ್ತು. ಅಲ್ಲದೇ ಬಾಂಬೆ ಹೈಕೋರ್ಚ್ 2019ರಲ್ಲೇ ಅರೆ ಕಾಲೋನಿಯನ್ನು ಅರಣ್ಯ ಎಂದು ಘೋಷಿಸಲು ನಿರಾಕರಿಸಿತ್ತು ಮತ್ತು ಮೆಟ್ರೋ ಶೇಟ್ ನಿರ್ಮಾಣದ ವೇಳೆ 2600 ಮರ ಕಡಿಯದಂತೆ ಆದೇಶಿಸಿತ್ತು.