ಬೆಂಗಳೂರು ಬ್ಯಾಂಕ್ ಆಫ್ ಬರೋಡಾದಿಂದ 17 ಕೋಟಿ ರೂ. ಬಾಡಿಗೆ ಬಾಕಿ; ಬಾಗಿಲಿಗೆ ಬೀಗ ಜಡಿದ ಬಿಬಿಎಂಪಿ

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಬಿಬಿಎಂಪಿ ಕಟ್ಟಡಕ್ಕೆ 17 ಕೋಟಿ ರೂ. ಬಾಡಿಗೆ ಪಾವತಿಸದ ಬ್ಯಾಂಕ್ ಆಫ್ ಬರೋಡಾ ಮತ್ತು 2 ಕೋಟಿ ರೂ. ಬಾಡಿಗೆ ಬಾವತಿಸದ ಅಂಚೆ ಕಚೇರಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.

Bengaluru Mg road Bank of Baroda branch 17 crore rent arrears BBMP seized office sat

ಬೆಂಗಳೂರು (ಜು.06): ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಬ್ಯಾಂಕ್ ಬರೋಡಾದ ಶಾಖೆಯ ಕಟ್ಟಡ ಬಿಬಿಎಂಪಿಯದ್ದಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಬಾಡಿಗೆ ಪಾವತಿ ಮಾಡಿರಲಿಲ್ಲ. ಬರೋಬ್ಬರಿ 17.56 ಕೋಟಿ ರೂ.ಗಿಂತ ಅಧಿಕ ಬಾಕಿ ಉಳಿಸಿಕೊಂಡಿದ್ದ ಬ್ಯಾಂಕ್ ಆಫ್ ಬರೋಡಾ ಮತ್ತು 2.32 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ಅಂಚೆ ಕಚೇರಿಗಳಿಗೆ ಬಿಬಿಎಂಪಿ ಸಿಬ್ಬಂದಿ ಬೀಗ ಜಡಿದು ಲಾಕ್ ಮಾಡಿದ್ದಾರೆ.

ಬಿಬಿಎಂಪಿ ಪೂರ್ವ ವಲಯ ವ್ಯಾಪ್ತಿಯ ಎಂ.ಜಿ.ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್(ಪಿ.ಯು.ಬಿ) ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್) ಹಾಗೂ ಅಂಚೆ ಕಛೇರಿ ಇಲಾಖೆಗಳು ಬಾಕಿ ಬಾಡಿಗೆ ಪಾವತಿಸದ ಕಾರಣ ಬೀಗ ಹಾಕಲಾಗಿದೆ. ಪಿ.ಯು.ಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮಳಿಗೆ ಸಂಖ್ಯೆ: 14/15 ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್) ಮತ್ತು ಮಳಿಗೆ ಸಂಖ್ಯೆ 17ರಲ್ಲಿ ಅಂಚೆ ಕಛೇರಿ ಇಲಾಖೆಗಳಿವೆ. ಎರಡೂ ಮಳಿಗೆಗಳಿಂದ ಕಳೆದ ಒಂದೂವರೆ ವರ್ಷದಿಂದ ಪಾಲಿಕೆಗೆ ಹಣ ಪಾವತಿಯಾಗಿಲ್ಲ.

ಬೆಂಗಳೂರಿಗೆ ಬರಬೇಕಿದ್ದ ವಿಮಾನ ದೆಹಲಿಯಲ್ಲಿ ಲಾಕ್, 12 ಗಂಟೆ ವಿಮಾನದೊಳಗೆ ಹಸಿವಿನಿಂದ ಪರದಾಡಿದ ಪ್ರಯಾಣಿಕರು!

ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್): ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್)ರವರು 2011 ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಅಲ್ಲದೆ ಡಿಸೆಂಬರ್ 2022 ರಿಂದ ಯಾವುದೇ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಕೂಡ ಬಾಡಿಗೆಯನ್ನು ಪಾವತಿಸಿರುವುದಿಲ್ಲ. ಬ್ಯಾಂಕ್ ಆಫ್ ಬರೋಡಾ ಪಾಲಿಕೆಗೆ 17.56 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಇಂದು ಬೆಳಗ್ಗೆ 6.45ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.

  • ಪಾವತಿಸಬೇಕಾದ ಬಾಡಿಗೆ ಮೊತ್ತ: 7,61,70,155 ರೂ.
  • ಬಾಕಿ ಸಿ.ಎಸ್.ಟಿ./ಜಿ.ಎಸ್.ಟಿ. ಮೊತ್ತ: 1,25,98,845 ರೂ. 
  • ಬಡ್ಡಿ ಮೊತ್ತ: 8,69,22,095 ರೂ.
  • ಒಟ್ಟು ಬಾಕಿ ಮೊತ್ತ: 17,56,91,095 ರೂ. 

ಅಂಚೆ ಕಛೇರಿ: ಅಂಚೆ ಕಛೇರಿ ಇಲಾಖೆಯವರು 2006 ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಈ ಬಗ್ಗೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಿ ಪರಿಷ್ಕೃತ ಬಾಡಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದ್ದರೂ ಬಾಡಿಗೆಯನ್ನು ಪಾವತಿಸಿರುವುದಿಲ್ಲ. ಅಂಚೆ ಕಛೇರಿಯಿಂದ 2.32 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಇಂದು ಬೆಳಗ್ಗೆ 6.45ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.

ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ ಓದಿದವಳಿಗೆ ಶೋಕಿಯೇ ಮುಳುವಾಯಿತಾ?

  • ಪಾವತಿಸಬೇಕಾದ ಬಾಡಿಗೆ ಮೊತ್ತ: 93,27,168 ರೂ. 
  • ಬಾಕಿ ಸಿ.ಎಸ್.ಟಿ./ಜಿ.ಎಸ್.ಟಿ. ಮೊತ್ತ 10,09,124 ರೂ. 
  • ಬಡ್ಡಿ ಮೊತ್ತ: 1,29,27,119 ರೂ. 
  • ಒಟ್ಟು ಬಾಕಿ ಮೊತ್ತ: 2,32,63,410 ರೂ.
Latest Videos
Follow Us:
Download App:
  • android
  • ios