Asianet Suvarna News Asianet Suvarna News

ಬೆಂಗಳೂರಿಗೆ ಬರಬೇಕಿದ್ದ ವಿಮಾನ ದೆಹಲಿಯಲ್ಲಿ ಲಾಕ್, 12 ಗಂಟೆ ವಿಮಾನದೊಳಗೆ ಹಸಿವಿನಿಂದ ಪರದಾಡಿದ ಪ್ರಯಾಣಿಕರು!

 ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಸ್ಪೈಸ್‌ಜೆಟ್ ಏರ್‌ಲೈನ್ಸ್‌ ವಿಮಾನದಲ್ಲಿ ಸಿಬಂದಿಗಳ ಎಡವಟ್ಟಿನಿಂದ ಪ್ರಯಾಣಿಕರು ಬರೋಬ್ಬರಿ 12 ಕ್ಕೂ ಅಧಿಕ ಗಂಟೆಗಳ ಕಾಲ ವಿಮಾನದಲ್ಲೇ ಲಾಕ್‌ ಆಗಿ ಹಸಿವಿನಿಂದ ಪರದಾಡಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Bengaluru SpiceJet Flight Passengers were locked inside the flight for more than twelve hours at delhi  airport gow
Author
First Published Jul 6, 2024, 12:35 PM IST

ನವದೆಹಲಿ(ಜು.6):  ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಸ್ಪೈಸ್‌ಜೆಟ್ ಏರ್‌ಲೈನ್ಸ್‌ ವಿಮಾನದಲ್ಲಿ ಸಿಬಂದಿಗಳ ಎಡವಟ್ಟಿನಿಂದ ಪ್ರಯಾಣಿಕರು ಬರೋಬ್ಬರಿ 12 ಕ್ಕೂ ಅಧಿಕ ಗಂಟೆಗಳ ಕಾಲ ವಿಮಾನದಲ್ಲೇ ಲಾಕ್‌ ಆಗಿ ಹಸಿವಿನಿಂದ ಪರದಾಡಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ನೇರಳೆ ಮಾರ್ಗ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಬಿಎಂಆರ್‌ಸಿಎಲ್‌!

ಜು.5 ರ ಶುಕ್ರವಾರ ದೆಹಲಿಯಿಂದ ಬೆಂಗಳೂರಿಗೆ ಸಂಜೆ 7.40ಗಂಟೆಗೆ ಟೇಕಾಫ್ ಆಗಬೇಕಿದ್ದ  ಸ್ಪೈಸ್ ಜೆಟ್ ಏರ್‌ಲೈನ್ಸ್‌ ನ ವಿಮಾನ SG 8151ನ ಸಿಬ್ಬಂದಿಯಿಂದ ಈ ಎಡವಟ್ಟು ಆಗಿದೆ. ವಿಮಾನದ ಪೈಲೆಟ್‌ ಬರದಿರುವುದೇ ಇಷ್ಟು ಅವಾಂತರಕ್ಕೆ ಕಾರಣ ಎಂದು ತಿಳಿದುಬಂದಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಸುಮಾರು 60 ಪ್ರಯಾಣಿಕರು ಸತತ 12 ಗಂಟೆಗೂ ಅಧಿಕ ಸಮಯಗಳ ಕಾಲ  ವಿಮಾನದೊಳಗೆ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ತಾಂತ್ರಿಕ ದೋಷ ಎಂದು ಶುಕ್ರವಾರ ಸಂಜೆಯಿಂದ ಬೆಳಗ್ಗಿನವರೆಗೂ ದೆಹಲಿ ಏರ್‌ಪೋರ್ಟ್‌ನಲ್ಲೇ  ವಿಮಾನವನ್ನು ನಿಲ್ಲಿಸಿ ಪ್ರಯಾಣಿಕರನ್ನು ಹೊರಗೆ ಬಿಡದೆ ಎಡವಟ್ಟು ಮಾಡಿದ್ದಾರೆ.

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಜಯನಗರ ಮೂಲದ ವಿವಾಹಿತೆ ಟೆಕ್ಕಿ ಬೆಂಗಳೂರಿನಲ್ಲಿ ಆತ್ಮಹತ್ಯೆ!

ವಿಮಾನದಲ್ಲಿ ಲಾಕ್ ಆದ 60 ಕ್ಕೂ ಅಧಿಕ ಪ್ರಯಾಣಿಕರಿದ್ದು ಅದರಲ್ಲಿ ವಿದೇಶದಿಂದ ಬಂದವರು,  ವೃದ್ದರು, ಮಕ್ಕಳು, ಸೇರಿದಂತೆ ಮಹಿಳೆಯರು ಸಹಿತ ಇದ್ದು ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ಪ್ರಯಾಣಿಕರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡದೆ ಬೇಜವಾಬ್ದಾರಿ ಮೆರೆದಿದ್ದು, ಬೆಳಗ್ಗಿನವರೆಗೆ ಪ್ರಯಾಣಿಕರು ಹಸಿವಿನಿಂದ ಪರದಾಡಿದರು.ಪ್ರಯಾಣಿಕರು ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಫ್ಲೈಟ್ ಟಿಕೆಟ್ ಖರೀದಿಸಿದರೂ ಸಮರ್ಪಕ ಸೇವೆ ನೀಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದು ಸ್ಪೈಸ್‌ ಜೆಟ್‌ ಸಿಬಂದಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios