Asianet Suvarna News Asianet Suvarna News

ಬೆಂಗಳೂರು: ಸೆಕ್ಸ್‌ಗೆ ಒಪ್ಪದ ಮಹಿಳೆಗೆ ಚಾಕುವಿನಿಂದ ಇರಿದ ಕಿರಾತಕ

ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಲೈಂಗಿಕ ಕ್ರಿಯೆಗೆ ಒಪ್ಪದ ಪರ ಸ್ತ್ರೀ ಮೇಲೆ ಏಕಾಏಕಿ ಹಲ್ಲೆ ಮಾಡಿದ ಆರೋಪಿ ಚಾಕುವುನಿಂದ ಮನಸೋ ಇಚ್ಛೆ ಇರಿದಿದ್ದಾನೆ. 

Bengaluru: Man Stabs Woman for Refusing Sex
Author
Bengaluru, First Published Oct 18, 2018, 2:08 PM IST
  • Facebook
  • Twitter
  • Whatsapp

ಬೆಂಗಳೂರು(ಅ.18) ಮಹಿಳೆ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದ್ದಕ್ಕೆ ಆಕೆಗೆ ಚಾಕುವಿನಿಂದ ಇರಿದ ವ್ಯಕ್ತಿ ಆರ್ ಆರ್ ನಗರದ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ರಾಘವೇಂದ್ರ ಶಾಸ್ತ್ರಿ ಅಲಿಯಾಸ್​ ರಘು ಪೊಲೀಸರಿಗೆ ಶರಣಾಗಿರುವ ಆರೋಪಿ. ನೈಸ್ ರಸ್ತೆ ಬಳಿ ವಾಸವಿರುವ ಮಹಿಳೆವೋರ್ವಳಿಗೆ ರಘು ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ದೈಹಿಕ ಸಂಬಂಧ ಇತ್ತು. ಆದರೆ ಇತ್ತೀಚೆಗೆ ಮಹಿಳೆ ದೈಹಿಕ ಸಂಪರ್ಕ ಬೇಡ ಎಂದು ವಾದಿಸತೊಡಗಿದ್ದಳು. ಇದರಿಂದ ಕುಪಿತಗೊಂಡ ರಘು ಚಾಕುವಿನಿಂದ 10 ಬಾರಿ ಇರಿದಿದ್ದಾನೆ.

ರಘು ಈ ಹಿಂದೆ ವಿವಾಹಿತ ಮಹಿಳೆಯನ್ನೇ ಪ್ರೀತಿಸಿ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ. ಆದರೆ ಇಬ್ಬರ ನಡುವೆ  ಕಾರಣಾಂತರಗಳಿಂದ ಸಂಪರ್ಕ ಕಡಿತವಾಗಿತ್ತು. ಆದರೆ ಈಗ ಮತ್ತೆ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ದ. ಹಣ ನೀಡುತ್ತೇನೆ ಬನಶಂಕರಿಗೆ ಬಾ ಎಂದು ಕರೆದಿದ್ದ. ಆದರೆ ಮಹಿಳೆ ಅದಕ್ಕೆ ನಿರಾಕರಿಸಿ ಆರ್​ಆರ್ ನಗರದ ಬಳಿ ಇರುವ ಆರ್ಮುಗಂ ದೇವಸ್ಥಾನಕ್ಕೆ ಕರೆಸಿಕೊಂಡಿದ್ದಳು.

ನಂತರ ನೈಸ್ ರಸ್ತೆಯ ಬ್ರಿಡ್ಜ್ ಬಳಿ ಬಂದಿದ್ದ ಆಕೆಯನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಆದರೆ ಆಕೆ ನಿರಾಕರಿಸಿದಾಗ ಏಕಾಏಕಿ ಹಲ್ಲೆ ನಡೆಸಿ  ಎದೆ, ಹೊಟ್ಟೆಗೆ 10ಕ್ಕೂ ಹೆಚ್ಚು ಬಾರಿ ಚುಚ್ಚಿದ್ದು, ಚಾಕುವನ್ನು ಅಲ್ಲಿಯೇ ಬಿಟ್ಟು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಬಂಧಿತ ರಘು ಗೆ  ಪತ್ನಿ, ಇಬ್ಬರು ಮಕ್ಕಳಿದ್ದಾರೆ.


 

Follow Us:
Download App:
  • android
  • ios