Asianet Suvarna News Asianet Suvarna News

Bengaluru: ಕೆ.ಆರ್.ಪುರ- ಬೈಯಪ್ಪನಹಳ್ಳಿಗೆ ಮೊದಲ ಮೆಟ್ರೋ ಸಂಚಾರ ಯಶಸ್ವಿ

ಬೆಂಗಳೂರಿನ ಬಿಎಂಆರ್‌ಸಿಎಲ್‌ನ ನೇರಳೆ ಮಾರ್ಗದ ಬೈಯಪ್ಪನಹಳ್ಳಿಯಿಂದ ಕೆಆರ್‌.ಪುರವರೆಗೆ ಮೊದಲ ಮೆಟ್ರೋ ರೈಲು ಸಂಚಾರ ಯಶಸ್ವಿಯಾಗಿದೆ.

Bengaluru KR Puram to Baiyappanahalli first metro trail run successful sat
Author
First Published Jul 26, 2023, 7:15 PM IST

ಬೆಂಗಳೂರು (ಜು.26): ಸಿಲಿಕಾನ್‌ ಸಿಟಿ ಬೆಂಗಳೂರಿನ ಬಿಎಂಆರ್‌ಸಿಎಲ್‌ನ ನೇರಳೆ ಮಾರ್ಗದ ಬೈಯಪ್ಪನಹಳ್ಳಿಯಿಂದ ಕೆಆರ್‌.ಪುರವರೆಗೆ ಮೊದಲ ಮೆಟ್ರೋ ರೈಲು ಸಂಚಾರ ಯಶಸ್ವಿಯಾಗಿದೆ. ಇನ್ನು ಆಗಸ್ಟ್‌ ತಿಂಗಳ ಕೊನೆಯಲ್ಲಿ ಈ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ  ಸೇವೆ ಆರಂಭಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಟ್ರಾಪಿಕ್‌ ಮುಕ್ತ ಸಂಚಾರಕ್ಕೆ ಸಹಾಯಕಾರಿ ಆಗಿರುವ ಮೆಟ್ರೋ ಸಂಚಾರದಲ್ಲಿ ಈಗಾಗಲೇ ಲಿಂಕಿಂಗ್‌ ಮಾರ್ಗವಾಗಿ ಬಾಕಿ ಉಳಿದುಕೊಂಡಿದ್ದ ಬೈಯಪ್ಪನಹಳ್ಳಿಯಿಂದ ಕೆ.ಆರ್. ಪುರಂ ವರೆಗೆ ಮೆಟ್ರೋ ರೈಲು ಪ್ರಾಯೋಗಿಕ ಸಂಚಾರವನ್ನು ಬುಧವಾರ ಹಮ್ಮಿಕೊಳ್ಳಲಾಗುತ್ತು. ಆದ್ದರಿಂದ ಬುಧವಾರ ಸಂಜೆ ವೇಳೆ ನಮ್ಮ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂವರೆಗೆ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭಿಸಲಾಯಿತು. ನಿಧಾನವಾಗಿ ಸಂಚಾರ ಆರಂಭಿಸಿದ ಮೆಟ್ರೋ ರೈಲು ಯಶಸ್ವಿಯಾಗಿ ನಿಗದಿತ ನಿಲ್ದಾಣವನ್ನು ತಲುಪಿದೆ. ಈ ಮೂಲಕ ಮೆಟ್ರೋ ಟ್ರೇಲ್‌ ರನ್‌ ಯಶಸ್ವಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ರೈಲು ಸಂಚಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳಿದೆ. ಇದಾದ ನಂತರ ಕೆ.ಆರ್. ಪುರಂನಿಂದ ಕೆಂಗೇರಿವರೆಗೆ ಒಂದೇ ರೈಲಿನಲ್ಲಿ ಸುಲಭವಾಗಿ, ಟ್ರಾಫಿಕ್‌ ಮುಕ್ತವಾಗಿ ಹಾಗೂ ಕಡಿಮೆ ಅವಧಿಯಲ್ಲಿ ಪ್ರಯಾಣ ಮಾಡಬಹುದು. 

Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

ಐಟಿ ಬಿಟಿ ಉದ್ಯೋಗಿಗಳಿಗೆ ಉಪಯೋಗ: ಬೈಯಪ್ಪನಹಳ್ಳಿಯಿಂದ ಕೆ ಆರ್ ಪುರಂ ನಡುವಿನ ಮಿಸ್ಸಿಂಗ್ ಲಿಂಕ್ ಟ್ರಯಲ್ ರನ್ ಆರಂಭವಾಗಿದೆ. ಸುರಕ್ಷಾ ಪ್ರಾಧಿಕಾರ ಅಧಿಕಾರಿಗಳ ಸಮ್ಮುಖದಲ್ಲಿ ಟ್ರಯಲ್ ರನ್ ಮಾಡಲಾಗಿದೆ. ಇನ್ನು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಆಗಸ್ಟ್ ಮೂರನೇ ವಾರದಲ್ಲಿ ಮಿಸ್ಸಿಂಗ್ ಲಿಂಕ್ ಮೇಟ್ರೋ ಮಾರ್ಗ ಆರಂಭಿಸುವುದಾಗಿ ಹೇಳಿದ್ದರು. ಈ‌ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಕಾರ್ಯಕ್ಕೆ ಚುರುಕು ನೀಡಲಾಗಿತ್ತ. ಇಂದು ಅಂತಿಮ ಹಂತದ ತಯಾರಿ ಮಾಡಲಾಗಿದ್ದು, ಪ್ರಾಯೋಗಿಕ ಸಂಚಾರವನ್ನೂ ಮಾಡಲಾಗಿದೆ. ಈಗಾಗಲೇ ವೈಟ್ ಫೀಲ್ಡ್‌ನಿಂದ ಬೈಯಪ್ಪನಹಳ್ಳಿ‌ ಮಾರ್ಗದಲ್ಲಿ ಸಂಚರಿಸೋ ಮಂದಿ ಕೆಆರ್ ಪುರಂ ನಲ್ಲಿ ಇಳಿದು, ಇತರ ಸಾರಿಗೆಯನ್ನ ಅವಲಂಬಿಸಬೇಕಿತ್ತು. ಆದರೆ, ಈಗ ಬೈಯಪ್ಪನಹಳ್ಳಿ ಹಾಗೂ ಕೆ.ಆರ್.ಪುರಂ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ವೈಟ್‌ಫೀಲ್ಡ್‌ನಿಂದ ಕೆಂಗೇರಿಗೆ ನೇರವಾಗಿ ಹೋಗಬಹುದು. ಆದರೆಮ ಇದಕ್ಕೆ ಇನ್ನಷ್ಟು ದಿನಗಳು ಕಾಯಬೇಕಾಗುತ್ತದೆ. 

43.5 ಕಿ.ಮೀ. ನೇರಳೆ ಮಾರ್ಗ: 'ಮಿಸ್ಸಿಂಗ್‌ ಲಿಂಕ್‌' ಎನ್ನಿಸಿಕೊಂಡಿರುವ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಜೊತೆಗೆ ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿದೆ. ಆಗಸ್ಟ್‌ ಅಂತ್ಯ ಅಥವಾ ಸೆಪ್ಟೆಂಬರ್‌ ಎರಡನೇ ವಾರದೊಳಗೆ ಜನತೆ ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ 2.1 ಕಿ.ಮೀ. ಹಾಗೂ ಕೆಂಗೇರಿ-ಚಲ್ಲಘಟ್ಟನಡುವಿನ 1.9 ಕಿ.ಮೀ. ಮೆಟ್ರೋ ಕಾಮಗಾರಿ ಬಾಕಿ ಇದೆ. ಇವೆರಡೂ ಪೂರ್ಣಗೊಂಡಲ್ಲಿ ಚಲ್ಲಘಟ್ಟ-ವೈಟ್‌ಫೀಲ್ಡ್‌ವರೆಗಿನ 43.5 ಕಿ.ಮೀ. ನೇರಳೆ ಮಾರ್ಗ ಪೂರ್ಣವಾದಂತಾಗಲಿದೆ. 

Bengaluru : ಮೆಟ್ರೋ ಪ್ರಯಾಣಿಕರಿಗೆ ಶಾಕ್‌, ಒಂದು ತಿಂಗಳು ಸಂಚಾರ ಸ್ಥಗಿತ

ಆಗಸ್ಟ್‌ 9ರವರೆಗೆ ಬೆಳಗ್ಗೆ ಮೆಟ್ರೋ ಸಂಚಾರ ಸ್ಥಗಿತ: ಬೆಂಗಳೂರು ನೇರಳೆ ಮಾರ್ಗದಲ್ಲಿನ ಬೈಯಪ್ಪನಹಳ್ಳಿ, ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕವನ್ನು ಕಲ್ಪಿಸಲು ಸಿಗ್ನಲಿಂಗ್ ಹಾಗೂ ಇತರ ಸಂಬಂಧಿತ ಕಾಮಗಾರಿ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜು.10 ರಿಂದ ಆ.09ರವರೆಗೆ ಬೈಯಪ್ಪನಹಳ್ಳಿ- ಎಸ್.ವಿ. ರಸ್ತೆ ಹಾಗೂ ಕೃಷ್ಣರಾಜಪುರ- ವೈಟ್‌ಫೀಲ್ಡ್ (ಕಾಡುಗೋಡಿ) ಮಾರ್ಗಗಳ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಬೆಳಿಗ್ಗೆ 05.00 ಗಂಟೆಯಿಂದ 700 ಗಂಟೆವರೆಗೆ ಬೈಯಪ್ಪನಹಳ್ಳಿ ಮತ್ತು ಎಸ್.ವಿ ರಸ್ತೆ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆಯ ಮೆಟ್ರೋ ರೈಲು ಸೇವೆ ಸ್ಥಗಿತಗೊಳಿಸಲಾಗುತ್ತದೆ.  ಬೆಳಿಗ್ಗೆ 7.00 ಗಂಟೆಯ ನಂತರ, ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳ ನಡುವೆ ವಾಣಿಜ್ಯ ರೈಲು ಸೇವೆಗಳು ಎಂದಿನಂತೆ ರಾತ್ರಿ 11.00 ಗಂಟೆಯವರೆಗೆ ಲಭ್ಯವಿರುತ್ತವೆ.

Latest Videos
Follow Us:
Download App:
  • android
  • ios