ಬೆಂಗಳೂರು ಜಲಮಂಡಳಿಯು (BWSSB) ಫೆಬ್ರವರಿ 5 ಮತ್ತು 6 ರಂದು ಸಾರಕ್ಕಿಯಲ್ಲಿ ತುರ್ತು ಪೈಪ್‌ಲೈನ್ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ದಕ್ಷಿಣ ಮತ್ತು ಕೇಂದ್ರ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು (ಫೆ.02): ರಾಜಧಾನಿ ಬೆಂಗಳೂರಿನ ನಾಗರಿಕರು ಫೆಬ್ರವರಿ 5 ಮತ್ತು 6 ರಂದು ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ನಗರದ ಪ್ರಮುಖ ಬಡಾವಣೆಗಳಲ್ಲಿ ಎರಡು ದಿನಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಾಮಗಾರಿಯ ಹಿನ್ನೆಲೆ:
ಬೆಂಗಳೂರಿನ ಸಾರಕ್ಕಿ ಎಂಬಲ್ಲಿ ಹಳೆಯದಾದ 1200 ಮಿ.ಮೀ ವ್ಯಾಸದ ಎರಕಹೊಯ್ದ ಕಬ್ಬಿಣದ (Cast Iron) ಪೈಪ್‌ಲೈನ್‌ಗಳ ಬದಲಾಗಿ, ಹೊಸದಾಗಿ 1200 ಮಿ.ಮೀ, 900 ಮಿ.ಮೀ ಮತ್ತು 700 ಮಿ.ಮೀ ವ್ಯಾಸದ ಮೈಲ್ಡ್ ಸ್ಟೀಲ್ (MS) ಪೈಪ್‌ಲೈನ್‌ಗಳನ್ನು ಅಳವಡಿಸುವ ಮತ್ತು ಜೋಡಿಸುವ (Linking) ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ 1ನೇ ಮತ್ತು 2ನೇ ಹಂತದ ಜಲರೇಚಕ ಯಂತ್ರಗಾರಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ.
ಸಮಯ ಮತ್ತು ಅವಧಿ:
ಫೆಬ್ರವರಿ 5ರ ಗುರುವಾರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 6ರ ಶುಕ್ರವಾರ ಬೆಳಗ್ಗೆ 6 ಗಂಟೆಯವರೆಗೆ ಸತತ 24 ಗಂಟೆಗಳ ಕಾಲ ನೀರಿನ ಪೂರೈಕೆ ಇರುವುದಿಲ್ಲ. ಈ ಅವಧಿಯಲ್ಲಿ ಪಂಪಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸದ ಕಾರಣ ಪೂರೈಕೆ ಸಂಪೂರ್ಣ ವ್ಯತ್ಯಯವಾಗಲಿದೆ.
ನೀರು ಪೂರೈಕೆ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:
ಈ ಕಾಮಗಾರಿಯಿಂದಾಗಿ ದಕ್ಷಿಣ ಮತ್ತು ಕೇಂದ್ರ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ಪಟ್ಟಿಯಲ್ಲಿರುವ ಪ್ರಮುಖ ಪ್ರದೇಶಗಳೆಂದರೆ:
ಮಾಗಡಿ ರಸ್ತೆ, ಪದ್ಮನಾಭ ನಗರ, ಕುಮಾರಸ್ವಾಮಿ ಬಡಾವಣೆ (1ನೇ ಮತ್ತು 2ನೇ ಹಂತ), ಬನಶಂಕರಿ 5ನೇ ಹಂತ, ಜೆಪಿ ನಗರ (1, 2 ಮತ್ತು 3ನೇ ಹಂತ), ಜಯನಗರ (4, 5, 6, 7, 8, 9ನೇ ಬ್ಲಾಕ್ ಹಾಗೂ ಟಿ ಬ್ಲಾಕ್), ಕೋರಮಂಗಲ (2, 4, 5, 6, 7 ಮತ್ತು 8ನೇ ಬ್ಲಾಕ್), ಮಡಿವಾಳ, ಶಾಂತಿನಗರ, ಆಡುಗೋಡಿ, ಹೊಸಕೆರೆಹಳ್ಳಿ, ವಿಲ್ಸನ್ ಗಾರ್ಡನ್, ಚಾಮರಾಜಪೇಟೆ, ಶ್ರೀನಗರ, ಕನಕಪುರ ರಸ್ತೆ, ಉತ್ತರಹಳ್ಳಿ, ಮತ್ತು ಎಂ.ಜಿ. ರಸ್ತೆ ಆಸುಪಾಸಿನ ಪ್ರದೇಶಗಳು. ಇದಲ್ಲದೆ ಸೆಂಟ್ ಜಾನ್ ಆಸ್ಪತ್ರೆ, ನಿಮಾನ್ಸ್, ಕಮಾಂಡೋ ಆಸ್ಪತ್ರೆಗಳಂತಹ ಪ್ರಮುಖ ವೈದ್ಯಕೀಯ ಸಂಸ್ಥೆಗಳ ಸುತ್ತಮುತ್ತಲ ಪ್ರದೇಶಗಳಲ್ಲೂ ನೀರಿನ ಸಮಸ್ಯೆ ಉಂಟಾಗಲಿದೆ.
ಇಲ್ಲಿವೆ ಇನ್ನಷ್ಟು ಏರಿಯಾಗಳು
ಮಾಗಡಿ ರಸ್ತೆ, ಕದ್ರೆನಹಳ್ಳಿ, ಮಿನಜ್ ನಗರ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭ ನಗರ,ಆರ್.ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲ್ ನಗರ, ಇಸ್ರೋ ಬಡಾವಣೆ, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಇಲಿಯಾಸ್ ನಗರ, ಪೂರ್ಣ ಪ್ರಜ್ಞಾ ಲೇಔಟ್, ಉತ್ತರಹಳ್ಳಿ, ಕೆ.ಎಸ್.ಆರ್.ಟಿ.ಸಿ ಬಡಾವಣೆ, ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ, ಎ.ಜಿ.ಎಸ್ ಬಡಾವಣೆ, ಸಾರ್ವಭೌಮನಗರ ಸುಬ್ರಮಣ್ಯಪುರ, ಬಿ.ಹೆಚ್.ಸಿ.ಎಸ್ ಬಡಾವಣೆ, ಕೆನರಾ ಬ್ಯಾಂಕ್ ಕಾಲೋನಿ, ಕಾಕತೀಯ ನಗರ,ಸುದಗುಂಟ ಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್, ವೆಂಟೇಶ್ವರ ಲೇಔಟ್, ಬೃಂದಾವನ ಲೇಔಟ್, ಮಡಿವಾಳ, ಚಿನ್ನಮ್ಮ ಲೇಔಟ್, ಕೋರಮಂಗಲ 2,4,5,6,7 &8 ನೇ ಬ್ಲಾಕ್, ಚಿಕ್ಕಆಡುಗೋಡಿ, ಸೆಂಟ್ ಜಾನ್ ಆಸ್ಪತ್ರೆ, ರಾಜೇಂದ್ರ ನಗರ, ಆಡುಗೋಡಿ, ಜಾನ್ಸ್‌ನ್ ಮಾರ್ಕೆಟ್, ಸಿಎಲ್‌ಆರ್, ಶಾಂತಿನಗರ, ಲಾಗ್ ಪೋರ್ಡ್ ಟೌನ್, ಎಂಜಿ ರಸ್ತೆ, ರಿಚ್‌ಮಂಡ್ ಟೌನ್ , ನೀಲಸಂದ್ರ, ಅಶೋಕ್ ನಗರ, ಆಸ್ಟಿನ್ ಟೌನ್, ವಿವೇಕ್ ನಗರ, ಈಜಿಪುರ, ದೊಮ್ಮಲೂರು ಲೇಔಟ್, ದೊಮ್ಮಲೂರು ವಿಲೇಜ್, ಕೋಡಿಹಳ್ಳಿ, ಕಮಾಂಡೋ ಆಸ್ಪತ್ರೆ, ಜೋಗಿಪಾಳ್ಯ, ಕೇಂಬ್ರಿಡ್ಜ್ ಲೇಔಟ್ ಚಾಮರಾಜಪೇಟೆ, ಶ್ರೀನಗರ ಬಿಎಸ್‌ಕೆ 1ನೇ ಹಂತ, ಅಶೋಕ್ ನಗರ ಪೈಪ್ ಲೈನ್ ರಸ್ತೆ, ಜಯನಗರ 4ನೇ &ʼಟಿʼ ಬ್ಲಾಕ್, ತಿಲಕ್ ನಗರ , ಮಾಧವನ ಪಾರ್ಕ್ , ಹೊಂಬೇಗೌಡ ನಗರ,ಲಕ್ಕಸಂದ್ರ, ಶಾಂತಿನಗರ ಲೇಔಟ್, ಜೆಕೆಪುರ, ಅಕ್ಕಿತಿಮ್ಮನ ಹಳ್ಳಿ, ಜಗಜೀವನರಾಮನಗರ, ರುದ್ರಪ್ಪ ಗಾರ್ಡನ್, ವಾಲ್ಮೀಕಿ ನಗರ, ಮಾವಳ್ಳಿ, ಶಂಕರಪುರಂ, ಕೆಂಪೇಗೌಡನಗರ, ಸುಧಾಮನಗರ, ಬನಗಿರಿ, ಜಯನಗರ, 6,7 & 8ನೇ ಬ್ಲಾಕ್, ಯಡಿಯೂರು, ಇಟ್ಟಮಡು, ಎಸ್‌ಬಿಎಂ ಕಾಲೋನಿ, ಹೊಸಕೆರೆಹಳ್ಳಿ, ಐಟಿಐ ಲೇಔಟ್, ಶ್ರೀನಿವಾಸ ನಗರ, ಡಿಸೋಜಾ ನಗರ, ಕೆರೆಕೋಡಿ, ಮುನೇಶ್ವರ ನಗರ, ಜೆಪಿನಗರ 1, 2 & 3ನೇ ಹಂತ, ಮಾರೇನಹಳ್ಳಿ, ಜಯನಗರ 5& 9ಬ್ಲಾಕ್, ಭೈರಸಂದ್ರ, ಎಲ್ ಐ ಸಿ ಕಾಲೋನಿ, ಸಿದ್ದಾಪುರ, ವಿಲ್ಸ್‌ನ್ ಗಾರ್ಡನ್, ನಿಮಾನ್ಸ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಜಲಮಂಡಳಿ ಮನವಿ:
ಕಾಮಗಾರಿಯ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಜಲಮಂಡಳಿಯು ಮುನ್ನೆಚ್ಚರಿಕೆ ನೀಡಿದೆ. "ನಾಗರಿಕರು ಕಾಮಗಾರಿ ಆರಂಭವಾಗುವ ಮೊದಲೇ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಂಡು ಮಿತವಾಗಿ ಬಳಸಬೇಕು. ಮಂಡಳಿಯೊಂದಿಗೆ ಸಹಕರಿಸಬೇಕು" ಎಂದು ಅಧ್ಯಕ್ಷರು ಮನವಿ ಮಾಡಿದ್ದಾರೆ. ಕಾಮಗಾರಿ ಮುಗಿದ ನಂತರ ನೀರು ಸರಬರಾಜು ಹಂತಹಂತವಾಗಿ ಸಹಜ ಸ್ಥಿತಿಗೆ ಮರಳಲಿದೆ.


